ನಭಾ
**
ಜೋಪಡಿಯೀಗ ನಾಚುತ್ತಿಲ್ಲ
ತನ್ನ ಮೈಯ ಭಾಗವೊಂದು ಕೆತ್ತಿ
ಹರಕು ಅರಿವೆ ಹೊದ್ದು ನಿಂತಿದ್ದಕ್ಕೆ
ನೆಲ ಗೋಡೆಗಳ ರಾಚುವ ಧೂಳು ತಡೆಯಲು,
ಸುಣ್ಣ ಸಾರಿಸಿಕೊಂಡು ಬದುಕಿದ್ದಕ್ಕೆ.
ಎರಡು ಹೂ ಅರಳಿಸಿ ಬಾಗಿಲಿಗಿಟ್ಟಿದೆ.
ಇಂದಿಲ್ಲ ನಾಳೆ, ಆ ಪುಟ್ಟ ಪಾದಗಳು
ತನಗೊಂದು ಗುರುತು ಮೂಡಿಸುತ್ತವೆ,
ಆ ದಿಟ್ಟ ಕಣ್ಗಳು
ಕನಸಿನ ಮೆದೆ ಒಟ್ಟುತ್ತವೆ ಎಂದು.
ಉಸಿರಿಟ್ಟಿದೆ ಗುಡಿಸಲು ತೃಪ್ತಿಯಲಿ
ಈ ಜೀವಗಳನು ಬೆಳೆಸಿದ ಹೊಟ್ಟೆ ನಾನೆಂದು .
0 ಪ್ರತಿಕ್ರಿಯೆಗಳು