
ಅಪ್ಪನ ಸಾವು ನನ್ನ ಬದುಕನ್ನೇ ಬದಲಾಯಿಸಿತು
ನಾನೆಂದು ಈ ಕೆಲಸಕ್ಕೆ ಹೋಗಬಾರದೆಂದು ತೀರ್ಮಾನಿಸಿದ್ದೆ. ಆವತ್ತು ನಡೆದ ಘಟನೆ ಇಡೀ ನ್ನನ ಜೀವನವನ್ನೇ ಬದಲಾಯಿಸಿತು. ಅದು 63-64 ನೇ ಇಸ್ವಿ. ನನ್ನಪ್ಪ-ಅಮ್ಮ ಪೌರ ಕಾಮಿಕರಾಗಿ ದುಡಿಯುತ್ತಿದ್ದರು. ಮನೆಯಲ್ಲಿ ಅಗಾಧ ಬಡತನ, ನನ್ನ ತಂದೆ ಇಡೀ ಜೀವನ ಪೌರಕಾರ್ಮಿಕರಾಗಿ ದುಡಿದು ರೋಗ ಬಂದು ತೀರಿಕೊಂಡರು. ನಾನಾಗ ಚಿಕ್ಕವನು. ತಂದೆ ಸತ್ತಾಗ ನಮ್ಮ ಮನೆಯಲ್ಲಿ ಒಂದು ಪೈಸೆ ದುಡ್ಡಿರಲಿಲ್ಲ. ಧಫನ್ ಮಾಡಲು ನಯಾಪೈಸೆ ಇರಲಿಲ್ಲ. ನನಗೆ ದಿಕ್ಕೇ ತೋಚದಂತಾಗಿತ್ತು. ನಮ್ಮ ಅಪ್ಪನಿಗೆ ಗೊತ್ತಿದ್ದವರ ಮನೆಗೆ ಹೋದೆ. ಅಲ್ಲಿ ಕುಳಿದ್ದ ಧಣಿಯನ್ನು ಕಂಡು ` ನಮ್ಮ ಅಪ್ಪ ತೀರಿಕೊಂಡಿದ್ದಾನೆ ಧಫನ್ ಮಾಡಲೂ ಹಣ ಇಲ್ಲ ಸ್ವಲ್ಪ ಸಾಲ ಕೊಡಿ ದುಡಿದು ತೀರಿಸುತ್ತೇನೆ’ ಎಂದು ಅಂಗಲಾಚಿದೆ. ನನ್ನನ್ನು ನೋಡಿದ ಆತ ಒಳಗೆ ಹೋದವನು ಮತ್ತೆ ಮುಖ ಕೆಕ್ಕರಿಸಿಕೊಂಡು ನೋಡಿದ. ಮತ್ತೆ ಮತ್ತೆ ಬೇಡಿದೆ. ಅಂಗಲಾಚಿದೆ ಅದಕ್ಕೆ ಅವನು ತಿರುಗಿ ಹೇಳಿದ್ದು `ಲೋ ನಿಮಗ್ಯಾಕ್ಲಾ ದುಡ್ಡು ಬೇಕು ಕುಡಿದು ಸಾಯೋಕಾ..? ನೀನು ಸತ್ರೆ ಕೊಟ್ಟ ಸಾಲದ ಹಣವನ್ನು ಯಾರು ತೀರಿಸುತ್ತಾರೆ’ ಎಂದು ಮುಖಕ್ಕೆ ಹೊಡೆದಂತೆ ಹೇಳಿದ. ಅವನ ಮಾತು ಕೇಳಿ ನಾನಲ್ಲೆ ಕುಸಿದು ಬಿದ್ದೆ. ಸಾವರಿಸಿಕೊಂಡು ನಿರ್ಧಾರ ಮಾಡಿಕೊಂಡು ಎದ್ದೆ ` ಈ ಜನಾಂಗದಲ್ಲಿ ಹುಟ್ಟಿದಕ್ಕೆ ಇಂತಹ ಬದುಕು ಸಾಕಾಗಿದೆ. ನಾನು ನನ್ನ ಜನಗಳಂತೆ ಆಗಬಾರದು ನಾನು ಯಾವತ್ತೂ ಕುಡಿಯಬಾರದು’ ಎಂದು ಮನಸಲ್ಲೇ ನಿರ್ಧರಿಸಿಕೊಂಡೆ. ಅದರಂತೆ ಈವತ್ತು ನಡೆದುಕೊಂಡು ಬಂದಿದ್ದೇನೆ. ಹೆಂಡ ಹೇಗಿರುತ್ತದೆ ಎಂಬ ರುಚಿ ಈ 65 ವರ್ಷಗಳಲ್ಲಿ ಒಂದು ದಿನವೂ ಕಂಡುಕೊಂಡಿಲ್ಲ. ಎಸ್ಎಸ್ಎಲ್ಸಿ ಓದಿ ಸರ್ಕಾರಿ ಕೆಲಸ ಹಿಡಿಯಲೇ ಬೇಕು ಎಂದು ಕಷ್ಟಪಟ್ಟು ಸರ್ಕಾರಿ ಕೆಲಸ ಪಡೆದುಕೊಂಡೆ. ಸಮಾಜದಲ್ಲಿ ಈಗ ನನ್ನನ್ನು ಎಲ್ಲರೂ ಗೌರವದಿಂದ ಕಾಣುತ್ತಾರೆ.
ಹೀಗೆಂದು ಹೇಳಿದ್ದು ಬಾಬು ಜನರೆಲ್ಲಾ ಕಾಲೇಜು ಬಾಬು ಎಂದೇ ಇವರನ್ನು ಕರೆಯುತ್ತಾರೆ.
ಈ ಸಮುದಾಯದಲ್ಲಿ ಹುಟ್ಟಿ ಸಮಾಜದಲ್ಲಿ ಕೆಲಸ ಮಾಡಿರುವ ಬಾಬು ಅವರಿಗೆ ಪೌರಕಾರ್ಮಿಕರ ನೋವಿನ ಆಳದ ಮಿಡಿತ ಗೊತ್ತಿದೆ. ಆ ನೋವು. ಅದರ ಹಿಂದೆ ಇರುವ ಸತ್ಯಗಳು ಎಲ್ಲವೂ ಗೊತ್ತಿದೆ. ಈ ಕಾರಣಕ್ಕೆ ಅಂದು ಪೌರಕಾರ್ಮಿಕ ಆಗಲೇಬಾರದು ಎಂದು ತೀರ್ಮಾನಿಸಿದಕ್ಕೆ ಸರ್ಕಾರಿ ಕೆಲಸ ಪಡೆದು ಸಮಾಜದಲ್ಲಿ ಗೌರವಯುತ ವ್ಯಕ್ತಿಯಾಗಿದ್ದಾರೆ. ಈ ಬಗ್ಗೆ ಅವರಿಗೆ ಹೆಮ್ಮೆ ಇದೆ. ಅವರೇ ಹೇಳುವಂತೆ ` ಇಡೀ ಪರಿಸರವನ್ನು ಸ್ವಚ್ಛ ಮಾಡುವರೀಗೆ ಈ ನಮ್ಮ ಜನ ಬೆಲೆ ಕೊಡುವುದಿಲ್ಲ. ತುಚ್ಛವಾಗಿ ನೋಡುತ್ತಾರೆ ಇದೆಂಥ ಸಮಾಜ ಸ್ವಾಮಿ? ಇದೆಂಥಹ ದೇಶ..? ನಾವೂ ಮನುಷ್ಯರಲ್ಲವೇ..? ಯಾಕೆ ನಮ್ಮನ್ನು ತುಚ್ಛವಾಗಿ ನೋಡುತ್ತೀರಿ..? ಕೊಲೆ ಮಾಡಿದವನಿಗೆ , ಕಳ್ಳನಿಗೆ ಗೌರವ ಕೊಡುತ್ತಾರೆ ? ಪೌರಕಾರ್ಮಿಕರಿಗೇಕೆ ಗೌರವ ಕೊಡುವುದಿಲ. ನಮ್ಮನ್ನು ಹೀಗೆ ನೋಡುತ್ತೀರಲ್ಲಾ ನಾವು ಕಸ ತುಂಬುವಾಗ ನಮ್ಮೊಂದಿಗೆ ಹತ್ತು ನಿಮಿಷ ಜತೆಗಿರಿ ನೋಡೋಣ..? ಎಂತೆಂಥಹಾ ರೋಗಗಳು ಬರುತ್ತಿವೆ. ಇದರ ಬಗ್ಗೆ ಯಾರಿಗಾದರೂ ಕನಿಷ್ಟ ಅರಿವಿದೆಯೇ..?
ಊರಿಗೆಲ್ಲ ಸಾಂಕ್ರಾಮಿಕ ರೋಗ ಹರಡುತ್ತಿರುತ್ತದೆ. ಅದನ್ನು ಸರಿಪಡಿಸಲು ಬ್ಲೀಚಿಂಗ್ ಪೌಡರ್ ಚೆಲ್ಲಿಕೊಂಡು ಬರುತ್ತೇವೆ. ಚರಂಡಿಗಳಿಗೆ ನುಗ್ಗಿ ಔಷಧಿ ಹಾಕುತ್ತೇವೆ..? ಊರನ್ನೆಲ್ಲಾ ರೋಗ ಮುಕ್ತರನ್ನಾಗಿ ಮಾಡುತ್ತೇವೆ ಒಂದು ದಿನವಾದರೂ ನೀವು ನಮ್ಮನ್ನು ಪ್ರೀತಿಯಿಂದ ಕರೆದು ಮಾತನಾಡಿಸಿದ್ದೀರಾ..? ಒಂದು ಲೋಟ ಕಾಫಿ ಕೊಟ್ಟಿದ್ದೀರಾ..? ಇಷ್ಟೆಲ್ಲಾ ಮಾಡಿದರೂ ನಮ್ಮ ತುಚ್ಛವಾಗಿ ನೋಡುತ್ತೀರಿ..? ಯಾಕೆ ನಾವೂ ನಿಮ್ಮಂತೆ ಮನುಷ್ಯರಲ್ಲವೇ..? ಒಂದು ಲ್ಯಾಟ್ರಿನ್ ಕ್ಲೀನ್ ಮಾಡುವಾಗ ಎಷ್ಟು ರೋಗ ಹರಡುತ್ತವೆ ಎಂಬುದನ್ನು ನೀವು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಅಂತಹ ಜಾಗದಲೆಲ್ಲಾ ಇಳಿದು ಕೆಲಸ ಮಾಡಿ ನಿಮಗೆ ಅನುಕೂಲ ಮಾಡುತ್ತೇವೆ. ನಿಮ್ಮ ಆರೋಗ್ಯವನ್ನು ನಿರಂತರವಾಗಿ ಕಾಪಾಡಿಕೊಂಡು ಬಂದಿದ್ದೇವೆ. ಈ ಕೆಲಸದಲ್ಲಿ ನಮಗೆ ಎಷ್ಟು ಅಲರ್ಜಿ ಆಗುತ್ತದೆ ಎಂಬ ಕನಿಷ್ಟ ಜ್ಞಾನ ಕೂಡ ಜನರಿಗೆ ಇರಲಾರದು.
ಹೆಣ ಕುಯ್ಯುವರಿಗೂ ಬೆಲೆ ಇದೆ ಸ್ವಾಮಿ ನಮಗೆ ಬೆಲೆ ಇಲವಲ್ಲಾ ಈ ಸಮಾಜದಲ್ಲಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಬಾಬು.

`ಹಾಸನ ಸೇರಿದಂತೆ ಇಡೀ ರಾಜ್ಯದಲ್ಲಿ ನೆಲೆಸಿರುವ ಮಾದಿಗ ಸಮುದಾಯದ ಪೌರ ಕಾರ್ಮಿಕರೆಲ್ಲರೂ ಆಂದ್ರದಿಂದ ಬಂದವರು. ತೆಲುಗು ಮೂಲದವರು. ನಿಮಗೆ ಗೊತ್ತಿರಲಾರದು ಈ ಸಮುದಾಯದ ನೆಂಟರ ಹೊರತಾಗಿ ಇತರೆ ಸಮುದಾಯದ ಯಾವೊಬ್ಬರೂ ಕನಿಷ್ಟ ಹಬ್ಬದಲ್ಲೂ ಕೂಡ ನಮ್ಮ ಮನೆಗೆ ಬರುತ್ತಿರಲಿಲ್ಲ. ಇಂದು ಹಬ್ಬ ಹರಿದಿನಗಳಲ್ಲಿ ಬರುತ್ತಾರೆ. ನಮಗೆ ಗೊತ್ತಿರುವಂತೆ ವಿಶ್ವ ಹಿಂದೂ ಪರಿಷತ್ ನವರು ಅಸ್ಪೃಶ್ಯತೆ ಆಚರಣೆ ನಿವಾರಣೆಗೆ ಎಂದು ಬಂದಿದ್ದು. ಅದಷ್ಟೆ ಯಾರೊಬ್ಬ ಮೇಲಜ್ಞಾತಿಯವರೂ ಮನೆಗೆ ಬಂದಿಲ್ಲ. ಬ್ರಾಹ್ಣಣರ ಕಾಲು ನಮ್ಮ ಮನೆಯ ಪಾದ ಸೋಕಿಸಿಯೇ ಇಲ್ಲ ಸ್ವಾಮಿ. ನಮ್ಮ ಜನಾಂಗದಲ್ಲಿ ಬದಲಾವಣೆಯಾಗಿದೆ ನಿಜ. ನಮ್ಮ ಜನರೇಷನ್ ಮುಗಿದು ನಮ್ಮ ಮಕ್ಕಳು ಬದಲಾಗಿದ್ದಾರೆ. ಆದರೆ ನಮ್ಮ ಬದುಕು, ಸಾಮಾಜಿಕ ಸ್ಥಾನಮಾನ, ಗೌರವ, ಪರಿಸ್ಥಿತಿ ಇಂದಿಗೂ ಬದಲಾಗಿಲ್ಲ. ನೋಡುವ ದೃಷ್ಠಿಕೋನವೂ ಬದಲಾಗಿಲ್ಲ. ಗಾಂಧಿ ಕಂಡ ಕನಸು ನಮ್ಮ ಸಮಾಜದಲ್ಲಿ ಇನ್ನೂ ನೆನಸಾಗಿಲ್ಲ ಸ್ವಾಮಿ ಅದು ಬದಲಾಗಬೇಕು ಎಂದರೆ ಮತ್ತೊಬ್ಬ ಗಾಂಧಿ ಮತ್ತೊಬ್ಬ ಅಂಬೇಡ್ಕರ್ ಹುಟ್ಟಿ ಬರಬೇಕೇನೊ..? ಎಂಬ ಆಶಾವಾದ ಬಾಬು ಅವರದ್ದು.
ಇಂತಹ ಕಾಲೇಜು ಬಾಬು ಹಾಸನದ ಕಾಲೇಜಿನಲ್ಲಿ ಗುಮಾಸ್ತನಾಗಿ ಸಾಕಷ್ಟು ಕೆಲಸ ಮಾಡಿ ಒಂದು ಹಂತಕ್ಕೆ ಬಂದು ಈಗ ರಿಟೈಡರ್್ ಆಗಿದ್ದಾರೆ. ಮಕ್ಕಳನ್ನು ಚೆನ್ನಾಗಿ ಓದಿಸಿ ನೌಕರಿಗೆ ಕಳಿಸಿದ್ದಾರೆ. ಇವರು ಕೆಲಸ ಮಾಡುವಾಗಲೇ ಎಸ್ಸಿ-ಎಸ್ಟಿ ವಿದ್ಯಾಥರ್ಿಗಳಿಗೆ ಕಾಲೇಜಿನಲ್ಲಿ ಸರಿಯಾಗಿ ಪ್ರವೇಶ ಕೊಡದಿದ್ದ ಸಂದರ್ಭದಲ್ಲಿ ಸಾಕಷ್ಟು ಶ್ರಮವಹಿಸಿ ಅವರಿಗೆ ಗಮನ ಹರಿಸಿ ಸೀಟು ಸಿಗುವಂತೆ ನೋಡಿಕೊಂಡಿದ್ದಾರೆ. ಹಾಸ್ಟೆಲ್ ಕೊಡಿಸಿದ್ದಾರೆ. ಹೀಗೆ ಓದಿ ಎಂದು ಬುದ್ದಿವಾದ ಹೇಳಿದ್ದಾರೆ.
ಇಷ್ಟೆಲ್ಲಾ ನೋವಿಗೆ ಕಾರಣ. ಅವರ ವೃತ್ತಿ. ನಮ್ಮ ಜನಾಶಂಗದ ಮಕ್ಕಳ್ಯಾರು ಈ ಕಸುಬನ್ನು ಮಾಡಬಾರದು ಎಂದು ಗಟ್ಟಿಯಾಗಿ ಕೂಗಿ ಹೇಳುತ್ತಾರೆ.
ಕಸ ಗುಡಿಸುವುದು ಒಂದು ನಿತ್ಯಕಾಯಕ, ಬೆಳಗಾದರೆ ಸಿಟಿ ಕ್ಲೀನ್ ಆಗಲೇಬೇಕು. ಹೀಗಿರುವಾಗ ಇದೊಂದು ಸಮಾಜದ ಅತ್ಯಮೂಲ್ಯ ಅಂಗ. ಇಂತಹವರನ್ನು ಕಾಂಟ್ರಾಕ್ಟ್ ಬೇಸಿಕ್ ಮೇಲೆ ತೆಗದುಕೊಳ್ಲುವ ಪದ್ಧತಿ ಮೊದಲು ನಿಲ್ಲಬೇಕು. ಈ ಕೆಲಸ ಮಾಡುವರೆಲ್ಲರನ್ನೂ ಪರ್ಮನೆಂಟ್ ಮಾಡಬೇಕು. ಹೀಗಿದಾಗ ಇವರಿಗೂ ಒಂದು ಸಮಾಜದಲ್ಲಿ ಗೌರವ. ದಯವಿಟ್ಟು ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು. ಇದು ಆಗಲೇಬೇಕು. ಈವರೆಗೆ ಸಮಾಜಕ್ಕಾಗಿ ಜೀವನ ತೇಯ್ದಿರುವರಿಗೆಲ್ಲ ಇದೊಂದು ದೊಡ್ಡ ಉಡುಗೊರೆ ಎಂದು ಒತ್ತಾಯಿಸುತ್ತಾರೆ ಕಾಲೇಜು ಬಾಬು.
ಜಾಡಮಾಲಿಗಳ ಜಗತ್ತು : ಬ್ರಾಹ್ಮಣರ ಪಾದ ನಮ್ಮ ಮನೆಯ ಬಾಗಿಲನ್ನು ಇನ್ನೂ ಸೋಕಿಲ್ಲ…
ನಿಮಗೆ ಇವೂ ಇಷ್ಟವಾಗಬಹುದು…




Naagareekaraada naavu eshtu kroorigalu
sir yaava meljatiyavaroo bandilla anda mele bramhanare yeke tale barahavaagabeku.tappu yellaraddu iruttade, bramhanarannoo serisi. aadare bramhanaranne target maaduva manastitiya bagge maatra nanna virodha. jaati vyavaste avaru maaduva udyogagalinda emba nambike nannadu. bramhanarannu maatra target maaduva moolaka bere meljaatiyavaru ( kshamisi, melu emba padada bagge nanage teevra asamaadhanavide) tamma honegaarikeyinda tappisikolluttiddareno yemba abhipraya nannadu.
Oduttiddare tumba novaaguttade .
S… Malini.. u r rght..
ಮಾಲಿನಿ ಅವರೇ ನಿಮ್ಮ ಪ್ರಶ್ನೆ ಚಿಂತನಾರ್ಹ. ನಾನು ಬ್ರಾಹ್ಮಣರನ್ನು ಟಾರ್ಗೆಟ್ ಮಾಡಿಲ್ಲ. ನೀವೇ ಹೇಳಿದಂತೆ ಕೆಲಸದಿಂದ ಜಾತಿ ನಿರ್ಧರಿಸುವುದಾದರೆ ಪೌರ ಕಾರ್ಮಿಕರನ್ನು ಯಾವ ಜಾತಿಯಿಂದ ಕರೆಯುತ್ತೀರಿ…? ವರ್ಣ ವ್ಯವಸ್ತೆ ಪ್ರಕಾರ ಅವರು ಮಾಡುವ ಕೆಲಸದ ಪ್ರಕಾರ ಜಾತಿ ನಿರ್ಧಾರ ಆಗುತ್ತದೆ ಎಂದಾದರೆ ಬ್ರಾಹ್ಮಣರು ಯಾವ ಸ್ಥರದಲ್ಲಿ ಬರುತ್ತಾರೆ….? ಹೀಗಿದ್ದಾಗ ಅವರು ಒಬ್ಬ ಅಸ್ಪೃಶ್ಯನ ಮನೆಗೆ ನುಗ್ಗುವುದು ಎಂದರೆ ಅದರಲ್ಲಿ ವಿಶೇಷತೆ ಇದೆ ಅಲ್ಲವೇ..? ಇದಕ್ಕೂ ಮೂಖ್ಯವಾಗಿ ಈ ಜಾಡುಮಾಲಿಗಳ ಮನೆಯಲ್ಲಿ ಯಾವುದೇ ಮದುವೆ ಅಥವಾ ಇತರೆ ಕಾರ್ಯಗಳಿಗೆ ಬ್ರಾಹ್ಮಣರನ್ನು ಕರೆದರೂ ಅವರು ನಿರಾಕರಿಸಿದ್ದಾರೆ ಇದಕ್ಕೆ ಏನೆನ್ನೋಣ..?
sir naanu heluttiruvudoo idanne. nimma kaalajiyannu, avara asahaayakateyannu naanu prashnisuttilla. avaru karedare bramhanaru matra alla navellaroo eega melu(?) jaati endu kareyuttiruva yaroo hoguvudilla. idannu manaveeyate iruva yaarobbaroo oppuvudilla. haagondu vele bramhanaru manege baralu niraakarisiddre adu avara mattavannu torisuttade. anthavaru ivara manege kalidalilla emba koragu namage beka?. yaava paadavoo kalidalu oppadaaga bramhanara title maatra bekitta ennuvudu maatra nanna prashne. any how aa sanna aakshepada horataagiyoo nimma lekhana chennagide. Thank you sir.
Thank u
I agree with malini … bramhanaru antha elroo target maadi maadi ugeethidre aa jaathiyalli hutti kooda bhinnavagi yochisuvavarannoo sersi baiyuttale hodre anthavaru eshtu dina antha towel thegdu oresikollodikke saadhya? Yaako tumba pakshapatha madtiddiraa ansi bidutte …
Bharathi madom dayavittu naanu brahmana virodhi alla brahmanyada virodhi naanu dalith bramnyada viruddavu barediddene.. Dayavittu mistaje madikollabedi..
braahmanarannu nitya baiyadiddare kelavarige tindaddu jeernavaaguvudilla. naanu braahmana virodhi alla, braahmanyada virodhi annuvudu burude. idakke “ಬ್ರಾಹ್ಣಣರ ಕಾಲು ನಮ್ಮ ಮನೆಯ ಪಾದ ಸೋಕಿಸಿಯೇ ಇಲ್ಲ ಸ್ವಾಮಿ” enba maate saakallave puraave?
ಕಸ ಗುಡಿಸುವುದು ಒಂದು ನಿತ್ಯಕಾಯಕ, ಬೆಳಗಾದರೆ ಸಿಟಿ ಕ್ಲೀನ್ ಆಗಲೇಬೇಕು. ಹೀಗಿರುವಾಗ ಇದೊಂದು ಸಮಾಜದ ಅತ್ಯಮೂಲ್ಯ ಅಂಗ. ಇಂತಹವರನ್ನು ಕಾಂಟ್ರಾಕ್ಟ್ ಬೇಸಿಕ್ ಮೇಲೆ ತೆಗದುಕೊಳ್ಲುವ ಪದ್ಧತಿ ಮೊದಲು ನಿಲ್ಲಬೇಕು. ಈ ಕೆಲಸ ಮಾಡುವರೆಲ್ಲರನ್ನೂ ಪರ್ಮನೆಂಟ್ ಮಾಡಬೇಕು. ಹೀಗಿದಾಗ ಇವರಿಗೂ ಒಂದು ಸಮಾಜದಲ್ಲಿ ಗೌರವ. ದಯವಿಟ್ಟು ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು……………………………………………………………………………………………
ಅರ್ಥಪೂರ್ಣವಾಗಿದೆ