ವಾರ್ತಾಭಾರತಿ ಪತ್ರಿಕೆಯ ಸಂಪಾದಕೀಯ ಈ ಸಲದ ಜುಗಾರಿ ಕ್ರಾಸ್ ನಲ್ಲಿ. ಇದು ಚರ್ಚೆಗಾಗಿ ಇರುವ ವೇದಿಕೆ, ನಿಮ್ಮ ಅಭಿಪ್ರಾಯ ಅನಿಸಿಕೆಗಳಿಗೆ ಸ್ವಾಗತ.
ಪ್ರತ್ಯೇಕ ರಾಜ್ಯ ಯಾಕೆ ಕೇಳಬಾರದು?
ಬಿ ಎಂ ಬಶೀರ್
‘ಪ್ರತ್ಯೇಕ ರಾಜ್ಯ’ ಎನ್ನುವ ಶಬ್ದ ಕೇಳಿದಾಕ್ಷಣ, ಆ ಶಬ್ದದ ವಿರುದ್ಧ ಒಮ್ಮೆಲೆ ಮುಗಿ ಬೀಳುತ್ತೇವೆ. ಅಖಂಡ ಕರ್ನಾಟಕದ ಕುರಿತಂತೆ ನಮಗೆ ಪ್ರೀತಿ ಹುಟ್ಟಬೇಕಾದರೆ, ಒಂದೋ ಮಹಾರಾಷ್ಟ್ರೀಯರು ಬೆಳಗಾವಿಯ ಕುರಿತಂತೆ ಖ್ಯಾತೆ ತೆಗೆಯಬೇಕು. ಇಲ್ಲವೇ ಉತ್ತರಕರ್ನಾಟಕ ಅಥವಾ ಕೊಡಗಿನಲ್ಲಿ ಪ್ರತ್ಯೇಕ ರಾಜ್ಯದ ಕೂಗು ಏಳಬೇಕು. ಒಮ್ಮೆಲೆ ನಾವು ನಮ್ಮ ಉಡಿಗೆ ಕೈ ಹಾಕಿದಂತಾಡಿ ಬಿಡುತ್ತೇವೆ. ಅವರ ತಲೆಗೆ ಕನ್ನಡ ದ್ರೋಹಿಗಳು, ದೇಶದ್ರೋಹಿಗಳು ಎಂಬಿತ್ಯಾದಿ ಹಣೆಪಟ್ಟಿಕಟ್ಟಿ ಬಾಯಿ ಮುಚ್ಚಿಸುತ್ತೇವೆ. ಪ್ರತ್ಯೇಕ ರಾಜ್ಯವನ್ನು ಕೇಳಿದವರ ಉದ್ದೇಶವೇನು, ಆ ಅಗತ್ಯ ಅವರಿಗೇಕೆ ಬಂತು ಎನ್ನುವುದನ್ನು ಒಂದಿಷ್ಟು ಸಹನೆಯಿಂದ ಆಲಿಸುವ, ಆ ಕುರಿತಂತೆ ಗಂಭೀರ ಚರ್ಚೆಯನ್ನು ಮಾಡುವಂತಹ ವಿವೇಕವನ್ನು ಕಳೆದುಕೊಂಡಿದ್ದೇವೆ. ಬರೇ ಭಾವುಕ ನಿರ್ಧಾರವನ್ನು ತಳೆದು, ಅಖಂಡ ಕನ್ನಡ ಪ್ರೇಮಿಗಳಾಗಿ ಬಿಡುತ್ತೇವೆ.ಸಣ್ಣ ರಾಜ್ಯಗಳು, ಸಣ್ಣ ದೇಶಗಳು ಅಪರಾಧವಲ್ಲ. ಅದು ಅಭಿವೃದ್ಧಿಗೆ ಪೂರಕವೆಂದಾದರೆ ಅದನ್ನು ಬಯಸುವುದು ತಪ್ಪೂ ಅಲ್ಲ. ರಷ್ಯಾದಂತಹ ರಷ್ಯಾವೇ ಚೂರು ಚೂರಾಗಿ ಬಿಟ್ಟಿರುವುದನ್ನು ನಾವು ನೋಡಿದ್ದೇವೆ. ಯುರೋಪ್ ಇರಲಿ, ಅಮೆರಿಕ ಇರಲಿ. ಅಲ್ಲಿಯ ಅಭಿವೃದ್ಧಿಯಲ್ಲಿ ಸಣ್ಣ ದೇಶಗಳ ಕಲ್ಪನೆ ಬಹಳಷ್ಟು ಸಹಾಯಮಾಡಿದೆ. ಇಷ್ಟಕ್ಕೂ ದೇಶವೆಂದರೆ ಬರೇ ಬೌಗೋಳಿಕ ಗಡಿರೇಖೆಗಳಲ್ಲ.
ದೇಶವೆಂದರೆ ಅಲ್ಲಿರುವ ವಾಸಿಸುವ ಮನುಷ್ಯರು. ಅವರ ಒಳಿತಿಗಾಗಿ ದೇಶವೆಂಬ, ರಾಜ್ಯವೆಂಬ ಕಲ್ಪನೆಗಳು ಹುಟ್ಟಿಕೊಂಡಿವೆ. ದೇಶದ ಕುರಿತಂತೆ ಅವಾಸ್ತವವಾದ ಮೂಢನಂಬಿಕೆಗಳನ್ನು ಕೈ ಬಿಟ್ಟು, ವಾಸ್ತವವಾದ ಮನುಷ್ಯ ಕುಲದ ಒಳಿತಿನ ಕಡೆಗೆ ಚಿಂತೆ ಮಾಡಬೇಕಾದ ಸಂದರ್ಭ ಇದು. ಈ ಕಾರಣದಿಂದಲೇ ಯಾರಾದರೂ ‘ಪ್ರತ್ಯೇಕ ರಾಜ್ಯ’ ಎಂದಾಕ್ಷಣ ನಾವು ಭಾವೋದ್ವೇಗಗೊಂಡು ಅವರ ಮೈಮೇಲೆ ಬೀಳುವುದನ್ನು ನಿಲ್ಲಿಸಬೇಕಾಗಿದೆ. ಆ ಕುರಿತಂತೆ ವಾಸ್ತವ ನೆಲೆಯಲ್ಲಿ ಯೋಚಿಸಬೇಕು. ಚರ್ಚೆಗೆ ಬಿಡಬೇಕು. ದುರದೃಷ್ಟಕ್ಕೆ ನಮ್ಮ ರಾಜ್ಯದಲ್ಲಿ ‘ಪ್ರತ್ಯೇಕ ರಾಜ್ಯ’ ಎನ್ನುವುದನ್ನು ಹೆಚ್ಚಿನ ಬಾರಿ ರಾಜಕೀಯ ತಂತ್ರವಾಗಿ, ಬ್ಲಾಕ್‌ಮೇಲ್ ತಂತ್ರವಾಗಿ ಮಾತ್ರ ಬಳಸಿಕೊಂಡು ಬರಲಾಗಿದೆ.
ಕೊಡಗಿನಲ್ಲಿ ಪ್ರತ್ಯೇಕ ರಾಜ್ಯ ಎಂಬ ಪದ ಬಳಕೆ ಏಕ ವ್ಯಕ್ತಿಯಿಂದ ಪ್ರಚಾರ ಪಡೆಯಿತು. ನಾಚಪ್ಪ ಎಂಬ ವ್ಯಕ್ತಿ ಪ್ರತ್ಯೇಕ ಕೊಡಗು ರಾಜ್ಯವನ್ನು ಮುಂದಿಟ್ಟುಕೊಂಡು, ಅಲ್ಲಿನ ಭೂಮಾಲಕರ ಕೈಯಿಂದ ಒಂದಿಷ್ಟು ಹಣವನ್ನು ಸಂಗ್ರಹಿಸಿ, ಚಟುವಟಕೆ ನಡೆಸಿದ. ಇದಕ್ಕೆ ಹೊರತಾದ ಕೊಡಗಿನ ಮೂಲನಿವಾಸಿಗಳು, ಬುಡಕಟ್ಟು ಜನರು, ಕಾರ್ಮಿಕ ವರ್ಗ ಇವರನ್ನೆಲ್ಲ ಅಭಿವೃದ್ಧಿಯ ದೃಷ್ಟಿಯಲ್ಲಿ ಒಟ್ಟು ಸೇರಿಸಿ, ಭೂಮಾಲಕರ ಮುಷ್ಟಿಯಿಂದ ಅವರನ್ನು ಬಿಡುಗಡೆ ಮಾಡಿ, ಅಭಿವೃದ್ಧಿಯ ದಿಕ್ಕಿಗೆ ಕರೆದುಕೊಂಡು ಹೋಗುವ ದೂರದೃಷ್ಟಿ, ವಿಶಾಲ ದೃಷ್ಟಿ ಆ ಚಳವಳಿಗೇ ಇರಲಿಲ್ಲ. ಯಾಕೆಂದರೆ, ಆ ಚಳವಳಿ ಸಂಘಟಿತವಾದುದೇ ಭೂಮಾಲಕರಿಂದ. ಕೊಡವ ಸಮಾಜದ ಮೇಲ್ವರ್ಗದಿಂದ.
ಸಹಜವಾಗಿಯೇ ಆ ಚಳವಳಿ ಯಶಸ್ಸು ಕಾಣದೇ ನಾಶವಾಗಿ ಹೋಯಿತು. ಆ ಬಳಿಕ ವಿವಿಧ ರಾಜಕಾರಣಿಗಳು ತಮ್ಮ ತಮ್ಮ ದುರುದ್ದೇಶಗಳನ್ನು ಸಾಧಿಸುವುದಕ್ಕಾಗಿ ಮಾತ್ರ ‘ಪ್ರತ್ಯೇಕ ರಾಜ್ಯ’ ಶಬ್ದವನ್ನು ಬಳಸಿಕೊಂಡು ಬಂದರು. ಸಚಿವ ಸ್ಥಾನ ಸಿಗದೇ ಹೋದಾಗ, ಅಥವಾ ತಮ್ಮ ಮಕ್ಕಳಿಗೆ ವೊಮ್ಮಕ್ಕಳಿಗೆ ಟಿಕೆಟ್ ಸಿಗದೇ ಇದ್ದಾಗ ‘ಪ್ರತ್ಯೇಕ ರಾಜ್ಯ’ ಎಂಬ ಗುಮ್ಮನನ್ನು ತೋರಿಸಿ ಸರಕಾರವನ್ನು ಬ್ಲಾಕ್ ಮೇಲ್ ಮಾಡುತ್ತಿದ್ದರು. ಅವರ ಪಾಲಿಗೆ ಪ್ರತ್ಯೇಕ ರಾಜ್ಯದ ಪ್ರಯೋಜನ ಇಷ್ಟೇ. ಇತ್ತೀಚೆಗಷ್ಟೇ ಸ್ಪೀಕರ್ ಸ್ಥಾನದಲ್ಲಿ ಕೂತಿದ್ದ ಕೆ.ಜಿ.ಬೋಪಯ್ಯ ‘ಪ್ರತ್ಯೇಕ ರಾಜ್ಯ’ದ ಕುರಿತಂತೆ ಪ್ರಸ್ತಾಪಿಸಿದ್ದರು. ಪಶ್ಚಿಮ ಘಟ್ಟವನ್ನು ವಿಶ್ವಪರಂಪರೆಯ ಪಟ್ಟಿಯಲ್ಲಿ ಸೇರಿಸುವುದನ್ನು ವಿರೋಧಿಸಿ ಮಾತನಾಡಿ “ಕೊಡಗನ್ನು ಪ್ರತ್ಯೇಕ ರಾಜ್ಯ ಮಾಡಿ. ನಾವು ಕೊಡಗನ್ನು ರಕ್ಷಿಸಿ ತೋರಿಸುತ್ತೇವೆ” ಎಂಬ ಉಢಾಫೆಯ ಹೇಳಿಕೆಯನ್ನು ನೀಡಿದ್ದರು.
ಸರಕಾರದ ಒಂದು ಭಾಗವೇ ಆಗಿರುವ ಬೋಪಯ್ಯ ಅವರಿಗೆ ಕೊಡಗಿನ ಕಾಡು ರಕ್ಷಿಸಲು ಪ್ರತ್ಯೇಕ ರಾಜ್ಯದ ಅಗತ್ಯವಿದೆಯಂತೆ. ಬಳಿಕ ತಮ್ಮ ಮಾತನ್ನು ಇವರು ಹಿಂದೆಗೆದುಕೊಂಡರು. ಇದೀಗ ರಾಜ್ಯ ಸಚಿವ ಉಮೇಶ್ ಕತ್ತಿಯವರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂದು ಹೇಳಿಕೆ ನೀಡಿ ವಿವಾದಕ್ಕೊಳಗಾಗಿದ್ದಾರೆ. ೨೦೨೦ರ ಜನಸಂಖ್ಯೆಗನುಗುಣವಾಗಿ ದೇಶದಲ್ಲಿ ರಾಜ್ಯಗಳ ಸಂಖ್ಯೆ ೫೦ಕ್ಕೇರುವ ಆಶಯವಿದ್ದು, ಆ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿ ಎಂಬ ಆಶಯವನ್ನು ಕತ್ತಿ ವ್ಯಕ್ತಪಡಿಸಿದ್ದಾರೆ. ಇಂತಹ ಆಶಯ ವ್ಯಕ್ತಪಡಿಸುವುದು ಅಪರಾಧವೇನೂ ಅಲ್ಲ. ಆದರೆ ಅದರಲ್ಲಿ ರಾಜಕೀಯ ದುರುದ್ದೇಶಗಳು ಇರಬಾರದು ಅಷ್ಟೇ. ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಕುಳಿತು ಇಡೀ ರಾಜ್ಯದ ಕಡೆಗೆ ಗಮನ ಹರಿಸಲು ನಮ್ಮ ಸರಕಾರ ವಿಫಲವಾಗುತ್ತಿದೆ ಎಂಬ ಆರೋಪ ಇಂದು ನಿನ್ನೆಯದಲ್ಲ.
ಉತ್ತರ ಕರ್ನಾಟಕದ ಕುರಿತಂತೆ ಸರಕಾರ ಮಲತಾಯಿ ಧೋರಣೆ ತಾಳುತ್ತಿದೆ ಎಂಬ ಆರೋಪದಲ್ಲಿ ಹುರುಳಿಲ್ಲದಿಲ್ಲ. ರೈತರನ್ನು ಅತ್ಯಧಿಕ ಸಂಖ್ಯೆಯಲ್ಲಿ ಹೊಂದಿರುವ ಉತ್ತರ ಕರ್ನಾಟಕ ದಿನೇ ದಿನೇ ಸಂಕಟ, ಸಂಕಷ್ಟಗಳಿಗಾಗಿಯೇ ಸುದ್ದಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯವನ್ನು ವಿಭಜಿಸುವ ಮೂಲಕ ಇನ್ನಷ್ಟು ಆಡಳಿತ ಅನುಕೂಲವಾಗುತ್ತದೆ ಮತ್ತು ಅಭಿವೃದ್ಧಿಯನ್ನು ಜನರಿಗೆ ತಲುಪಿಸಲು ಸುಲಭವಾಗುತ್ತದೆ ಎಂದಾದರೆ ಕರ್ನಾಟಕ ವಿಭಜಿಸಿದರೆ ತಪ್ಪೇನು? ಭೌಗೋಳಿಕವಾಗಿ ಅಭಿವೃದ್ಧಿಯನ್ನು ಸಾಧಿಸಲು ಕರ್ನಾಟಕ ಎರಡಾದರೂ, ಮಾನಸಿಕವಾಗಿ ಕರ್ನಾಟಕವನ್ನು ವಿಭಜಿಸುವುದು ಅಸಾಧ್ಯ.
ಭೌಗೋಳಿಕವಾಗಿ ಎರಡಾಗಿಯೂ, ಮಾನಸಿಕವಾಗಿ ಕರ್ನಾಟಕ ಒಂದಾಗಿಯೇ ಇರುವುದಕ್ಕೆ ಸಾಧ್ಯವಿದೆ. ಕರ್ನಾಟಕದ ಅಭಿವೃದ್ಧಿಯೆಂದರೆ ಅಲ್ಲಿನ ಜನರ ಅಭಿವೃದ್ಧಿ. ಜನರ ಬದುಕಿನ ಅಭಿವೃದ್ಧಿಗೆ ಒಳಿತಿಗೆ ಸಹಾಯಮಾಡದ, ಕೇವಲ ಭಾವುಕ ಆಲೋಚನೆಯಾಗಿಯೇ ಉಳಿಯುವ ಕರ್ನಾಟಕದಿಂದ ಯಾರಿಗೂ ಯಾವ ಪ್ರಯೋಜನವೂ ಇಲ್ಲ. ಅದರ ಬದಲು, ಕರ್ನಾಟಕ ಇಬ್ಭಾಗವಾಗುವುದರಿಂದ ಕನ್ನಡಿಗರ ಅಭಿವೃದ್ಧಿ ಸಾಧ್ಯವೆ ಎನ್ನುವ ಕುರಿತಂತೆ ಚರ್ಚೆ ಆರಂಭವಾಗಬೇಕು. ಹಿರಿಯ ಆರ್ಥಿಕ ತಜ್ಞರು,ಕನ್ನಡ ಪರ ಹೋರಾಟಗಾರರು, ರೈತ ನಾಯಕರು ಈ ಚರ್ಚೆಯಲ್ಲಿ ಪಾಲ್ಗೊಗೊಳ್ಳಬೇಕು.ಅದರ ಸಾಧಕ ಬಾಧಕಗಳ ಕುರಿತಂತೆ ಬಹಿರಂಗ ಮುಕ್ತ ಚರ್ಚೆ ನಡೆಯಬೇಕು.ಇದರಲ್ಲಿ ಜನರೂ ಪಾಲ್ಗೊಳ್ಳುವಂತಿರಬೇಕು. ಈವರೆಗೆ ಬರೇ ಬ್ಲಾಕ್‌ಮೇಲ್ ತಂತ್ರಕ್ಕೆ, ರಾಜಕೀಯ ದುರುದ್ದೇಶಕ್ಕೆ ಬಳಕೆಯಾಗುತ್ತಿರುವ ಈ ಪ್ರತ್ಯೇಕ ರಾಜ್ಯದ ಕೂಗನ್ನು ವಾಸ್ತವದ ಕಣ್ಣಲ್ಲಿ ಎದುರಿಸುವುದಕ್ಕೆ ಇನ್ನಾದರೂ ನಾವು ಸಿದ್ಧರಾಗಬೇಕಾಗಿದೆ.







ಒಳ್ಳೆಯ ಲೇಖನ.
ಇದರೊಂದಿಗೆ ಇನ್ನೂ ಒಂದಂಶವಿದೆ.ಅದು ಭಾವನಾತ್ಮಕ ನಂಟು.
ರಾಜ್ಯದ ಮೈಸೂರು ಭಾಗದವರಿಗೆ (ಅಂದರೆ ದಕ್ಷಿಣ ಕಡೆಯವರಿಗೆ) ಕರ್ನಟಕ ಎಂದರೆ ಉತ್ತರ ಭಾಗದಲ್ಲೊಂದಷ್ಟು ಪ್ರದೇಶವಿದೆ ಎಂಬುದು ಗೊತ್ತೇ? ಕರ್ನಾಟಕ ಅಂದರೆ ಬರೀ ದಕ್ಷಿಣ ಭಾಗವೇ?
ಸಿನಿಮಾದಲ್ಲ್ಲೊಂದು “ಕಲ್ಲಾದರೆ ನಾನು ಬೇಲೂರ ಶಿಲೆಯಾಗುವೆ’ ಅಂತೇನೋ ಹಾಡಿದೆ. ತುಂಬ ಮಧುರವಾದ ಪದ. ಪದೇ ಪದೇ ಅದನ್ನು ಕೇಳುತ್ತಿದ್ದೇನೆ. ಈಚೆಗೆ ನನ್ನ ಸ್ನೇಹಿತನೊಬ್ಬ ಹೇಳಿದ: ಇಡೀ ಹಾಡಿನ್ ತುಂಬ ಬರೇ ಆ ಕಡೇ ಸ್ಥಳ ಬಣ್ಣಿಸ್ಯಾರ. ಯಾಕ ನಮ್ಮಲ್ಲಿ ಏನೂ ಇಲ್ಲಾ? ಚಿನ್ನದ ಗಣಿ ಎಂದರೆ ಕೋಲಾರ ಬಿಟ್ಟು ಹಟ್ಟಿ ಗಣಿ ಯಾಕಾಗಬಾರದು? ಶಿಲ್ಪಕಲೆಗೆ ಇಟಗಿ ದೇವಸ್ಥಾನ ಯಾವುದರಲ್ಲಿ ಕಮ್ಮಿ? ತುಂಗಭದ್ರಾ ನದಿ ನದಿಯಲ್ವಾ? ಇಡೀ ಹಾಡಿನ ತುಂಬ ಆ ಕಡೆಯದ್ದೇ ಆದರೆ ನಮ್ಮ ಸ್ಥಳದ ಬಗ್ಗೆ ಜನರಿಗೆ ಗೊತ್ತಾಗೋದು ಯಾವಾಗ?
ುತ್ತರ ಕರ್ನಾಟಕದ ಜನರಿಗೆ ಸಿನಿಮಾ ಸ್ಟಾರ್ ಗಳು ಬಂದರೆ ಹಬ್ಬ. ಾದರೆ ಎಷ್ಟು ಸ್ಟಾರ್ ಗಳು ಉತ್ತರ ಕರ್ನಾಟಕದ ಪ್ರಮುಖ ಸಿಟಿ ನೋಡಿದ್ದಾರೆ?
ಇನ್ನು ಬೆಂಗಳೂರಿನಲ್ಲಿರುವ ಎಷ್ಟೋ ಮಂದಿಗೆ ಆಲಮಟ್ಟೆ ಆಣೆಕಟ್ಟೆ ಕೆ.ಆರ್.ಸಾಗರ ಆಣೆಕಟ್ಟೆಗಿಂತ ಎಷ್ಟೋ ದೊಡ್ಡದು ಎಂಬುದೇ ಗೊತ್ತಿಲ್ಲ. ಬಿಜಾಪೂರ, ಬೀದರ, ಕಲಬುರ್ಗಿ ಎಷ್ಟು ದೂರ ಇವೆ? ಯಾವ ದಿಕ್ಕಿಗೆ ಇವೆ ಎಂಬುದೇ ಗೊತ್ತಿಲ್ಲ. ಈ ಕಡೆಯಿಂದ ವಲಸೆ ಹೋದವರಿಗಷ್ಟೇ ಆ ಬಗ್ಗೆ ಮಾಹಿತಿ ಇದೆ. ಅಂದ ಹಾಗೆ 371ನೇ ವಿಧಿ ತಿದ್ದುಪಡಿಗೆ ಒತ್ತಾಯಿಸಿ ಕಳೆದ ವರ್ಷ ಹೈದ್ರಾಬಾದ ಕರ್ನಾಟಕ ಭಾಗದ ಸಂಘಟನೆಗಳು ಹೋರಾಟ ನಡೆಸಿದಾಗ ಉಳಿದ ಭಾಗದವರು ಅದರ ಬಗ್ಗೆ ಚಕಾರವೆತ್ತಲಿಲ್ಲ.
ಹೊಟ್ಟೆಪಾಡಿಗೆಂದು ಹಳ್ಳಿ ಬಿಟ್ಟು ಬೆಂಗಳೂರಿಗೆ ಬಂದ ನಮ್ಮಂಥವರು ಗಮನಿಸಿದ ಸಂಗತಿ ಎಂದರೆ, ಕಾವೇರಿಯಷ್ಟೇ ಪ್ರಮುಖವಾದುದು ುಳಿದ ನದಿವಲಯದ ಹಾಗೂ ನದಿಸೌಲಭ್ಯ ಸಿಗದ ರೈತರ ಸಮಸ್ಯೆ ಯಾಕೆ ನಿರ್ಲಕ್ಷಕ್ಕೆ ಒಳಗಾಗುತ್ತಿದೆ?
ಬರೀ ಅಭಿವೃದ್ಧಿ- ಹಿಂದುಳಿಯುವಿಕೆ ಎಂಬ ಂಶಗಳನ್ನಷ್ಟೆ ಗಮನಿಸಿ ಬೇರೆ ರಾಜ್ಯ ನಿರ್ಮಿಸಬೇಕಿಲ್ಲ. ಈ ಭಾಗದವರಿಗೆ ಆ ಭಾಗದವರ ಭಾವನಾತ್ನಕ ನಂಟು ಇದ್ದರೆ ಪ್ರತ್ಏಕತೆಯ ಕೂಗು ನಿವಾರಣೆಯಾದೀತು. ಇಲ್ಲದೇ ಹೋದರೆ ಪ್ರತಯೇಕ ರಾಜ್ಯದ ಬೇಡಿಕೆ ಇನ್ನಷ್ಟು ಪ್ರಭಲಗೊಳ್ಳುವುದು ಖಚಿತ.
– ಪಿ.ಕೆ.ುಮಾಪತಿ, ಬೆಂಗಳೂರು
Its better to have smaller states for better development.There is no need to be too much emotional.
It is better to have smaller countries for better development. there is no need to be too much senti – mental!
thoughtful!
you have opened the pandoras box!
vichaarpoorna lekhana. uttara karnatakada jana endakshana moogu muriyuva janave jaasti. atyantha hindulida pradesh emba hane patti bere. karnataka endare bengalooru haagu mysore emba bhaavane “uttu oraatagaar”inda hididu rakshanaa senegala varege ade bhaavane.alliya udayonmukha pudharigalind praarambhisi mudi raajakaaranigala varege bengaloore moksha dhaama. intahavarinda abhivruddhi embudu mareechike. uttara karnataka pratyeka raajavadare abhivruddhiya belaku kandeethu. umesh katthi sariyage mathanaadiddare. -srinivas deshpande
ಎರಡಲ್ಲ ಮೂರು. ಕರ್ನಾಟಕ ಮೂರಾಗಲಿ!!!
೧)ಉತ್ತರ ಕರ್ನಾಟಕ
೨)ದಕ್ಷಿಣ ಕರ್ನಾಟಕ
೩)ಮಲೆನಾಡು ಮತ್ತು ಕರಾವಳಿ ಕರ್ನಾಟಕ.
ಎರಡು ಮೂರು ವರ್ಷದ ಕೆಳಗೆ ನಾನು ಬರೆದ (ನನ್ನ ಮೊದಲ)ಬ್ಲಾಗ್ ಲೇಖನ ಓದಿ.
http://machikoppa.blogspot.in/2009/08/blog-post.html
ಮಂತ್ರಿಗಳೆಲ್ಲ ದಕ್ಷಿಣದವರು ಗುಲ್ಬರ್ಗ ಬಿಜಾಪುರಕ್ಕೆ ಬರಕ್ಕೆ ಅಧಿಕಾರಿಗೆ ಮನಸ್ಸಿಲ್ಲ ನಾವು ಹೇಗೆ ಪೂರ್ತಿ ಕರ್ನಾಟ ನನ್ನದೆನ್ನಬೆಕು??