ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೇನು ಹುಳುಗಳನ್ನು ಪರಾಗಸ್ಪರ್ಶಕ್ಕಾಗಿ ಬಾಡಿಗೆಗೆ ಕೊಡುತ್ತಿದ್ದಾರೆ!

ಸಹಜ ಸಾಗುವಳಿ ಪುಸ್ತಕದ ಮುಖಪುಟ ಮತ್ತು ಅದರಲ್ಲಿನ ಒಂದು ಲೇಖನ ಅವಧಿ ಓದುಗರಿಗಾಗಿ

ಜೇನ್ನೊಣಗಳೇ ಅರಳಿಸಲಿ.. ಬಿಡಿ!

ಕೆ.ಸಿ ರಘು

ನೀವೇನಾದರೂ ಕಡು ಕೆಂಪು ಬಣ್ಣದ, ಒಳ್ಳೆ ಆಕಾರದ, ಒಳ್ಳೆ ವಾಸನೆಯ ಸ್ಟ್ರಾಬೆರ್ರಿ ಹಣ್ಣುಗಳನ್ನು ನೋಡಿದರೆ, ಒಮ್ಮೆ ಜೇನ್ನೊಣಗಳಿಗೆ ಪರಾಗಸ್ಪರ್ಶ ಮಾಡಿದ್ದಕ್ಕಾಗಿ ಧನ್ಯವಾದ ಹೇಳಿಬಿಡಿ. ಏಕೆ ಹೇಳಿದೆನೆಂದರೆ, ಜರ್ಮನಿಯ ಗೊಟ್ಟಿಗೆನ್ ವಿಶ್ವವಿದ್ಯಾಲಯದ ಕೃಷಿ-ಪರಿಸರ ತಜ್ಞ ತೇಜ ಸ್ಕಾಟರ್ೆ್ಕ ಅವರು ಕೈಗೊಂಡ ಅಧ್ಯಯನ ಅನೇಕ ಸತ್ಯಾಂಶಗಳನ್ನು ಬೆಳಕಿಗೆ ತಂದಿದೆ. ಇಲ್ಲಿಯವರೆಗೂ ಕೀಟ ಮತ್ತು ಪ್ರಾಣಿಗಳಿಂದ ಉಂಟಾಗುವ ಪರಾಗಸ್ಪರ್ಶದಿಂದ ಬೆಳೆಗಳ ಇಳುವರಿ ಹೆಚ್ಚಾಗುತ್ತದೆ ಎಂಬುದು ತಿಳಿದ ವಿಷಯವಾಗಿತ್ತು. ಈ ಅಧ್ಯಯನ ಕೀಟಗಳ ಪರಾಗಸ್ಪರ್ಶದಿಂದ ಸ್ಟ್ರಾಬೆರ್ರಿ ಹಣ್ಣಿನ ಗುಣಮಟ್ಟ ಮತ್ತು ದಾಸ್ತಾನಿಡುವ ಸಾಮರ್ಥ್ಯ ಹೇಗೆ ಹೆಚ್ಚಾಗಿದೆ ಎಂಬುದನ್ನು ತೋರಿಸಿದೆ. ಇವರ ನೇತೃತ್ವದ ವಿಜ್ಞಾನಿಗಳ ತಂಡ ಇಂಡೋನೇಷಿಯಾದಲ್ಲಿ ಕೀಟಗಳ ಪರಾಗಸ್ಪರ್ಶದಿಂದ ಕಾಫಿಯಲ್ಲಿ ಇಳುವರಿ ಹೆಚ್ಚಾಗಿದ್ದಲ್ಲದೆ ಕಾಫಿ ಬೀಜಗಳ ಆಕಾರ, ರಚನೆ ಮತ್ತು ಗಾತ್ರದಲ್ಲಿ  ಸುಧಾರಣೆಯಾಗಿದೆ ಎಂದು ತಮ್ಮ ಅಧ್ಯಯನದಿಂದ ತೋರಿಸಿತ್ತು, ಸ್ಟ್ರಾಬೆರ್ರಿ ಹೂವಿನ ಪರಾಗಸ್ಪರ್ಶದಲ್ಲಿ ಹೂವಿನ ಒಳಗಡೆ ಸುಮಾರು 200 ಅಂಡಾಶಯಗಳಿಗೆ ಪರಾಗ ಮುಟ್ಟಬೇಕು. ಇಲ್ಲಿ ಕಂಡುಬಂದ ಆಸಕ್ತಿಯುತ ವಿಚಾರವೆಂದರೆ, ಈ ಕೆಲಸವನ್ನು ಸಾಕಿದ ಜೇನ್ನೊಣಗಳಿಗಿಂತ ಕಾಡು  ಜೇನ್ನೊಣಗಳು ಪರಿಣಾಮಕಾರಿಯಾಗಿ ಮಾಡಿವೆ.

ಕಾಡು ಜೇನ್ನೊಣಗಳು ಕೆಳಗಿನ ಭಾಗದಲ್ಲಿ ಪರಾಗಸ್ಪರ್ಶ ಮಾಡುವುದರಲ್ಲಿ ನಿಪುಣತೆ ತೋರಿದ್ದರೆ ಸಾಕು ಜೇನ್ನೊಣಗಳು ಮೇಲ್ಭಾಗದಲ್ಲಿ ಕೇಂದ್ರಿಕರಿಸಿವೆ. ಕಾಡು ಜೇನ್ನೊಣಗಳು ಸಾಕು ಜೇನ್ನೊಣಗಳಿಗಿಂತ ಚನ್ನಾಗಿ ಒಂದೇ ಸಮನಾಗಿ ಪರಾಗಸ್ಪರ್ಶ ಮಾಡುತ್ತವೆ. ಇದರಿಂದ ಕೊಳೆಯುವುದು, ಹಾಳಾಗುವುದು ಮತ್ತು ಕಾಯಿ ಕಚ್ಚದೆ ಇರುವುದು ಕಡಿಮೆಯಾಗಿದೆ. ಹಣ್ಣುಗಳು ಗಟ್ಟಿಯಾಗಿದ್ದು ರಸಭರಿತವಾಗಿವೆ. ದಾಸ್ತಾನು ಸಾಮರ್ಥ್ಯ 12 ಗಂಟೆಗಳ ಕಾಲದಷ್ಟು ಹೆಚ್ಚಾಗಿದೆ. ಇದರಿಂದ ಆಥರ್ಿಕವಾಗಿ ಸಾಕಷ್ಟು ಲಾಭವಾಗಿದೆ. ಉತ್ತಮ ಆಕಾರ, ರುಚಿ ಮತ್ತು ಗುಣಮಟ್ಟದ ಹಣ್ಣುಗಳಿಂದಾಗಿ ಮತ್ತು ದಾಸ್ತಾನು ಸಾಮರ್ಥ್ಯದಲ್ಲಿ ಆಗಿರುವ ಸುಧಾರಣೆಯಿಂದಾಗಿ 320 ಮಿಲಿಯನ್ ಡಾಲರ್ ಉಳಿತಾಯ ಯೂರೋಪೊಂದರಲ್ಲೇ ಆಗಿದೆ ಎಂದು ಅಂದಾಜು ಮಾಡಿದ್ದಾರೆ. ಈ ಪರಾಗಸ್ಪರ್ಶದ ಪ್ರಕ್ರಿಯೆಯಲ್ಲಿ ಎರಡು ಮುಖ್ಯ ಸಸ್ಯ ಹಾಮರ್ೊನ್ಗಳಾದ ಆಕ್ಸಿನ್ ಮತ್ತು ಗಿಬ್ಬೆರೆಲ್ಲಿಕ್ ಆಸಿಡ್ಗಳ ಪ್ರಚೋದನೆಯಾಗುತ್ತದೆ. ಆಕ್ಸಿನ್ ಜೀವಕೋಶದ ವಿಭಜನೆ ಮತ್ತು ಬೆಳವಣಿಗೆಯನ್ನು  ಉದ್ದೀಪಿಸುತ್ತದೆಯಾಗಿ ಹಣ್ಣು ಗಟ್ಟಿ ಬಂದು ತೂಕ ಹೆಚ್ಚಾಗುತ್ತದೆ. ಗಿಬ್ಬೆರೆಲ್ಲಿಕ್ ಆಸಿಡ್ ಹಣ್ಣುಗಳು ಮೆತ್ತಗಾಗುವುದನ್ನು ತಡೆಯುತ್ತದೆ, ಕಚ್ಚಾಗುವುದು, ಹಾಳಾಗುವುದನ್ನು ತಡೆಯುತ್ತದೆ.

