ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜವಾರಿ ಝಲಕ್ : ' ಅಪ್ಪ ಅಂದ್ರ ಆಕಾಶ. ಅಂಗಾರ ಅವ್ವ ಅಂದ್ರ ?'

– ಶಿವು ಮೊರಿಗೇರಿ

‘ಅಪ್ಪ ಅಂದ್ರ ಆಕಾಶ’ ‘ಅವಧಿ’ಲಿ ಭಾಳಾ ನೋಡಿದ್ಯ. ಇದ್ರ ಬಗ್ಗೆ ಏನರ ಬರಿಯಕಕೈತಾ ? ಅಂತ ಬರಬ್ಬರಿ ತಲಿ ಕೆಡಿಸ್ಕಂಡಿದ್ಯ. ಆದ್ರ, ಯಜಮಾನ್ರ ವಿಷ್ಯ ನನಿಗ್ಯಾಕ ? ಅಂತ ಸುಮ್ಮನಾಗಿದ್ಯ. ಇದೆಲ್ಲಾ ಆಗಿ ಒಂದು ವಾರ ಆಗಿರಬೋದು. ಮೊನ್ನೆ ಐತ್ವಾರದ ರಜಾ ಇತ್ತು. ನನ್ನ ಪುಣ್ಯಕ್ಕ ನಮ್ಮ ಸಾರ್, ಯಾದಾ ಪಂಕ್ಷನ್ನು ಅಂತ ಶಿವಮೊಗ್ಗಕ್ಕೆನಾ, ಮೈಸೂರಿಗ್ಯ . ಎಲ್ಲಿಗ್ಯ ಹೋದ್ರು. ಹೊಂಡಾಕಿನು ಮುಂಚೆ, ಲೇ ಶಿವಾ ಇನ್ನು ನಾಕು ದಿಸಾ ನಾ ಮನ್ಯಾಗಿರಲ್ಲ. ನೀನೊಬ್ಬನಾ ಬೇಕಾರ ಇರು. ನಿನಿಗ್ಯ ಬ್ಯಾಸ್ರ ಆದ್ರ ನಿನ್ನ ಗೆಣೇರ ಹತ್ರ ಹೋಗ್ಲೇ ಅಂದ್ರು. ತೂಗಿಡಿಸತಿದ್ದಾನಿಗೆ ಹಾಸಿ ಕೊಟ್ಟಂಗಾತು. ಮೃಷ್ಟ್ರೇ ನಿಮ್ಮ ಪಾದಕ್ಕ ಬಿದ್ದೆ ಅಂತ ಮನಸಿನ್ಯಾಗ ಅನ್ಕಂಡು, ಸರಿ ಸಾ ನಾನು ನನ್ನ ಹಳೆ ಉಡ್ರನ್ನ ಮಾತಾಡಿಸ್ಕಂಡು ಬರ್ತ್ನಿ ಅಂತ ವಂಡಕರ ಕರದು ಮತ್ಯ ಬಕ್ಕಣತುಂಬ ರ್ವಕ್ಕ ಕೊಟ್ರು.
ಸ್ವರ್ಗ ನೋಡಕ್ಯಾಕ ಸಾಯಬೇಕು ? ಇಲ್ಲೇ ಸಿಗ್ತೈತಿ. ನೋಡಾ ತಾಕತ್ತಿರಬೇಕು. ಅಂತ ಅಂದ್ಕಂಡು ನಮ್ಮ ಸಾರ್ ಮನಿಲಿದ್ದ ವಂಟೆ. ಸೀದ ನನ್ನ ‘ಸಂವಾದ’ ಸಂಸ್ಥೀಗ್ಯ ಬಂದ್ಯ. ಆದ್ರ ಅಲ್ಲಿ ಅದೇನಾ ಪ್ರೋಗ್ರಾಂ ನಡೀತಿತ್ತು. ಎಲ್ಲಾ ಹೊಸಬ್ರು. ಕೆಡ್ತಲೆ ಕೆಲ್ಸ ಅನನಷ್ಟತ್ಗೆ ಆ ಪ್ರೋಗಾಂ ನಡ್ಸ ರಮೇಶಣ್ಣ ಬಂದು ಮಾತಾಡಿಸಿದ್ರು. ಹೋದ ಜೀವ ವಳ್ಳಿ ಬಂದಾಂಗಾತು. ನಾನು ಒಂದೆಲ್ಡು ದಿನಾ ಇಲ್ಲೇ ಇರ್ತಿನಿ ಅಂದ್ಯ. ಏನು ಶಿವಣ್ಣಾ ಅಂಗ ಕೇಳ್ತಿ ? ನಿನ್ನ ಬೆಡ್ಡು ನಿನಿಗ್ಯ ಇರ್ತೈತಿ ಇರು ಹೋಗು ಅಂದ ರಮೇಶಣ್ಣ. ಸರಿ ಬಿಡಣ್ಣಾ ಅಂದ್ಕಂಡು, ವತ್ತಟ್ಗೆ ಅವರ ಕ್ಲಾಸು. ಇನ್ನು ವತ್ತಟ್ಗ್ಯ, ಕಂಪ್ಯೂಟರ್ ಲ್ಯಾಬಿನಾಗ ನನ್ನದೇನಾ ಹುಡುಕಾಟ. ಅಂತೂ ಭಾರತಕ್ಕ ಸ್ವತಂತ್ರ್ಯ ಸಿಕ್ತು ಅಂದ್ಕಂಡ್ಯ. ಪಸ್ಟ್ನೇ ದಿಸ ಎಂಗಾ ಒಂದು ನಡೀತು. ಆದ್ರ ಎಲ್ಡ್ನೇ ದಿಸಾ ಟೈಂ ಪಾಸಿಗ್ಯ ಅಂತ ಗೂಗಲ್ನಾಗ ಬರಾ ಯೂಟೂಬ್ ಆನ್ ಮಾಡಿ ನನಿಗ್ಯ ಬೇಕಾದ ಎಲ್ಡು ಸಿನ್ಮಾ ನೋಡಿದ್ಯ. ಅಷ್ಟೊತ್ಗೆ ರಾತ್ರಿ ಎಂಟು ಗಂಟಿ ಆಗಿತ್ತು. ಕಿವಿಗ್ಯ ಅಕ್ಕಂಡಿದ್ದ ಏರ್ ಪೋನ್ ತೆಗಿದು ಹಿಂದಕ್ಕ ತಿರುಗಿ ನೋಡಿದ್ರ, ಆ ಹುಡ್ರನ್ನ ಅಕ್ಕಂಡು ಇನ್ನೂ ರುಬ್ಬುತಿದ್ರು ನಮ್ಮ ರಾಮಕ್ಕ. ವಟ್ಟಿ ಚುರ್ಗುಟ್ಟಾಕತ್ತಿತ್ತು. ಇವರನ್ನ ಕಾದ್ರ ಆಗಲಲೆ ತಮ್ಮಾ ಅಂದ್ಕಂಡು, ಓಟ್ಲಿಗ್ಯ ಹೋಗಿ ರ್ವಕ್ಕ ಕೊಟ್ಟು ಉಂಡು ವಳ್ಳಿ ಬಂದ್ರೂ, ಇನ್ನೂ ರುಬ್ಬಾ ಚಟ್ನಿ ಸಣ್ಯಾಗಿದ್ದಿಲ್ಲ ಅನ್ನಸ್ತೈತಿ. ತೀರಾ ಒಳ್ಳೇನಾಗಾದು ಯಾಕ ಬೇಕಲೇ ನನಿಗ್ಯ ಅಂದ್ಕಂಡು, ಕತ್ತಿ ಸತ್ರ ಹಾಳು ಗ್ವಾಡಿ ಇದ್ದಾ ಐತಲ್ಲ ? ಅಂದ್ಕತ, ಮತ್ಯ ಕಂಪೂಟರ್ ಮುಂದ್ಯ ಕುಂತ್ಕಂಡ್ಯ.
ಬಿಡ್ಗಡೀನಾ ಇಲ್ಲ ಮತ್ಯ ಅದ ಯೂಟೂಬಿಗ್ಯ ಹೋದ್ನ್ಯಾ, ಕನ್ನಡ ಸಿನ್ಮಾಗಳನ್ನ ಹುಡುಕ್ತಾ, ಹುಡುಕ್ತಾ, ಅರಮನಿ ಸಿಕ್ತು. ಪ್ರೀತಿ ತುಂಬಿದ ಪ್ರತಿ ಗೂಡೂ ಅರಮನಿನಾ ಅಂತ ಸಬ್ ಲೈನ್ ಇತ್ತು. ಎಲ್ಡು ವರ್ಸದ ಕೆಳಗ ಊರು ಬಿಡಾಕೂ ಮುಂಚೆ ನಮ್ಮನಿ ಟಿವ್ಯಾಗ ನೋಡಿದ್ದ ಪಿಚ್ಚರದು. ಅರ್ದಂಬರ್ದ ನೋಡಿದ್ಯ. ಇವತ್ತೈತಲೇ ನಿನಿಗ್ಯ ಅಂದ್ಕಂಡು ಸಿನ್ಮಾ ನೋಡಾಕ ಚಾಲೂ ಮಾಡಿದ್ಯ. ಆ ಸಿನ್ಮಾ ನೋಡ್ತಾ, ನೋಡ್ತಾ, ನೋಡ್ತಾ, ನನಿಗ್ಯ ಅರಿವಿಲ್ದ ನನ್ನ ಕಣ್ಣಾಗ ನೀರು ಬಂತು. ಅದ್ಯಾರಾ ಕುಡುಕ ಸೌಕಾರಗ ಪೋಟಾ ತೆಗಿಯಾಕೋಗಿ ದೊಡ್ಡಸ್ತ್ಕಿ ಮಾತಾಡಿ, ನಡಾ ಆದ್ಯಾಗ ಸ್ಟುಡಿಯೋ ಸಾವುಕಾರನ್ನ ಪೋನ್ ಬಂದು, ವಳ್ಳಿ ಮತ್ಯ ಆ ಸೌಕಾರನ ಮನಿಗ್ಯ ಹೋಗಿ, ಮತ್ತೊಮ್ಮಿ ಪೋಟಾ ತೆಗದು, ಅವನ ಜತಿಗ್ಯ ಕುಡ್ದು, ವಡದೋದ ಆ ಮುದ್ಕನ ಕುಟುಂಬನ ಒಂದ್ಮಾಡಿ ಒಂದು ಪ್ಯಾಮಿಲಿ ಪೋಟೋ ತಿಗಿಯಾ ತಾಕತ್ತು ಯಕಶ್ಚಿತ್ ಒಬ್ಬ ಪೋಟಾಗ್ರಾಪರಿಗ್ಯ ಇರ್ತೈತಿ ಅನ್ನದನ್ನ ನೋಡಿದಾಗ ಜಠಟಿ’ಣ ರಿಣಜರಜ ಚಿ ಠಿಚಿಡಿಠಟಿ ಠಜಿ ಛಿಟಠಣ ಅನ್ನಾ ಗಾದಿ ನೆಪ್ಪಾತು. ಆ ಸಿನ್ಮದಾಗ ಎಷ್ಟೋ ವರ್ಸದ ಹಿಂದ್ಯ ಹರಿದ ಹೋಗಿದ್ದ ಸಂಸಾರ ಮತ್ಯ ಒಂದು ಮಾಡಿ, ಒಂದು ಗ್ರೂಪ್ ಪೋಟಾ ತೆಗಿಯಾಕ ಆ ಪೋಟಾಗ್ರಾಪರ್ ಪಡಾ ಕಷ್ಟ ಒಂದ್ಕಡಿಗಾದ್ರ, ಆ ಕುಟುಂಬದ ತಲಿ ನೆರ್ತಾರೆಲ್ಲ ಆ ಮುತ್ಯಾನತ್ರ ಬರಾದಾ ಅಪ್ಪ ಅನ್ನ ಪ್ರೀತಿಲಿದ್ದ. ಕಡೀಗೂ ಆ ಪ್ಯಾಮಿಲಿ ಒಂದಾಕೈತಿ. ಆ ಪೋಟಾಗ್ರಾಫರ್ ಗ್ರೂಪ್ ಪೋಟಾ ತೆಗಿತಾನ. ಆದ್ರ ಲಾಸ್ಟಿಗ್ಯ ಆ ಮುತ್ಯಾನ ಕಣ್ಣಾಗ್ಲ ನೀರಿಗ್ಯ ಸಿನ್ಮಾ ನೋಡಾರಾ ಉತ್ರ ಕೊಡಾಕು. ಆ ಸಿನ್ಮಾ ಮುಗಿತಿದ್ದಂಗನ ನನಿಗ್ಯ ಯಾಕಾ ಗಂಟಲು ಹಿಡ್ಕಂಡಂಗಾತು. ಹಿಂದ್ಯಲೆ ಕಂಪೂಟರ್ ಆಪ್ ಮಾಡಿದಮ್ಯಾಗ ನನಿಗ್ಯ ಕಾಡಿದ್ದಂದ್ರ ಆ ಸಿನ್ಮಾದಾಗ, ಆ ಮುತ್ಯಾನ ಮಕ್ಕಳೆಲ್ಲಾ ಸೇರಿದ್ದು ಮುದೇ ವಯಸ್ಸಿನಾಗ ನಮ್ಮಪ್ಪ ಅನಾಥ ಅಕ್ಕಾನ ಅನ್ನ ಒಂದಾ ಕಾರಣಕ್ಕ.

ಇಂದೆಲೆ ನನಿಗ್ಯ ನೆಪ್ಪಾದದ್ದು ‘ಅಪ್ಪ ಅಂದ್ರ ಆಕಾಶ’ಲೇ ತಮ್ಮಾ ಅಂತ. ಅಪ್ಪನಿಲ್ದಂಗ, ಅವ್ವ ಬರಲ್ಲ. ಅವ್ವನ ಒಪ್ಗಿ ಇಲ್ದ, ಅಪ್ಪ ಸೃಷ್ಠಿಯಾಗಲ್ಲ. ಇವರಿಬ್ರೂ ಇಲ್ದ ಮಕ್ಳು ಆಕಾಶದಿಂದ ಇಳಿದು ಬರಲ್ಲ. ಎಲ್ಲೂ ಹುಡುಕಬ್ಯಾಡ್ರಿ ಇದ್ರ ಅಚೆಕ ಜೀವನಾನ ಇಲ್ಲ. ಎಕ್ಕಧಂ ನನಿಗ್ಯ ನಮ್ಮಪ್ಪ ನೆಪ್ಪಾದ. ಸಣ್ಣ ವಯಸ್ಸಿನಾಗ ಒದ್ದು ಬುದ್ದಿ ಹೇಳಾದು, ಮಕ್ಕಳು ಹರೆಕ್ಕ ಬಂದಾಗ ಪ್ರೆಂಡ್ ಇದ್ದಾಂಗಿರಾದು, ಮುಪ್ಪಿನ ಕಾಲಕ್ಕ ಮೊಮ್ಮಕ್ಕಳ ಮುಂದೆ ಮತ್ಯ ಮಗುವಾಗೋದು, ಕೈ ಕಾಲು ಬಿದ್ದು ಹೋದ ಮ್ಯಾಗ ತಾನೆತ್ತ ಮಕ್ಳ ಎದ್ರಿಗ್ಯ ಕೂಸಾಗದು, ಹುಡ್ಗಾಟ್ಕಿನೂ ಅಲ್ಲ, ಬದ್ಕ ನಾಟ್ಕಾನೂ ಅಲ್ಲ. ಯಾಕಂದ್ರ ಅಪ್ಪಂದ್ರ ದೇವ್ರಾಣಿ ಆಕಾಶಾನ. ಆದೀನೂ ಇಲ್ಲ, ಅಂತ್ಯಾನೂ ಇಲ್ಲ. ಕೆಲವು ಇಚಾರದಾಗ ಅಪ್ಪನ ಆದಿ ಅಂತ್ಯನ ಹುಡ್ಕಾಕೂ ಆಗಲ್ಲ. ಅಪ್ಪ ಅಂದ್ರ ಆಕಾಶ. ಅಂಗಾರ ಅವ್ವ ಅಂದ್ರ ? ಪ್ರಶ್ನಿ ನಗ್ನಿ ಮುಳ್ಳಾಗಿ ಬಗ್ಲಿಗ್ಯ ಚುಚ್ತೈತಿ. ಅದಕ್ಕ ಉತ್ರ ಏಳಾಕಂದ್ರ, ಅವ್ವ ಮಕ್ಕಳ ಬಾಲ್ಯದಾಗೂ ದೇವರಾಗಿರ್ತಾಳ, ಯೌವ್ವನದಾಗ ಗುರುವಾಗಿರ್ತಾಳ, ಮುಪ್ಪಿನಾಗ ಆದರ್ಶ ಆಗಿರ್ತಾಳ. ಅಕಿ ಸಾಯಂಗಿದ್ರೂ ಅಕಿ ಕರುಣಾ ಮಕ್ಕಳ ಮ್ಯಾಲ ಬದ್ಲಿನಾ ಆಗಲ್ಲ. ಆದ್ರ ಅಪ್ಪ ಅಂಗಲ್ಲ. ಮಕ್ಳ ಬಾಳೆದಾಗ ಯಾವ ವಯಸ್ಸಿಗ್ಯ ಎಂಗಿರಬೇಕು, ಎಂಗ ನಡ್ಕಬೇಕು, ಅವರನ್ನ ಎಂಗ ಬಾಳ್ಯಾಕ್ಕಚ್ಚಬೇಕು, ಅನ್ನಾದು ತಲ್ಯಾಗ ಕೊರಿತಿರ್ತೈತಿ. ಅದನ್ನ ಸಾದ್ಸವರಿಗೂ ಅತಗ ನಿದ್ದಿನೂ ಬರಲ್ಲ, ನೀರಡ್ಕಿನೂ ಆಗಲ್ಲ. ನೆಮ್ಮದಿನೂ ಇರಲ್ಲ. ಅದ್ಕಾ ಹೇಳಾದು, ಅಪ್ಪ ಅಂದ್ರ ಸೃಷ್ಠಿಗ್ಯ ಸವಾಲು ಹಾಕಿ ಇಷ್ಟಗಲ ಬಿದ್ದಿರ ಆಕಾಶ ಅಂತ.
ಈ ಅಪ್ಪ ಅನ್ನಾನು ತನ್ನ ಮಕ್ಕಳಿಗಾಗಿ ಬಸ್ ಸ್ಟಾಂಡಿನಾಗ ಕೆರಾ ಒಲಿತಿರ್ತಾನ. ಹೋಟ್ಲಗಳಾಗ ಕಪ್ಪುಮಸಿ ತೊಳಿತಿರ್ತಾನ. ರೋಡಿನ ಮಗ್ಲಾಗ ನಿಂತ್ಕಂಡು ಯಾಪಾರಾ ಮಾಡ್ತಾನ. ಮಾರ್ಕೆಟ್ಟು ಮಿಲ್ಲುಗಳಾಗ ಹಮಾಲಿ ಮಾಡ್ತಾನ. ಆಟೋ, ಟ್ಯಾಕ್ಸಿ, ಲಾರಿ, ಬಸ್ಸುಗಳಾಗ ಡ್ರೈವರ್ ಆಗಿರ್ತಾನ. ಉಟ್ಗಣಾಕ ಅಂಗಿ ಇಲ್ದಂಗಿದ್ರೂ ಹರಿದಿರಾ ಪಂಜಿ ಉಟ್ಗಂಡು, ತ್ವಡಿ ಮಟಾ ಎತ್ತಿ ಕಟ್ಟಿಗಂಡು ಸುಡ್ ಸುಡಾ ಬಿಸಲಾಗ ಹೊಲದಾಗಿನ ಪೈರಿನ ಸಾಲಾಗ ಕಳೆ ತೆಗಿತಿರ್ತಾನ. ಮಕ್ಳು ಉದ್ಧಾರ ಆದ್ರ ಸಾಕು ಅಂತ ಇನ್ನೊಬ್ರ ಚಾಕ್ರಿ ಮಾಡ್ತಾನ. ಎಮ್ಮಿ ಕಾಯ್ತಾನ. ಸಣ್ಣ ಪುಟ್ಟ ನೌಕ್ರಿ ಮಾಡ್ತಾನ. ದೊಡ್ಡ ನೌಕ್ರಿಗಳನ್ನೂ ಮಾಡ್ತಾನ. ತಾಲೂಕಾಪೀಸು, ಕೋಟರ್ು ಕಚೇರಿಗಳ ಅಂಗಳಾಗ ನಿಂತು ಅಜರ್ಿ ತುಂಬಿ ತಾನು ಅರವಟ್ಟಿಗ್ಯ ಉಂಡು ಮನಿಗಿಷ್ಟು ರ್ವಕ್ಕ ಉಳಿಸ್ತಾನ. ದೊಡ್ಡ ಕೋಟ್ಯಾಧಿಪತಿ ತನ್ನ ವಾರಸದಾರನ ತಾಯಾರಿ ಮಾಡಾಕ ತಲಿ ಕೆಡಿಸ್ಕಂಡು ರೆಡಿ ಮಾಡ್ತಾನ. ಮಕ್ಕಳ ಏಳಿಗಿ ಮ್ಯಾಗ ತನ್ನ ಗೆಲುವ ಕಾಣ್ತಾನ. ಇವನ ನೋಡ್ಪಾ ನನ್ನ ಮಗಾ, ಅಂತ ನಾಕು ಮಂದಿ ಮುಂದೆ ಎದೆ ಎತ್ತಿ, ಮೀಸಿ ತಿರುವಿ, ಹಮ್ಮಿಲೆ ಹೇಳ್ತಾನ. ಅಂಗಾರ ಎಲ್ಲಾ ಅಪ್ಪಂದಿರೂ ಇಂಗಾ ಇರ್ತಾರ ? ಹಂಗೇನಿಲ್ರಿ. ಕಾಟಾಚಾರಕ್ಕ ಅಪ್ಪ ಅನ್ನಿಸ್ಕಂಡು ಸಂಸಾರನ ನಡಾ ಬೀದ್ಯಗ ನಿಂದ್ರಿಸದಾರೂ ಅದಾರ, ಮಕ್ಳು ಸಣ್ಣ ವಯಸ್ಸಿನಾಗ ಇದ್ದಾಗ್ಲ, ಮನಿ ಬಿಟ್ಟು ಓಡಿ ಹೋದಾರೂ ಅದಾರ. ಆದ್ರ ಅಂಥವರನ್ನ ಹೋಗಿ ಯಾರಾರ ಮಾತಾಡಿಸಿದ್ರ, ನನ್ನದೇನಪ್ಪಾ ಎಲ್ಲಾ ಮುಗಿದೋಯ್ತು. ಏನಾ ಕೆಟ್ಟ ಹಣೇಬರಾ ಇಂಗಾತು, ಇನ್ನೇನಿದ್ರು ನನ್ನ ಮಕ್ಳು ಬೇಸಿ ಬಾಳಿ ಬದುಕಬೇಕು ಅಂತಾನ. ಮಕ್ಕಳ ಬಗ್ಗೆ ಅಷ್ಟೂ ಕಾಳಜಿ ಅಲ್ಲೆಲ್ಯ ಇರಾ ಜಬಾದ್ದಾರಿ ಇಲ್ಲದ ಅಪ್ಪರತ್ರ ಇರತೈತಿ. ಅದ್ಕ ಹೇಳಾದು ಯಾವತ್ತಿದ್ರೂ ‘ಅಪ್ಪ ಅಂದ್ರ ಆಕಾಶ’ನಾ ಅಂತ. ನೀವೇನಂತೀರಿ ?

‍ಲೇಖಕರು avadhi

1 March, 2013

2 Comments

  1. Chitra santhosh

    bhala chennagide article…bhashe…

  2. radha s talikatte

    nimma gramya bhaasheya baraha tumba sogaside.ide reeti mundvarsi.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading