ನಾಮಕರಣದಿಂದಲೇ ಸಾರ್ಥಕತೆ ಪಡೆಯುವುದು, ನಾಮಕರಣದ ಮೂಲಕವೇ ವಿವಾದ ಸೃಷ್ಟಿಸುವುದು, ನಾಮಕರಣದ ಹಿನ್ನೆಲೆಯಲ್ಲೇ ಜನಸಮುದಾಯಗಳ ಭಾವನೆಗಳನ್ನು ಕೆರಳಿಸಿ ದ್ವೇಷದ ಬೀಜ ಬಿತ್ತುವುದು ಭಾರತಕ್ಕೆ ತಗುಲಿರುವ ಸಾಂಕ್ರಾಮಿಕ ರೋಗ. ರಸ್ತೆಗೆ ಹೆಸರಿಡುವುದರಿಂದ ಹಿಡಿದು ಸ್ಮಾರಕ ಭವನಗಳ ನಿಮರ್ಾಣದವರೆಗೂ ಈ ಸಾಂಕ್ರಾಮಿಕ ರೋಗ ತನ್ನದೇ ಆದ ಪ್ರಭಾವವನ್ನು ಬೀರುತ್ತಲೇ ಇದೆ.
ರಾಜಕೀಯ ವಲಯಗಳಲ್ಲಿ ಮತ್ತು ಆಡಳಿತಾರೂಢ ಸಕರ್ಾರದ ನೆಲೆಯಲ್ಲಿ ವಿವಿಧ ಸಕರ್ಾರಿ ಯೋಜನೆಗಳಿಗೆ ಮಾಜಿಗಳ ಹೆಸರಿಡುವುದು ವಾಡಿಕೆ ಎನ್ನುವುದಕ್ಕಿಂತಲೂ ಪರಂಪರೆಯಾಗಿಯೇ ಬೆಳೆದುಬಂದಿದೆ. ಮಹಾನ್ ವ್ಯಕ್ತಿಗಳ ಹೆಸರಿನಲ್ಲಿ ಯೋಜನೆ ಜಾರಿಗೊಳಿಸುವುದರಿಂದ ಯೋಜನೆಯ ಸಾರ್ಥಕತೆ ಹೆಚ್ಚಾಗುತ್ತದೆ ಎಂಬ ಭ್ರಮೆಗೊಳಗಾಗಿ ಗಾಂಧಿ, ಅಂಬೇಡ್ಕರ್, ನೆಹರೂ ಮುಂತಾದವರ ಹೆಸರುಗಳು ಬಳಸಲ್ಪಟ್ಟಿವೆ. ಈಗ ವಾಜಪೇಯಿ ಸೇರ್ಪಡೆಯಾಗಿದ್ದಾರೆ. ವಾಸ್ತವಾಂಶವೆಂದರೆ ಇಂತಹ ಮಹಾನ್ ಮುತ್ಸದ್ದಿಗಳ ಹೆಸರಿಗೆ ಈ ಯೋಜನೆಗಳು ಕಳಂಕಪ್ರಾಯವಾಗುತ್ತವೆ.
ಆದರೂ ಐತಿಹಾಸಿಕ ವ್ಯಕ್ತಿಗಳ ಹೆಸರಿನಲ್ಲಿ ಸಂಸ್ಥೆಗಳನ್ನು ಸ್ಥಾಪಿಸುವ ಪರಂಪರೆ ಜಾಗತಿಕ ಮಟ್ಟದಲ್ಲಿಯೂ ಪ್ರಚಲಿತವಾಗಿದ್ದರೂ ಭಾರತದಲ್ಲಿ ಇದು ವಿಶಿಷ್ಟ ರೂಪ ಪಡೆಯುತ್ತದೆ. ಇಲ್ಲಿ ಪೌರಾಣಿಕ ವ್ಯಕ್ತಿಗಳನ್ನು, ಕಾವ್ಯ ಲೋಕದ ಕಾಲ್ಪನಿಕ ವ್ಯಕ್ತಿತ್ವಗಳನ್ನು ಸಮಕಾಲೀನ ಜನಸಮುದಾಯಗಳ ಅಸ್ಮಿತೆಗಳೊಂದಿಗೆ ಸಮೀಕರಿಸಿ, ವೈಭವೀಕರಿಸಿ ಸಾಮುದಾಯಿಕ ಹಿತಾಸಕ್ತಿಗಳಿಗಾಗಿ ಬಳಸಿಕೊಳ್ಳುವ ಒಂದು ವಿಶಿಷ್ಟ ಪರಂಪರೆ ಇದೆ.
ಮಾನವ ಲೋಕದಲ್ಲಿ ಅವತರಿಸಿದರೆನ್ನಲಾಗುವ ದೇವ ಧೂತರಿಗೂ ಸಹ ಅಸ್ಮಿತೆಗಳನ್ನು ಆರೋಪಿಸಲಾಗುತ್ತದೆ. ಹಾಗಾಗಿಯೇ ವಾಲ್ಮೀಕ, ಭಗೀರಥ, ಪರಶುರಾಮರಂತಹ ಪೌರಾಣಿಕ ಮಹನೀಯರು, ಬುದ್ಧ, ಬಸವ ಮೊದಲಾದ ಸಮಾಜ ಸುಧಾರಕರು, ಕಬೀರ, ತುಕಾರಾಂ, ಪುರಂದರ ಮುಂತಾದ ದಾಸವರೇಣ್ಯರು, ಟಿಪ್ಪು , ಶಿವಾಜಿ, ಅಕ್ಬರ್, ಅಶೋಕ ಮುಂತಾದ ಸಾಮ್ರಾಟರು ಹಾಲಿ ಸಾಮಾಜಿಕ ಜಾತಿಯ ಚೌಕಟ್ಟುಗಳಲ್ಲಿ ಬಂಧಿಸಲ್ಪಡುತ್ತಾರೆ. ಈ ಒಂದು ಮನೋಭಾವದ ಪರಿಣಾಮವಾಗಿ ಮೈಸೂರು ಹುಲಿ ಎಂದೇ ಕರೆಯಲ್ಪಡುವ ಟಿಪ್ಪು ಸುಲ್ತಾನ್ ಅಲ್ಪಸಂಖ್ಯಾತರ ಅಥವಾ ಮುಸ್ಲಿಮರ ಪ್ರತಿನಿಧಿಯಾಗಿಬಿಡುತ್ತಾನೆ.
ಚರಿತ್ರೆಯಲ್ಲಿ ಆಗಿಹೋದ ಒಬ್ಬ ಸಾಮ್ರಾಟನನ್ನು ಒಂದು ನಿದರ್ಿಷ್ಟ ಧರ್ಮ ಅಥವಾ ಸಮುದಾಯದ ಪ್ರತಿನಿಧಿಯಾಗಿ ಪರಿಗಣಿಸಿದಾಗ ಸಮಕಾಲೀನ ಸಂದರ್ಭದಲ್ಲಿ ನಮ್ಮ ಸಮಾಜದಲ್ಲಿ ವ್ಯಕ್ತವಾಗುವ ಎಲ್ಲ ರೀತಿಯ ಪೂರ್ವಗ್ರಹಗಳನ್ನು, ಪರಿಭಾಷೆಗಳನ್ನು ಅಂತಹ ವ್ಯಕ್ತಿಗಳಿಗೆ ಆರೋಪಿಸಿಬಿಡುತ್ತೇವೆ. ಟಿಪ್ಪು ಸುಲ್ತಾನ್ ಜನಸಾಮಾನ್ಯರಿಗೆ ಬ್ರಿಟೀಷರ ವಿರುದ್ಧ ಹೋರಾಡಿದ ಮಹಾನ್ ವೀರನಂತೆ ಕಂಡುಬಂದರೂ, ಮತೀಯವಾದಿಗಳಿಗೆ ಅವ ಮುಸ್ಲಿಂ ಮತಾಂಧನಾಗುತ್ತಾನೆ.
ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಟಿಪ್ಪು ನಡೆಸಿದ ಆಕ್ರಮಣಗಳು ಅನ್ಯಧರ್ಮ ದ್ವೇಷದ ಚೌಕಟ್ಟಿನಲ್ಲಿ ಪರಾಮಶರ್ೆಗೊಳಗಾಗುತ್ತದೆ. ಟಿಪ್ಪು ಆಡಳಿತದಲ್ಲಿ ಉಂಟಾಗಿರಬಹುದಾದ ವಿಪ್ಲವಕಾರಿ ಬದಲಾವಣೆಗಳು, ಹಿಂದೂ ದೇವಾಲಯಗಳ ಜೀಣರ್ೋದ್ಧಾರ, ಶ್ರೀರಂಗಪಟ್ಟಣದ ಐತಿಹಾಸಿಕ ದೇವಾಲಯದ ರಕ್ಷಣೆ ಇವೆಲ್ಲವೂ ಗೌಣವಾಗಿ ಮಲಬಾರ್ನಲ್ಲಿ ಪಾಳೇಗಾರರ ಆಳ್ವಿಕೆಯನ್ನು ಅಂತ್ಯಗೊಳಿಸಿ ಜನತೆಗೆ ಮುಕ್ತಿ ನೀಡುವ ಸಂದರ್ಭದಲ್ಲಿ ಉಂಟಾದ ಮತಾಂತರಗಳು ಮುಂಚೂಣಿಗೆ ಬಂದುಬಿಡುತ್ತವೆ. ಇಲ್ಲಿ ಐತಿಹಾಸಿಕ ಸತ್ಯಕ್ಕಿಂತಲೂ ಸಮಕಾಲೀನ ಸಮಾಜದ ವಕ್ರದೃಷ್ಟಿ ಹೆಚ್ಚು ಪ್ರಸ್ತುತತೆ ಪಡೆಯುತ್ತದೆ.
ಇಲ್ಲಿ ಹಲವು ಪ್ರಶ್ನೆಗಳು ಉದ್ಭವಿಸುತ್ತವೆ. ಅಲ್ಪಸಂಖ್ಯಾತರಿಗಾಗಿ ಪ್ರತ್ಯೇಕವಾಗಿ ವಿಶ್ವವಿದ್ಯಾಲಯ ಸ್ಥಾಪಿಸುವುದೇ ಆದರೆ ಟಿಪ್ಪುವಿನ ಹೆಸರೇ ಏಕಾಗಬೇಕು ? ಇಲ್ಲಿಯೂ ಟಿಪ್ಪು ಅಲ್ಪಸಂಖ್ಯಾತರ ಪ್ರತಿನಿಧಿಯಾಗಿಯೇ ಪರಿಗಣಿಸಲ್ಪಡುತ್ತಾರೆಯೇ ? ತನ್ನ ಬೃಹತ್ ಸಾಮ್ರಾಜ್ಯದ ಸಮಸ್ತ ಜನತೆಗೆ ಉತ್ತಮ ಆಡಳಿತ ನೀಡಿದ ಟಿಪ್ಪು ಮುಸ್ಲಿಂ ದೊರೆ ಹೇಗಾಗುತ್ತಾನೆ ? ಆತನ ಆಳ್ವಿಕೆಯಲ್ಲಿ ಉಂಟಾಗಿರಬಹುದಾದ ಮತಾಂತರ ಪ್ರಕ್ರಿಯೆ ಟಿಪ್ಪುವಿನ ದೇಶಪ್ರೇಮವನ್ನೂ ತೊಡೆದುಹಾಕುವಷ್ಟು ಘೋರ ಅಪರಾಧವೇ ? ತಮ್ಮ ಸಾಮ್ರಾಜ್ಯದ ಉಳಿವಿಗಾಗಿ ಬ್ರಿಟೀಷರ ವಿರುದ್ಧ ಸೊಲ್ಲೆತ್ತದೆ ಮೌನವಹಿಸಿದ ರಾಜರಾಳಿದ ನಾಡಿನಲ್ಲಿ ಬ್ರಿಟೀಷರನ್ನು ಹೊಡೆದೋಡಿಸಲು ಕಾದಾಡಿ ವೀರ ಮರಣವನ್ನಪ್ಪಿದ ಟಿಪ್ಪು ಹಿಂದೂ ಸಾಂಸ್ಕೃತಿಕ ವಕ್ತಾರರ ದೃಷ್ಟಿಯಲ್ಲಿ ದೇಶದ್ರೋಹಿಯಾಗಿ ಕಾಣಲು ಕಾರಣ ಕೆಲವೇ ಜನರ ಮತಾಂತರ. ಆದರೆ ಟಿಪ್ಪು ಸಾಮ್ರಾಜ್ಯ ಮುಸ್ಲಿಂ ಸಾಮ್ರಾಜ್ಯವಾಗಿರಲಿಲ್ಲ ಎಂಬ ಸರಳ ಸಂಗತಿ ಇವರಿಗೇಕೆ ಕಾಣುವುದಿಲ್ಲ ? ಒಂದು ವೇಳೆ ಮತಾಂತರ ಮಾಡದೆಯೇ ಬ್ರಿಟೀಷರೊಡನೆ ಹೊಂದಾಣಿಕೆ ಮಾಡಿಕೊಂಡು ಸಾಮ್ರಾಜ್ಯ ವಿಸ್ತರಿಸಿಕೊಂಡಿದ್ದರೆ/ಉಳಿಸಿಕೊಂಡಿದ್ದರೆೆ ಟಿಪ್ಪು ಸ್ವೀಕಾರಾರ್ಹ, ಗೌರವಾರ್ಹ ದೇಶಪ್ರೇಮಿಯಾಗುತ್ತಿದ್ದನೇ ? ಇಲ್ಲ ಎಂದಾದಲ್ಲಿ ಇದೇ ರಾಜ್ಯದಲ್ಲಿ ಇಂದಿಗೂ ನೆಲೆ ಮಾಡಿರುವ ರಾಜವಂಶಸ್ತರನ್ನು ಹೇಗೆ ಅಥರ್ೈಸಬೇಕು ? ಜಟಿಲ ಪ್ರಶ್ನೆ ಅಲ್ಲವೇ ?
ಅಲ್ಪಸಂಖ್ಯಾತ ವಿಶ್ವವಿದ್ಯಾಲಯ ಎಂದಾಕ್ಷಣ ಟಿಪ್ಪು ಹೆಸರನ್ನೇ ಇಡಬೇಕೆಂದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಟಿಪ್ಪುವಿನ ಬಗ್ಗೆ ಅಷ್ಟೊಂದು ಒಲವು ಇದ್ದಿದ್ದಲ್ಲಿ ನೆಹರೂ ಕುಟುಂಬದ ಹೆಸರಿನಲ್ಲಿರುವ ನೂರಾರು ಸಂಸ್ಥೆಗಳಲ್ಲಿ ಒಂದನ್ನು ಟಿಪ್ಪುವಿಗೆ ಅಪರ್ಿಸಬಹುದಿತ್ತು. ಟಿಪ್ಪು ಹೆಸರನ್ನುಇಡುವ ಮೂಲಕ ತನ್ನದೇ ಆದ ರಾಜಕೀಯ ಹಿತಾಸಕ್ತಿಗಳನ್ನು ರಕ್ಷಿಸುವ ಹುನ್ನಾರ ಇಲ್ಲಿ ಸ್ಪಷ್ಟವಾಗುತ್ತದೆ. ಟಿಪ್ಪು ಹೆಸರನ್ನೇ ವಿಶ್ವವಿದ್ಯಾಲಯಕ್ಕೆ ಇಡಬೇಕೆಂದರೆ ಮೈಸೂರು ವಿಶ್ವವಿದ್ಯಾಲಯಕ್ಕೇ ಮರುನಾಮಕರಣ ಮಾಡಬಹುದಲ್ಲವೇ ? ಅಂದರೆ ಟಿಪ್ಪು = ಅಲ್ಪಸಂಖ್ಯಾತರು = ಮುಸ್ಲಿಂ ಎಂಬ ಸಮೀಕರಣದಲ್ಲಿ ತೊಡಗುವ ಮೂಲಕ ಈ ದೇಶದ ಆಳ್ವಿಕರು ಒಬ್ಬ ಮಹಾನ್ ಸ್ವಾತಂತ್ರ್ಯ ಯೋಧನನ್ನು ಅಪಮಾನಗೊಳಿಸುತ್ತಿರುವುದು ಸ್ಪಷ್ಟ ಅಲ್ಲವೇ ? ಇಲ್ಲಿ ಟಿಪ್ಪುವಿನ ಮೇಲಿನ ಗೌರವಾದರಗಳಿಗಿಂತಲೂ ಟಿಪ್ಪುವಿನ ಹೆಸರನ್ನು ಬಳಸಿಕೊಳ್ಳುವ ಮಾರುಕಟ್ಟೆ ಗ್ರಾಹಕ ಸಂಸ್ಕೃತಿ ಎದ್ದುಕಾಣುತ್ತದೆ. ಇದು ಒಂದು ಆಯಾಮ.
ಮತ್ತೊಂದು ಆಯಾಮವೆಂದರೆ ಟಿಪ್ಪು ಹೆಸರಿಟ್ಟ ಕೂಡಲೇ ಆ ವಿಶ್ವವಿದ್ಯಾಲಯ ಭಯೋತ್ಪಾದಕರ ತಾಣವಾಗುತ್ತದೆ ಎಂಬ ಹಿಂದುತ್ವವಾದಿಗಳ ಹುಯಿಲು. ಇವರ ಕಣ್ಣಮುಂದೆ ಬರುವ ನಿದರ್ಶನ ಅಲಿಘರ್ ವಿಶ್ವವಿದ್ಯಾಲಯ. ಭಯೋತ್ಪಾದಕರನ್ನು ಸೃಷ್ಟಿಮಾಡಲು ವಿಶ್ವವಿದ್ಯಾಲಯವೇ ಬೇಕೇ ? ಅಥವಾ ಟಿಪ್ಪುವಿನ ಹೆಸರೇ ಬೇಕೇ ? ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದವರು ವಿಶ್ವವಿದ್ಯಾಲಯಗಳಲ್ಲಿ ತರಬೇತಿ ಪಡೆದವರಲ್ಲ. ಬದಲಾಗಿ ಮತೀಯವಾದಿಗಳ ಚಿಂತನ ಶಿಬಿರಗಳಲ್ಲಿ, ಆಶ್ರಯ ತಾಣಗಳಲ್ಲಿ ತಯಾರಾದವರು. ವಿದೇಶಗಳಲ್ಲಿ ತರಬೇತಿ ಪಡೆದವರು. ಅಥವಾ ಭಾರತದ ಇತರ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಿದವರಲ್ಲಿ ಯಾರೂ ವಿಧ್ವಂಸಕರಿಲ್ಲ ಎಂದು ಭೈರಪ್ಪ ಅಂಡ್ ಕಂಪನಿ ದೃಢೀಕರಿಸಬಲ್ಲರೇ ? ಟಿಪ್ಪು ಹೆಸರು ಬೇಡ ಮಿಜರ್ಾ ಸಾಹೇಬರ ಹೆಸರಿಡಿ ಎಂದು ಹೇಳುವ ಮೂಲಕ ಸಾಂಸ್ಕೃತಿಕ ದೀವಾಳಿತನ ಪ್ರದಶರ್ಿಸುವ ಮಟ್ಟಿಗೆ ನಮ್ಮ ಸಮಾಜ ಪ್ರಬುದ್ಧತೆಯನ್ನು ಕಳೆದುಕೊಂಡುಬಿಟ್ಟಿದೆ.
ವಿಶ್ವವಿದ್ಯಾಲಯ ವಿದ್ಯೆ ನೀಡುವ ಒಂದು ಪವಿತ್ರ ಸ್ಥಾನ. ಅಲ್ಲಿಯೂ ಕ್ಷುಲ್ಲಕ ರಾಜಕಾರಣ, ಅಸ್ಮಿತೆಗಳ ಲೋಕವನ್ನು ಸೃಷ್ಟಿಸಿ ದೇಶವನ್ನು ಎಲ್ಲಿ ಕೊಂಡೊಯ್ಯಬೇಕೆಂದಿದ್ದಾರೆ ನಮ್ಮ ಆಳ್ವಿಕರು ? ಶಸ್ತ್ರಾಸ್ತ್ರಗಳ ಭಯೋತ್ಪಾದನೆಯನ್ನು ಎದುರಿಸುವುದು ಸುಲಭ. ಆದರೆ ನಾವು ಕಾಣುತ್ತಿರುವ ಸಾಂಸ್ಕೃತಿಕ ಭಯೋತ್ಪಾದನೆ ಸಮಾಜದ ಅಡಿಪಾಯವನ್ನೇ ವಿಷಪೂರಿತವನ್ನಾಗಿ ಮಾಡಿಬಿಡುತ್ತದೆ. ಇಲ್ಲಿ ಮುಖ್ಯವಾಗುವುದು ವಿಶ್ವಮಾನವತೆಯ ಸಂದೇಶವೇ ಹೊರತು ಅಸ್ಮಿತೆಗಳ ಪರಿಭಾಷೆಯಲ್ಲ.
ಟಿಪ್ಪು ವಿವಿ ವಿವಾದ: ಸಾಂಸ್ಕೃತಿಕ ಭಯೋತ್ಪಾದನೆ




ಟಿಪ್ಪು ಒಬ್ಬ ಮುಸ್ಲಿಂ,ತೆರೆಸಾ ಕ್ರಿಶ್ಚಿಯನ್,ಹೀಗೆ ಯೋಚಿಸುವವರಿಗೆ ಇರುವ ಒಂದು ಮಾತೆಂದರೆ “ಒಡಕಿನಲ್ಲಿ ಬಲವಿದೆ”ಎಂಬುದೇ ಆಗಿದೆ.ಶಾಸಕರ ಭವನಕ್ಕೆ ಹುಸಿ ಬಾಂಬ್ ಇಟ್ಟ ಗಿರೀಶ್ ಮಟ್ಟಣ್ಣನವರ್ ನಾಯಕನಾಗುತ್ತಾನೆ.ಅಲ್ಲಿ ಗಿರೀಶ್ ಬದಲು ರಫಿಕೋ.. ಅಬ್ದುಲ್ಲಾನೋ ಇದ್ದಿದ್ದರೆ ನಾಯಕನಾಗುತ್ತಿದ್ದನೆ…?ಇಂತಹವರಿಗೆ ವಿಶ್ವಮಾನವತೆಯನ್ನು ತಿಳಿಸುವುದಾದರೂ ಹೇಗೇ?
university ge hesare yake beku? Yava orinalliideyo a oorina hesru nadeyudillavo?
iga sarakari vargikaranadalli B2 B1.. idda hage 1,2 3 antha hesrittubedi
sakaalika baraha..abhinandanegaLu..!!!