ಇದೇ ರೀತಿಯ ಫಲಿತಾಂಶಗಳನ್ನು ಕಲ್ಲಂಗಡಿ ಮತ್ತು ಸೌತೆಗಳಲ್ಲೂ ಈ  ವಿಜ್ಞಾನಿಗಳ ತಂಡ ಗಮನಿಸಿದ್ದಾರೆ. ಜೇನ್ನೊಣಗಳ ಈ ಪರಿಸರ ಸೇವೆ ಯಾರ ಗಮನಕ್ಕೂ ಬರುವುದಿಲ್ಲ, ಯಾವ ಲೆಕ್ಕಾಚಾರಕ್ಕೂ ಸಿಕ್ಕುವುದಿಲ್ಲ. ಜೇನ್ನೊಣಗಳ ಪರಾಗಸ್ಪರ್ಶದ ಕೆಲಸಕ್ಕೇನಾದರೂ ಬೆಲೆ ಕಟ್ಟಿದರೆ ಅದು 300 ಬಿಲಿಯನ್ ಡಾಲರ್ಗಳಾಗುತ್ತದೆ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ(ಎಫ್ಎಒ) ಅಂದಾಜು ಮಾಡಿದೆ. ಇತ್ತೀಚಿನ ದಿನಗಳಲ್ಲಿ ಪಶ್ಚಿಮ ಅಮೆರಿಕದಲ್ಲಿನ ರೈತರು ಕೇವಲ ಜೇನುತುಪ್ಪಕ್ಕಾಗಿ ಮಾತ್ರ ಜೇನು ಸಾಕುತ್ತಿಲ್ಲ, ಅವುಗಳನ್ನು ಪರಾಗಸ್ಪರ್ಶಕ್ಕಾಗಿ ಬಾಡಿಗೆಗೆ ಕೊಡುತ್ತಿದ್ದಾರೆ. ಜೇನು ತುಪ್ಪ ಮಾರುವುದಕ್ಕಿಂತ ಇದರಲ್ಲೇ ಅವರಿಗೆ ಹೆಚ್ಚು ಆದಾಯ ಸಿಗುತ್ತದೆ. ಇರಲಿ, ಒಟ್ಟಿನಲ್ಲಿ ಅಗೋಚರ ಸಂಗತಿಗಳು ನಮ್ಮ ಆಹಾರ ಉತ್ಪಾದನೆಯ ಪ್ರಮಾಣ ಮತ್ತು ಗುಣಮಟ್ಟಕ್ಕೆ ಹೇಗೆ ಕೊಡುಗೆ ನೀಡುತ್ತವೆ ಎಂಬುದನ್ನು ಈ ಅಧ್ಯಯನ ತೋರಿಸಿಕೊಡುತ್ತದೆ. ಪೌಷ್ಟಿಕತೆ, ಆರೋಗ್ಯ ಮತ್ತು ನೆಮ್ಮದಿಯ ಬದುಕಿಗೆ ಪರಿಸರ ಜಾಲದಲ್ಲಿ ಅಡಗಿರುವ ಸಹಜ ಸ್ವಾಭಾವಿಕ ಆಗುಹೋಗುಗಳನ್ನು ಈಗಲಾದರೂ ಕಂಡುಕೊಳ್ಳುವುದು ಅಗತ್ಯವಾಗಿದೆ. ಹಣ್ಣಿನ ಬಣ್ಣದಲ್ಲಿ ಸುಧಾರಣೆಯಾಗಿದೆ ಎಂದರೆ ಅದರರ್ಥ ಆ್ಯಂಟಿ  ಆಕ್ಸಿಡೆಂಟ್ಸ್ಗಳಲ್ಲಿ ಸುಧಾರಣೆ ಮತ್ತು ಉತ್ತಮ ಆರೋಗ್ಯ ಎಂದಾಗುತ್ತದೆ. ಇದಕ್ಕಾಗಿ ಹೊರಗಡೆಯ ಎಷ್ಟೋ ದುಬಾರಿ ತಂತ್ರಜ್ಞಾನಗಳನ್ನು ದೂರಮಾಡಬಹುದು. ಒಳಹೊಕ್ಕು ನೋಡುವ ಕಣ್ಣೊಂದು ಸಾಕಲ್ಲವೇ ಗುಟ್ಟುಗಳನ್ನು ಬಿಡಿಸಲು.

 

‍ಲೇಖಕರು avadhi

24 January, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading