ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಎನ್ ನಾಗರಾಜ್ ಅವರಿಗೆ ಪ್ರಶಸ್ತಿ

ಸಾಹಿತ್ಯ ಮತ್ತು ಸಾಮಾಜಿಕ ರಂಗಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಜಿ ಎನ್‌ ನಾಗರಾಜ್‌ ಅವರಿಗೆ ಮಂಡ್ಯದ ‘ಜನದನಿ’ ಸಾಂಸ್ಕೃತಿಕ ಟ್ರಸ್ಟ್ ಪ್ರಶಸ್ತಿಯನ್ನು ಘೋಷಿಸಿದೆ.

೨೦೨೧ ನೇ ಸಾಲಿನ ಇಂಡುವಾಳು ಹೆಚ್‌ ಹೊನ್ನಯ್ಯ ಸ್ಮಾರಕ ಸಮಾಜಸೇವಾ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಪ್ರಶಸ್ತಿ ಸಮಿತಿಯ ಅಧ್ಯಕ್ಷರಾದ ಜಯಪ್ರಕಾಶ್ ಗೌಡ ಅವರು ತಿಳಿಸಿದ್ದಾರೆ.

ಪ್ರಶಸ್ತಿಯು ೧೦ ಸಾವಿರ ರೂ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಪ್ರಶಸ್ತಿ ಪ್ರಧಾನ ಸಮಾರಂಭವು ಈ ತಿಂಗಳ ೩೧ರಂದು ಮಂಡ್ಯದ ಕರ್ನಾಟಕ ಸಂಘದ ಆವರಣದಲ್ಲಿ ನಡೆಯಲಿದೆ.

ಸ್ವಾತಂತ್ರ್ಯ ಹೋರಾಟಗಾರ ಹಾಗೂ ಅಂದಿನ ಕಾಲಕ್ಕೆ ವಿಧವಾ ವಿವಾಹ ಆಂದೋಲನಕ್ಕೆ ಕಾರಣರಾಗಿದ್ದ ಇಂಡವಾಳು ಹೊನ್ನಯ್ಯನವರ ಹೆಸರಿನಲ್ಲಿ ಇರುವ ಪ್ರಶಸ್ತಿಯನ್ನು ಸಾಮಾಜಿಕ ಬದುಕಿಗೆ ಸಮರ್ಪಿಸಿಕೊಂಡಿರುವವರಿಗೆ ಪ್ರದಾನ ಮಾಡಲಾಗುತ್ತದೆ.

ಉನ್ನತ ಅಧಿಕಾರದ ಹುದ್ದೆಯನ್ನು ತೊರೆದು ಜನ ಚಳವಳಿಯನ್ನು ಬದುಕನ್ನಾಗಿ ಆಯ್ಕೆ ಮಾಡಿಕೊಂಡ, ರೈತ, ಕೃಷಿ ಕೂಲಿಕಾರರ ಏಳಿಗೆಗಾಗಿ ನಿರಂತರ ಹೋರಾಟ ನಡೆಸುತ್ತಿರುವ ಹಾಗೂ ಆ ನಿಟ್ಟಿನಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಕ್ಕಾಗಿ ಪ್ರಶಸ್ತಿ ನೀಡಲಾಗಿದೆ.

ಜಿ ಎನ್ ನಾಗರಾಜ್ ಅವರ ಕೃತಿಗಳು: ‘ನಿಜ ರಾಮಾಯಣದ ಅನ್ವೇಷಣೆ’, ‘ಜಾತಿ ಬಂತು ಹೇಗೆ?’ ಹಾಗೂ ‘ಏನಿದು ಲಿಂಗಾಯತ ಸ್ವತಂತ್ರಧರ್ಮ?’

‍ಲೇಖಕರು Admin

23 August, 2021

1 Comment

  1. ಲಲಿತಾ ಸಿದ್ಧಬಸವಯ್ಯ

    ಹೃತ್ಪೂರ್ವಕ ಅಭಿನಂದನೆಗಳು ಸರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading