ಜೋಗಿ 'ರಾಮ'

ಭಗವಾನ್ ಕುರಿತು ಸಂವರ್ಥ ಸಹೀಲ್ ಹೊಸ ನೋಟ ನೀಡಿದ್ದಾರೆ ಅದನ್ನು ಅವಧಿ ಜುಗಾರಿ ಕ್ರಾಸ್ ನಲ್ಲಿ ಚರ್ಚೆಗೆ ಒಡ್ಡಿದೆ.

ಆ ಲೇಖನಕ್ಕೆ ಪ್ರತಿಯಾಗಿ ಜೋಗಿ ನೀಡಿದ ನೋಟ ಇಲ್ಲಿದೆ.

ಚರ್ಚೆಯಲ್ಲಿ ಎಲ್ಲರೂ ಭಾಗವಹಿಸಬಹುದು.  ವೈಯಕ್ತಿಕ ನಿಂದನೆ ಬೇಡ 

jogi

ಭಗವಾನ್ ಅವರ ಮಾತಿನಿಂದ ನೋವಾಗಿರುವುದು ಜನರ ಪುರುಷಾಹಂಕಾರಕ್ಕೆ. ಆದ್ದರಿಂದ ಎಲ್ಲರೂ ಭಗವಾನರನ್ನು ವಿರೋಧಿಸುತ್ತಾ ಇದ್ದಾರೆ. ಪುರುಷಪ್ರಧಾನ ಸಮಾಜದಲ್ಲಿ ಪುರುಷಾಹಂಕಾರ ಜನಗಳಲ್ಲಿ ಬೇರು ಬಿಟ್ಟಿರುವಾಗ ಭಗವಾನ್ ಜನರು ದೇವರು ಎಂದು ನಂಬುವ ರಾಮನ ಜನನದ ಬಗ್ಗೆ ಮಾತಾಡುವಾಗ ಆತನ ತಂದೆಯ ನಿರ್ವೀರ್ಯತೆಯನ್ನು ಜ್ನಾಪಿಸಿದ್ದೆ ಜನರು ಆಕ್ರೋಷಿತರಾದದ್ದು ಆಶ್ಚರ್ಯವೇನಲ್ಲ ಎಂಬ ಈ ಬರಹ ಪ್ರತಿಪಾದಿಸುತ್ತದೆ.
ಆದರೆ, ಭಗವಾನರ ಹೇಳಿಕೆ ತದ್ವಿರುದ್ಧವಾಗಿ ಕೆಲಸ ಮಾಡಿದೆ ಅನ್ನುವುದನ್ನು ನಾವು ನೋಡಬಹುದು.

Painted_cloth_depicting_a_scene_from_the_Ramayana
1. ಯಾರಿಗೆ ಪುರುಷ ಅಹಂಕಾರ ಇರುತ್ತದೋ ಆತ ಗಂಡಸುತನದ ಮಾತಾಡುತ್ತಾನೆ. ನೀನು ಅಪ್ಪನಿಗೆ ಹುಟ್ಟಿದವನೇ ಅಲ್ಲ ಅಂತ ಹೇಳುವುದು ಮೂದಲಿಕೆಯ ಮಾತು. ಪುರುಷ ಅಹಂಕಾರ ಉಳ್ಳವನು ಆಡುವ ಮಾತು.
2. ಭಗವಾನ್ ಶ್ರೀರಾಮ ಅಪ್ಪನಿಗೆ ಹುಟ್ಟಿದವನಲ್ಲ ಅನ್ನುವುದನ್ನು ಮೆಚ್ಚುಗೆಯಿಂದಲೋ, ಮಹಿಳಾ ಸ್ವಾತಂತ್ರ್ಯದ ಸಮರ್ಥನೆಗಾಗಿಯೋ ಹೇಳಿಲ್ಲ. ಆ ಮಾತನ್ನು ಅವರು ಮೂದಲಿಕೆಯ, ಹೀಗಳೆಯುವ ಮಾತಾಗಿ ಹೇಳಿದ್ದಾರೆ.
3. ಅವರ ಮಾತಲ್ಲಿ ಅಪ್ಪನಿಗೆ ಹುಟ್ಟದೇ ಇರುವುದು ಅತ್ಯಂತ ಕೀಳು ಎಂಬ ಭಾವನೆಯಿದೆ ಮತ್ತು ಅದೇ ಕಾರಣಕ್ಕೆ ಆ ಮಾತು ಶ್ರೀರಾಮನ ತಾಯಿಯ ಚಾರಿತ್ರ್ಯವನ್ನು ಅನುಮಾನಿಸುವಂತಿದೆ. ಹೀಗಾಗಿ ಇಲ್ಲಿ ಪುರುಷ ಅಹಂಕಾರ ಎದ್ದು ಕಾಣುವುದು ಭಗವಾನರ ಹೇಳಿಕೆಯಲ್ಲೇ ಹೊರತು, ವಿರೋಧಿಸುವವರ ಆಕ್ರೋಶದಲ್ಲಿ ಅಲ್ಲ.
4. ಶ್ರೀರಾಮನ ಹುಟ್ಟಿನ ಕತೆ, ಪುತ್ರಕಾಮೇಷ್ಠಿಯ ಕತೆ ಕನ್ನಡ ಜನಕ್ಕೆ ಅನಾದಿಕಾಲದಿಂದಲೂ ಗೊತ್ತು. ಅದನ್ನು ಭಗವಾನರು ಹೇಳಿ ತಿಳಿದುಕೊಳ್ಳಬೇಕಾದದ್ದೇನಿಲ್ಲ. ಜನತೆಯಲ್ಲಿ ಪುರುಷ ಅಹಂಕಾರ ಇರುತ್ತಿದ್ದರೆ ಶ್ರೀರಾಮನನ್ನು ಅವರು ಸ್ವೀಕಾರ ಮಾಡುತ್ತಲೇ ಇರಲಿಲ್ಲ. ಹಾಗೆ ನೋಡಿದರೆ ಯಾರನ್ನೆಲ್ಲ ಮಂದಿ ವೀರನೆಂದೂ ಆದರ್ಶನೆಂದೂ ಸ್ವೀಕಾರ ಮಾಡಿದ್ದಾರೋ, ಯಾರನ್ನೆಲ್ಲ ಗೌರವಿಸುತ್ತಾರೋ ಅವರೆಲ್ಲರೂ ಮಾತೃಪ್ರಧಾನ ವ್ಯವಸ್ಥೆಯಿಂದಲೇ ಬಂದವರು. ವೇದವ್ಯಾಸ ಸತ್ಯವತಿಯ ಮಗ, ಭೀಷ್ಮ ಗಂಗೆಯ ಮಗ, ಅರ್ಜುನ, ಕರ್ಣ, ಧರ್ಮರಾಯ- ಎಲ್ಲರೂ ಕುಂತಿಯ ಮಕ್ಕಳೇ, ಕೌಂತೇಯರೇ. ಶ್ರೀಕೃಷ್ಣ ಎಷ್ಟು ವಾಸುದೇವನೋ ಅಷ್ಟೇ ದೇವಕೀಸುತ.
5. ಈ ಪುರುಷ ಅಹಂಕಾರ ಇತ್ಯಾದಿ ವಾದಗಳೆಲ್ಲ ವಿಚಾರವಂತಿಕೆಯ ಅತಿರೇಕದಿಂದ ಹುಟ್ಟುವಂಥವು. ಕನ್ನಡ ಮಂದಿ ಒಂದು ಕತೆಯನ್ನು ಭಾವನಾತ್ಮಕವಾಗಿ ಸ್ವೀಕಾರ ಮಾಡುತ್ತಾರೆಯೇ ಹೊರತು, ವಿಚಾರಾತ್ಮಕವಾಗಿ ಅಲ್ಲ.
6. ಸೃಜನಶೀಲವಾಗಿ ಏನನ್ನಾದರೂ ಬರೆಯದೇ ಹೀಗೆ ಆರೋಪಿತ ವಿಚಾರಧಾರೆಗಳ ಮೂಲಕ ಯಾರನ್ನೋ ಸಮರ್ಥಿಸಿಕೊಳ್ಳಲು ಹೆಣಗಾಡಿದಾಗ ಇಂಥ ಟೊಳ್ಳು ವಿಚಾರಗಳು ಹೊರಹೊಮ್ಮುತ್ತವೆ. ಅವುಗಳು ಅತ್ಯಂತ ತರ್ಕಬದ್ಧ ಎಂಬಂತೆ ಭಾಸವಾಗುತ್ತವಾದರೂ ಆಳದಲ್ಲಿ ಪೊಳ್ಳಾಗಿರುತ್ತವೆ, ಇಲ್ಲಾಗಿರುವಂತೆ.
7. ಎಲ್ಲಕ್ಕಿಂತ ಹೆಚ್ಚಾಗಿ ಶ್ರೀರಾಮ ಕತೆಯ ಪ್ರಕಾರ ಕೂಡ ಅವತಾರಿ. ಅವತರಿಸುವವನಿಗೆ ತಂದೆಯಾಗಲೀ ತಾಯಿಯಾಗಲೀ ಗರ್ಭವಾಗಲೀ ನೆಪ ಮಾತ್ರ ಎಂದು ಕನ್ನಡ ಜನಪದಕ್ಕೆ ಚೆನ್ನಾಗಿ ಗೊತ್ತಿದೆ.

