ಆತ್ಮೀಯರಾದ ಟಿ ಎನ್ ಎಸ್ ಅವರಿಗೆ,
ನಿಮ್ಮೊಂದಿಗೆ ಕೆಲಸ ಮಾಡಿದ್ದೇನೆ. ನೀವೆಷ್ಟು sensitive ಎಂಬ ಅರಿವು ನನಗಿದೆ. ಹಾಗಾಗಿಯೇ ನೀವು ಸೃಷ್ಟಿಸುವ ಪಾತ್ರಗಳು ಜೀವಂತ. ಒಮ್ಮೊಮ್ಮೆ ಅತೀ ಭಾವುಕ ಎನಿಸುವಷ್ಟು ತುಡಿಯುತ್ತವೆ. ನೀವು ಸೃಷ್ಟಿಸುವ ಎಲ್ಲಾ ಪಾತ್ರಗಳ ಭಾರ ಹೊರುವುದು ಸುಲಭದ ಮಾತಲ್ಲ. ಆ ಪಾತ್ರಗಳು ಅವುಗಳ ಭಾವವನ್ನು ನಿಮ್ಮ ಮೇಲೆ ಹೇರುತ್ತಿವೆ. ನಿಮ್ಮ thoughts ಗಳನ್ನು Fiction ಇಂದ non fiction ಗೆ shift ಮಾಡಿಕೊಳ್ಳಿ. ಲೇಖನಗಳನ್ನು ಬರೆಯಿರಿ. Lead youngsters with right thoughts. ಸ್ವತಹ ನಿಂತು ನಿತ್ಯದ ಕತ್ತಿ ವರಸೆ ಮಾಡದೆ, ಕತ್ತಿ ವರಸೆ ಮಾಡುವುದನ್ನು ಹೇಳಿಕೊಡಿ. ಗುರುಗಳಾಗಿ ಮಾರ್ಗದರ್ಶನ ಮಾಡಿ. Please please write an autobiography. Then come back to serials. ತಾಯಿಯ ಅನಾರೋಗ್ಯ, ಸಾವು ನಿಮ್ಮನ್ನು ಕುಗ್ಗಿಸಿವೆ. Time is the healer. You will come out of it. We want you to come out of it.
–ಬಿ ಯು ಗೀತಾ
++
ಜಿಗುಪ್ಸೆ ಹುಟ್ಟದಿದ್ದರೆ ಅದು ಬೇರೆ ಮಾತು. ಯಾರದೋ ಟೀಕೆ ಯಾರದೋ ಒತ್ತಾಯ ಮತ್ಯಾರದೋ ಸಾಧನೆಯ ಬಗೆಗಿನ ಈರ್ಷ್ಯೆ ಇದ್ಯಾವುದಕ್ಕೂ ಅಲ್ಲದೆ ನಮ್ಮಲ್ಲೇ ಜಿಗುಪ್ಸೆಯೊಂದು ಹುಟ್ಟಿದ್ದು ನಿಜವೇ ಆದರೆ ಅದು ನಮ್ಮ ಒಳ್ಳೆಯದಕ್ಕೇ. ಸೃಜನಶೀಲತೆ ಸದಾ ಹೊಸ ಹೊಸ ಸವಾಲುಗಳನ್ನು ಎದುರಿಸುತ್ತಲೇ ಇರಬೇಕು. ಮೊಂಡಾಗಬಾರದು. ಮಂಚ ಅದೇ ಇರಲಿ, ಆದರೆ ಕೋಮಾದಲ್ಲಿರುವ ಮನುಷ್ಯನೂ ಆಗಾಗ ಮಗ್ಗಲು ಬದಲಿಸಲೇ ಬೇಕು. ಇಲ್ಲದಿದ್ದರೆ ಎಲ್ಲ ಹುಣ್ಣು ಹುಣ್ಣು.
ಸೀತಾರಾಂ ಸರ್ ಅಂದರೆ ನಮಗೆಲ್ಲ ಪ್ರೀತಿ ಅನ್ನೋದು ನಿಜ. ಅವರು ಸೀರಿಯಲ್ ಮಾಡುತ್ತಲೇ ಇರಬೇಕು ಅನ್ನೋದು ನಮ್ಮೆಲ್ಲರ ಒತ್ತಾಸೆ. ಕಾಮನಬಿಲ್ಲು, ಕಾಲೇಜು ರಂಗ, ಮಾಯಾಮೃಗ…ಎಲ್ಲವನ್ನೂ ಇಷ್ಟ ಪಟ್ಟಿದ್ದೇವೆ. ಅವರ ಸೀರಿಯಲ್ ಒಂದರ ಸದಾಶಿವ ಆನೋ ಪಾತ್ರದ ಪ್ರೇರಣೆಯಿಂದಲೇ ನಾನು ಕಾಲೇಜಿನಲ್ಲಿರುವಾಗ ಫ್ರೆಂಚ್ ಬಿಯರ್ಡ್ ಬಿಡಲು ಶುರು ಮಾಡಿದ್ದು.
ದಶಕಗಳಾಗಿವೆ. ಜಿಗುಪ್ಸೆ ಹುಟ್ಟಿದು ಒಳ್ಳೆಯದೇ ಆಯಿತು. ದಯವಿಟ್ಟು ಮಗ್ಗಲು ಬದಲಿಸಿ. ನಿಮ್ಮ ಮನೆಯದೇ ಅಡುಗೆ ಇರಲಿ. ಮೆನು ಬದಲಾಗಲಿ ಅಷ್ಟೇ.
ಯಾವ ಟೀಮು, ಯಾವ ಮೈದಾನ, ಯಾರು ನೋಡುತ್ತಿದ್ದಾರೆ ಅನ್ನೋದೆಲ್ಲ ಗಮನಿಸದಿದ್ದರೂ, ಒಂದೇ ಟೀಮಿನ ಜೊತೆ ಒಂದೇ ಮೈದಾನದಲ್ಲಿ ಒಂದೇ ಟೀಮಿನ ಎದುರು ಆಡುತ್ತಲೇ ಇದ್ದಿದ್ದರೆ ದೇವರಂಥ ಸಚಿನ್ ಕೂಡ ದೇವರಾಗುತ್ತಿರಲಿಲ್ಲ.
-ವಿಕ್ರಂ ಹತ್ವಾರ್
]]>
ಟಿ ಎನ್ ಸೀತಾರಾಂ ಗೆ ಇನ್ನಷ್ಟು ಪತ್ರಗಳು..
ನಿಮಗೆ ಇವೂ ಇಷ್ಟವಾಗಬಹುದು…





@ Vikram Hatwar
ದಯವಿಟ್ಟು ಮಗ್ಗಲು ಬದಲಿಸಿ. ನಿಮ್ಮ ಮನೆಯದೇ ಅಡುಗೆ ಇರಲಿ. ಮೆನು ಬದಲಾಗಲಿ ಅಷ್ಟೇ.
wow what a thought!!!
ms
‘ಮುಕ್ತ ಮುಕ್ತ’ ಎಷ್ಟು ಚೆನ್ನಾಗಿದೆ ಎಂದರೆ ಅದರ ಚಿತ್ರಕಥೆಯನ್ನು ಕಾದಂಬರಿಯಾಗಿ ಪ್ರಕಟಿಸಬಹುದು.