ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಮತ್ತೆ ಬರೆದಿದ್ದಾರೆ


ಮೇ ಫ್ಲವರ್ ಮೀಡಿಯಾ ಹೌಸ್ ನ ಫಿಶ್ ಮಾರ್ಕೆಟ್ ನಲ್ಲಿ ನಡೆದ

‘ನಿಸಾರ್ ಸಾರ್’ ಕಾರ್ಯಕ್ರಮಕ್ಕೆ ಕವಿ ಜೋಗಿ ಬರೆದ ಕವಿತೆ

ತುಂಗೆಯ ತೆನೆ ಬಳುಕಿಗೆ ನಮಸ್ಕಾರ
-ಜೋಗಿ
ಮೇ ಫ್ಲವರ್
ಮನಗಳ ಮೇಲೆ ಸಂಜೆ ಆರರ ಮಳೆ
ಕೇಳುಗರ ಮನಸು
ಗಾಂಧೀಬಜಾರು.
ನಿಸ್ಸಾರ ವಾರದಂತ್ಯಕ್ಕೆ
ರೋಚಕ ತಿರುವು
ನಿಸಾರ್ ಸಾರ್ ನಿಸಾರ್
ಸಂಭ್ರಮ.
ರಾಮನ್ ಸತ್ತ ಸುದ್ದಿ
ಕೇಳುವ ಹೊತ್ತಿಗೇ,
ಅಂಗಳದ ತುಂಬ ರಂಗವಲ್ಲಿ
ಶಿವಮೊಗ್ಗೆಯಲ್ಲಿ ಸೈಟಿನ ರೇಟು ಏರಿದರೆ
ನಾಡದೇವಿಯ ಮುಂದೆ ನಾಡನರಿಗಳ ಕೇಕೆ.
ವರ್ತಮಾನದ ಮೇಜವಾನಿಗೆ
ಸವಾಲು.
ಮತ್ತದೇ ಬೇಸರ ಅದೇ ಸಂಜೆ
ಕಳೆದು
ಅಂದೇನು ಇಂದೇನು ಎಂದಾದರೊಮ್ಮೆ
ಎಂದು ಕಾದಿದ್ದವರಿಗೆ
ತುಂಗೆಯ ತೆನೆ ಬಳುಕು ಕಣ್ಮುಂದೆ
ಸಾಕಾರ.
ಇವರ ಅಕುಟಿಲ ಬೆಣ್ಣೆಯಂತ ನಗು
ಕಾಯಲಿ
ಈ- ಜಗದವರ.
ಸಂತತ ನಗಿಸಲಿ
ಎಂದೂ
ನಗದವರ.

‍ಲೇಖಕರು avadhi

11 October, 2008

5 Comments

  1. malathi S

    Great

  2. kaligananath gudadur

    Jogi sir, nimma kavana ‘nisarara ‘akutila
    benneyanta nagu’vintaye ide.
    -kaligananath gudadur

  3. sunil

    Wow…Jogi sir Njakkoo chendada padya..Thanks a lot….

  4. Basuhongal

    wha..wa..khy bath hai… jogi sir….

  5. balu

    sir great , I had meet u in jayanagar 4th block 34th A cross take care balu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading