– ಸುವರ್ಣಾ ಬಾಬು
ಸರ್ ನನ್ನ ಹೆಸರು ಸುವರ್ಣ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಅವಿಭಜಿತ ಕೋಲಾರ ಜಿಲ್ಲೆ
ಶ್ರೀನಿವಾಸಪುರ ತಾಲ್ಲೂಕಿನಲ್ಲಿ ವಾಸವಾಗಿದ್ದೇನೆ. ಈಗ ತಮಗೆ ಪತ್ರ ಬರೆಯುವ
ವಿಷಯವೇನೆಂದರೆ ಧಾರಾವಾಹಿಗಳನ್ನು ನೋಡುವುದು ಶುದ್ಧ ಕಾಲಹರಣ ಎಂದು ಭಾವಿಸಿ ಕಳೆದ 20
ವರ್ಷಗಳಿಂದ ಧಾರಾವಾಹಿಗಳನ್ನು ನೋಡಬಾರದು ಎಂದು ನನಗೆ ನಾನೇ ಹಾಕಿಕೊಂಡ ನಿಯಮ
ಯಜಮಾನರು ಮಕ್ಕಳ ಮೇಲೆಯೂ ನಿಯಮ ಹೇರಿದ್ದೆ ಎನ್ನಿ . ನಿಮ್ಮ ಮಹಾಪರ್ವ
ದಾರಾವಾಹಿಯಿಂದಾಗಿ ನನ್ನ ನಿಯಮ ಮುರಿದಿದೆ. ಮೂಡಬಿದರೆಯ ಆಳ್ವಾಸ್ ಕಾಲೇಜಿನಲ್ಲಿ
ಓದುತ್ತಿರುವ ನನ್ನ ಮಕ್ಕಳು ರಜೆಗೆ ಮನೆಗೆ ಬಂದಾಗ ಅಮ್ಮ ಸೀರಿಯಲ್ ನೋಡುತ್ತಿದ್ದಾರೆ
ಎನ್ನುವುದೇ ಅವರಿಗೊಂದು ಸೋಜಿಗದ ವಿಷಯವಾಗಿತ್ತು ಅದನ್ನು ಅವರು ಸ್ನೇಹಿತರಿಗೆ ಮನೆಗೆ
ಬಂದವರಿಗೆ ಹೇಳಿದ್ದೇ ಹೇಳಿದ್ದು. ನಿಮ್ಮ ಧಾರಾವಾಹಿಗಳ ಬಗ್ಗೆ ಪತ್ರಿಕೆಗಳಲ್ಲಿ
ಓದಿದ್ದೆ ಮಾಧ್ಯಮಗಳಲ್ಲಿ ಓದಿದ್ದೆ . ಆಲೂರು ಚಂದ್ರಶೇಖರ ಅವರ ಪುಸ್ತಕ ಬಿಡುಗಡೆ
ಸಮಾರಂಭದಲ್ಲಿ ನಿಮ್ಮ ಜೊತೆ ಫೋಟೋ ಕೂಡ ತೆಗೆಸಿಕೊಂಡಿದ್ದೆ.ಮಹಾಪರ್ವ ಪ್ರಾರಂಭವಾದ
2ನೇದಿನ ಸ್ಪರ್ಶ( ಸಮುದ್ಯತಾ) ಫೇಸ್ ಬುಕ್ ನಲ್ಲಿ ಧಾರಾವಾಹಿಯಲ್ಲಿ ನಟಿಸಿರುವ ಬಗ್ಗೆ
ಆಲೂರರು ಬರೆದಿದ್ದರು. ಅವಳನ್ನು ನೋಡುವ ಸಲುವಾಗಿ ಮಹಾಪರ್ವ ನೋಡಲು ಶುರು ಮಾಡಿದ ನಾನು
ಅಂದಿನಿಂದ ಇಂದಿನ ವರೆಗೆ ಎಲ್ಲಾ ಕಂತುಗಳನ್ನೂ ನೋಡಿದ್ದೇನೆ . ನನಗೆ ಅದು ಧಾರಾವಾಹಿ
ಎನ್ನಿಸಿಲ್ಲ ನನ್ನ ಮನೆಯಲ್ಲಿ ನನ್ನ ಸುತ್ತಲಿನ ಸಮಾಜದಲ್ಲಿ ನಡೆಯುತ್ತಿರುವ
ಘಟನೆಗಳೇನೂ ಎನ್ನುವಂತೆ ಭಾಸವಾಗುತ್ತದೆ. ಇತ್ತೀಚೆಗೆ ಕೋತಿಗಳ ಹಾವಳಿಯಿಂದ ನನ್ನ ಮನೆಯ
ಡಿಶ್ ಹಾಳಾಗಿದೆ. ಅದನ್ನು ಬದಲಿಸಲು ಈಗ ಪರೀಕ್ಷೆಯ ಸಮಯವಾದುದರಿಂದ ಯಜಮಾನರಿಗೆ
ಬಿಡುವಿಲ್ಲ. ಎಷ್ಟು ಅಡಿಕ್ಟ್ ಆಗಿದ್ದೇವೆಂದರೆ ಫೋನ್ ನಲ್ಲಿ ಡೌನ್ಲೋಡ್ ಮಾಡಿ
ನೋಡುತ್ತಿದ್ದೇವೆ. ಹಾಸ್ಟೆಲಿನಲ್ಲಿರುವ ಮಕ್ಕಳು ಪೋನ್ ಮಾಡಿದಾಗ ನೆನ್ನೆ ಮಹಾಪರ್ವ
ಏನಾಯಿತು ಎಂದು ಕೇಳುತ್ತಾರೆ .ಅವರಿಗೂ ಕತೆ ಹೇಳುವುದು ನನ್ನ ದಿನನಿತ್ಯದ
ಕೆಲಸವಾಗಿದೆ.






Dhanyavaadagalu…..! Dhaaraavaahi galu kaalaharana maaduttave emba abhipraaya nannadoo kooda…aadaroo nimma maatu naanu oppabekallave…?
Addiction is always dangerous …..
ಪ್ರಿಯರಾದ ಶ್ರೀ ಟಿ ಎನ್ ಸೀತಾರಾಂ ಅವರಿಗೆ— ನಾನು ತಮ್ಮನ್ನು ಮುಖತಃ ನೋಡಿಲ್ಲ. ಓದುವ ಮಕ್ಕಳು ಚಿಕ್ಕಂದಿನಲ್ಲಿ ಓದು ಮರೆತು ಟಿ ವಿ ಗೆ addict ಆಗಬಾರದೆಂದು ನಾನು ಅವರು ತಮ್ಮ ತಮ್ಮ ಜವಾಬ್ದಾರಿ ಅರಿಯುವ ತನಕ ಕೇಬಲ್ ಟಿ ವಿ/ಡಿಶ್ ಟಿ ವಿ ಹಾಕಿಸಿರಲಿಲ್ಲ. ಈಗ ಒಬ್ಬಳಿಗೆ ಕೆಲಸ ಸಿಕ್ಕಿದೆ ಮತ್ತೊಬ್ಬನಿಗೆ ತನ್ನ ಜವಾಬ್ದಾರಿ ತಿಳಿದಿದೆ. ಅವನು ತನ್ನ ಓದಿನ ಕೊನೆಯ ವರ್ಷದಲ್ಲಿದ್ದಾನೆ. ನಾನು ಸರ್ಕಾರಿ ಉದ್ಯೋಗದಿಂದ ನಿವೃತ್ತನಾಗಿದ್ದೇನೆ. ಹೀಗಾಗಿ ಒಂದು ವರ್ಷದ ಹಿಂದೆ ಡಿಶ್ ಹಾಕಿಸಿದೆ. ನಾನು ಟಿ ವಿಯಲ್ಲಿ ನೋಡುವುದು ಸುದ್ದಿಗಳು, ನಿಮ್ಮ ‘ಮಹಾಪರ್ವ’ ಧಾರಾವಾಹಿ ಮತ್ತು ಆಗಾಗ ನೀವು ಭಾಗವಹಿಸುವ ‘ಮಹಾಪರ್ವ ಸಂವಾದ’ ಮಾತ್ರ. ಒಂದು ವಾರದ ಐದು ‘ಮಹಾಪರ್ವ’ದ episodeಗಳಲ್ಲಿ ಸಾಮಾನ್ಯವಾಗಿ ಎರಡು ಮಾತ್ರ ನಿಮ್ಮ ‘ಪ್ರತಿಭೆ’ಗೆ ತಕ್ಕಂತೆ ತುಂಬಾ ಉತ್ತಮವಾಗಿರುತ್ತವೆ. ಉಳಿದ ಮೂರು episodeಗಳು ಮಾತಿನ ಮಂಟಪಗಳಾಗಿರುತ್ತವೆ. ಸಾಧ್ಯವಾದರೆ ಅಂತಹವುಗಳಿಗೆ ಇನ್ನು ಮುಂದೆ ನಿಮ್ಮ ‘ಮಾಂತ್ರಿಕ ಸ್ಪರ್ಶ’ ನೀಡಿ. ‘ಮಹಾಪರ್ವ’ದಲ್ಲಿ ಮಾಜಿ ಮುಖ್ಯಮಂತ್ರಿ ಗೋವರ್ಧನ ಚೌಧರಿ( ಈಗ ಪಕ್ಷದ ಅಧ್ಯಕ್ಷ) ಅವರ ಕೊಲೆ ಸಂಚಿನ ನಿಜವಾದ ಅಪರಾಧಿಗಳ ಬಗ್ಗೆ ವಿಚಾರಣೆ ನಡೆಸಬೇಕೆಂದು ನಿರಂಜನಯೋಗಿ ಅವರನ್ನು ಬಿಡುಗಡೆ ಮಾಡುವಾಗ ಕೋರ್ಟು ಹೇಳಿತ್ತು. ಆ ಕೇಸ್ ನ ಇನ್ನೂ ಒಂದೇ ಒಂದು episode ಬಂದಿಲ್ಲ. ಇನ್ನು ಮುಂದಾದರು ಬರಬಹುದೇ?. ——ಮು ಅ ಶ್ರೀರಂಗ ಬೆಂಗಳೂರು
shri TN SEETARAM AVARE..shikshkiyavarugaLu haLLigaLalli face maaduttiruva samashyagaLa bagege ondu dharavahi maadi plz…..adu uttara karnaatakada haLLigaLlli..idu nanna namra vinanti…!!!!!!!!!!!!!!!!!!!!!!!!!!!!!!!!!!