‍ಲೇಖಕರು admin

October 7, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Tejaswini Hegde

    ಜೋಗಿಯವರೆ.. ಇಲ್ಲಿ ನೀವು ಹೇಳಿದ ಪ್ರತಿಯೊಂದು ಸಾಲಿಗೂ, ಸಾಲಿನೊಳಗಿನ ಅರ್ಥವತ್ತಾದ ಭಾವಕ್ಕೂ ನನ್ನ ಸಂಪೂರ್ಣ ಸಹಮತವಿದೆ. ನನ್ನ ಮನದೊಳಗಿನ ಅಭಿಪ್ರಾಯಗಳನ್ನೇ ತುಂಬಾ ಅಚ್ಚುಕಟ್ಟಾಗಿ ಇಲ್ಲಿ ಪೇರಿಸಿಟ್ಟಿದ್ದೀರಿ. ನಿಮ್ಮ ಈ ಸ್ಪಷ್ಟ, ಸ್ವಚ್ಛ, ನಿಷ್ಪಕ್ಷ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು. 🙂

    ~ತೇಜಸ್ವಿನಿ.

    ಪ್ರತಿಕ್ರಿಯೆ
  2. Ravikumar.K

    {This comment is Edited}
    ವಿಷಯ ಎನೇ ಇರಲಿ ಅವರವರ ನ೦ಬಿಕೆಗಳನ್ನು ಮೂದಲಿಸುವುದು ತಪ್ಪು, ಇದಕ್ಕೆ ಸ೦ವಿಧಾನದಲ್ಲು ಕೂಡಾ ಜಾಗವಿಲ್ಲ ಅ೦ತ ಕೇಳಿದಿನಿ ಹೀಗಿದ್ದು ಆ ಬಾಗವಾನ ಮಾತಾಡುವುದು ಸರಿಯಲ್ಲ ಸಕಾ೯ರ ಇ೦ತವರಿಗೆ ಬಹುಮಾನ ಕೊಟ್ಟು ಖುಚಿ೯ ಕೊಡುತ್ತದೆ ಅ೦ದ್ರೆ ತುಘಲಕ ದಬ್ಬಾಳಿಕೆ ನೋಡೊಕೆ ಆ ಕಾಲದಲ್ಲಿಯೆ ಜನಿಸಬೇಕಿರಲಿಲ್ಲ ಇವಾಗಿರೊದು ಅದೇ ಅಲ್ವಾ

    ಪ್ರತಿಕ್ರಿಯೆ
  3. prashanth

    Dear Jogi – I completely agree with your views. There is no need to unnecessarily hurt feelings of others. If I don’t believe it something let me not follow it. Now a days this has become a trend to get publicity and media supports it. There are so many useful things this intellectual an learned people contribute to society.
    If these people feel they are genuinely trying to bring changes in society, then there are more wrong practices in all communities/religion. The focus towards only one religion is making us to question their intention.

    ಪ್ರತಿಕ್ರಿಯೆ
  4. Kiran

    What are we going to achieve by debating about things like this?
    People like Bhagwan make any ridiculous, outrageous statements just to garner attention and enjoy all the buzz it generates. Once they taste it, it becomes a habit and start making more outrageous statements. Best treatment for them is to deny them any attention and starve them of it, but in these times of 24X7 media it is not going to happen!

    ಪ್ರತಿಕ್ರಿಯೆ
  5. Sunil Kumar

    ರಾಮ ಆಗಲಿ ,ಕೃಷ್ಣ, ಯಾರದರು ಕೊಟ್ಟ0ತಹ ಸ0ದೇಶಗಳನ್ನು ಚರ್ಚಿಸಬೇಕು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: