ಜಿ ವಿ ಜಯಶ್ರೀ
ವಾಸುದೇವ
ನಂಗೆ ಟೀವಿ ಸೀರಿಯಲ್ ಮಾಡೋದು ಬಿಟ್ರೆ ಮತ್ತಿನ್ಯಾವುದೇ ಕೆಲಸ ಮಾಡೋಕೆ ಬರಲ್ಲ. ನನಗೆ ಇಷ್ಟ ಇರಲಿ ಬಿಡಲಿ ಆ ಕೆಲಸ ಮಾಡ ಬೇಕು ಸುಮ್ಮನೆ ಕುಳಿತರೆ ಬೇಡದ ಯೋಚನೆಗಳು ಬಂದು ಕಾಡುತ್ತದೆ ಎನ್ನುವ ಮಾತು ಹೇಳಿದ್ದು ಪ್ರಸಿದ್ಧ ಟೀವಿ ಧಾರವಾಹಿ ನಿರ್ದೇಶಕ ಟಿ.ಎನ್. ಸೀತಾರಾಂ . ಅವರು ಹೇಳಿದ ಈ ಮಾತು ಅವಧಿ ಮ್ಯಾಗ್ ನಲ್ಲಿ ಪ್ರಕಟ ಆಗಿತ್ತು. ಇದು ಕೇವಲ ಟಿ.ಎನ್.ಎಸ್ ಅವರ ಮನದ ಮಾತಲ್ಲ ಅನೇಕ ನಿರ್ದೇಶಕರು ಹೇಳುವ ಸತ್ಯ ಸಂಗತಿ. ಟೀವಿಲೋಕದಲ್ಲಿ ಹೊಸದೊಂದು ಭಾಷ್ಯ ಬರೆದ ನಿರ್ದೇಶಕ ಸೀತಾರಾಂ. ನಿರ್ದೇಶಿಸಿದ ಧಾರಾವಾಹಿಗಳು ಚಂದನ ಸೇರಿದಂತೆ ಬಹುತೇಕ ಕನ್ನಡದ ಎಲ್ಲ ವಾಹಿನಿಗಳಲ್ಲಿ ಪ್ರಸಾರ ಆಗಿದೆ. ಆ ವಾಹಿನಿಗಳಿಗೆ ಜೀವದಾನ ಮಾಡಿದೆ. ವಾಹಿನಿಗಳು ನಾವು ಗೆದ್ದಿದ್ದೆ ಬೇರೆಯ ರೀತಿ ಅಂತ ಅಂದ್ರೂ ಸಹ ವೀಕ್ಷಕರಿಗೆ ಗೊತ್ತು ಟಿಎನ್ಎಸ್ ಅವರ ಪ್ರತಿಭೆ.
ಸಾಕಷ್ಟು ಸರ್ತಿ ನಾವೇನು ಅನ್ನುವುದು ನಮಗೆ ಗೊತ್ತಾಗುತ್ತಾ ಹೋಗುತ್ತದೆ ಅನುಭಗಳ ಮೂಲಕ. ಸೀತಾರಾಂ ಅವರ ಮುಕ್ತ 1 ಹಾಗು ಮುಕ್ತ- 2 , ಮನ್ವಂತರ , ಮಾಯಾಮೃಗ ಎಲ್ಲ ಧಾರಾವಾಹಿಗಳು ಜನಮನ ತಲುಪಿದ್ದು ಅವರ ವಿಶಿಷ್ಟವಾದ ಕಥಾ ಹಂದರದಿಂದ.
ಸಾಕಷ್ಟು ಸರ್ತಿವೀಕ್ಷಕರು ಸ್ವಲ್ಪ ಬೋರೆದ್ದು ಹೋಗ್ತಾರೆ ಏಕತಾನತೆಯಿಂದ. ಅಂತಹ ಏಕತಾನತೆಯ ಪ್ರಭಾವ ಜಾಣ- ಕ್ರಿಯೇಟಿವ್ ನಿರ್ದೇಶಕರನ್ನು ಬಾಧಿಸದೇ ಇಲ್ಲ, ಅದನ್ನು ಮೀರಿ ಹೊಸ ಪ್ರಯತ್ನ ಮಾಡಲೇ ಬೇಕು.
ಇತ್ತೀಚೆಗೆ ನಾನು ಹಿರಿಯ ಕಲಾವಿದ ಮುಖ್ಯಮಂತ್ರಿ ಚಂದ್ರು ಅವರ ಪತ್ನಿ ಅವರ ಜೊತೆಯಲ್ಲಿ ಸುಮಾರು ಒಂದು ಗಂಟೆ ಕಾಲ ಕಳೆಯುವ ಅವಕಾಶ ಕೂಡಿತ್ತು. ಅಂದ್ರೆ ಕಳೆದೆರಡು ತಿಂಗಳ ಹಿಂದೆ ಟೀವಿ ಸಂತೆ ಅನ್ನುವ ಕಾರ್ಯಕ್ರಮ ಜಯನಗರದ ಮೈದಾನ ಒಂದರಲ್ಲಿ ನಡೆದಿತ್ತು. ಅಲ್ಲಿಗೆ ಇವರ ಕಾರ್ ನಲ್ಲಿ ಹೋಗಿದ್ದೆ. ಅಂದ್ರೆ ಬೇರೊಂದು ಕಾರ್ಯಕ್ರಮದಲ್ಲಿ ಸಿಕ್ಕಿದರು , ಅಲ್ಲಿಂದ ನಮ್, ಮೇಡಂ ನನ್ನನ್ನು ಅವರ ಕಾರ್ ನಲ್ಲಿ ಕಳುಹಿಸಯಾದ್ರು ಬಿಡಿ ಅದು ಬೇರೆ ಕಥೆ 🙂
ಜೊತೆಯಾಗಿ ಹೋಗುವಾಗ ಇರುವಷ್ಟು ಕಾಲ ಅವರು ತುಂಬಾ ಚೆನ್ನಾಗಿ ಮಾತಾಡಿದ್ರು, ಹಂಗಂದ್ರೆ ಅವರ ವಿಚಾರಶೈಲಿ , ಅವರು ಪ್ರಸ್ತುತ ಪಡಿಸಿದ ರೀತಿ ಇಷ್ಟ ಆಗಿತ್ತು. ಅವರು ಈಟೀವಿ ವಾಹಿನಿಯಲ್ಲಿ ಪ್ರಸಾರ ಆಗಿದ್ದ- ಆಗುತ್ತಿರುವ ಮುಕ್ತದಲ್ಲಿ ಮುಖ್ಯಮಂತ್ರಿ ಪಾತ್ರ ನಿರ್ವಹಿಸಿದ್ದರು.ಮಾತಿನ ಮಧ್ಯ ಇಣುಕಿದ್ದು ಮುಕ್ತದ ಸ್ಥಿತಿಗತಿ 🙂 .ಅವರ ಮಾತಿನ ಒಟ್ಟು ಭಾವಾರ್ಥ ಕೋರ್ಟ್ ಸೀನ್ ಅತಿ ಆಯ್ತು ಎಂದು! ಅದು ಸತ್ಯವಾದ ಮಾತು ಸಹ ! ಯಾಕೆಂದ್ರೆ ಈ ಕೋರ್ಟ್ ಸೀನ್ ಬಗ್ಗೆ ಸಾಮಾನ್ಯ ಮಹಿಳಾ ವೀಕ್ಷಕರಿಂದ ಹಿಡಿದು ಜಾಸ್ತಿ ಓದಿಕೊಂಡಿರುವ ಬುದ್ಧಿವಂತ ವೀಕ್ಷಕರ ವರೆಗೂ ಬೇಜಾರು ಹಿಡಿಸಿ ಬಿಟ್ಟಿತ್ತು .
ನನಗೆ ಮುಕ್ತ ಇಷ್ಟವಾದ ಧಾರವಾಹಿ ಆಗಿತ್ತು ಆದರೆ ಸದಾ ಕೋರ್ಟು ಕಟ್ಟಳೆ ತಲೆ ಕೆಟ್ಟು ನೋಡದಂತೆ ಆಗಿತ್ತು. ಆದರೆ ಮತ್ತೊಮ್ಮೆ ಮುಕ್ತದಲ್ಲಿ ಭಿನ್ನತೆ ಕಾಣ್ತಾ ಇದೆ.. ಸ್ವಲ್ಪ ನೋಡುವ ಇಷ್ಟ ಸಹ ಆಗ್ತಾ ಇದೆ.
ಆಗಲೇ ಹೇಳಿದಂತೆ ಲೇಡಿ ಸೀಎಂ ಪಾತ್ರ ಮಾಡಿದ ಮ್ಯಾಡಂ ರೀತಿ ಮತ್ತೊಬ್ರು ಮ್ಯಾಡಂ ಸಹ ಲೇಡಿ ಜಡ್ಜ್ ಪಾತ್ರ ಮಾಡ ಬೇಕು ಅನ್ನುವ ಆಶಯ ಹೊಂದಿದ್ದಾರೆ, ಅದೂ ಸೀತಾರಾಂ ಸರ್ ಅವರ ಧಾರಾವಾಹಿಯಲ್ಲಿ. ಅಲ್ಲ ಸರ್ ಈ ಪಾಟಿ ಆಂಟಿಗಳು ನಿಮ್ಮ ಸೀರಿಯಲ್ನಲ್ಲಿ ಆಕ್ಟ್ ಮಾಡೋಕೆ ಕಾಯ್ತಾ ಇದ್ದಾರೆ , ಹಾಗೂ ಇನ್ನು ಅನೇಕರು ನೀವು ಕೊಡುವ ತಿರುವಿನ ಬಗ್ಗೆ ತಾವೇ ತಮಗೆ ಇಷ್ಟ ಬಂದಂಗೆ ಕಥೆ ಹೆಣೆದು ನಮ್ಮಂತಹ ಬಡಪಾಯಿಗಳ ಹತ್ರ ಹೇಳ್ತಾ ಇದ್ದಾರೆ, ಸೀರಿಯಲ್ ಮಾಡುವ ಕೆಲಸ ಬಿಟ್ಟು ನಿಮಗೇನೂ ಗೊತ್ತಿಲ್ಲ ಅನ್ನುವ ಸಂಗತಿಯೇ ನಿಮ್ಮ ಬದುಕಿನ ಪಾಸಿಟಿವ್ ಅಂಶ.. ! ಈ ನನ್ನ ಅಭಿಪ್ರಾಯ ಯಾವ ಕತ್ತಲೆಗೂ ಒಳಪಟ್ಟಿಲ್ಲ ಇದು ಮುಕ್ತ ಮುಕ್ತ 🙂
]]>
ಟಿ ಎನ್ ಸೀತಾರಾಂ ಹೇಳಿದ ಮಾತು..
ನಿಮಗೆ ಇವೂ ಇಷ್ಟವಾಗಬಹುದು…





🙂