ಕೆ ಬಿ ಪರಶಿವಪ್ಪ, ಸ್ನೇಹಾ ಪ್ರಕಾಶನ
‘ಸಾವಣ್ಣ ಪ್ರಕಾಶನ’ ಸಂಸ್ಥೆಯ ಮೂಲಕ ಲಕ್ಷಾಂತರ ಓದುಗರ ಮನಗೆದ್ದಿರುವ ಆತ್ಮೀಯ ಮಿತ್ರರಾದ ಜಮೀಲ್ ರವರು ಕಳೆದೊಂದು ದಶಕದಲ್ಲಿ ಪುಸ್ತಕೋದ್ಯಮದಲ್ಲಿ ಹಲವಾರು ಹೊಸ ಹೊಸ ಪ್ರಯೋಗಗಳ ಮುಖಾಂತರ ಅತ್ಯದ್ಭುತ ದಾಖಲೆಗಳನ್ನು ಮಾಡಿ ಓದುಗರ ಸ್ನೇಹಿ ಪ್ರಕಾಶಕರಾಗಿ ನೂರಕ್ಕೂ ಹೆಚ್ಚು ಅಮೂಲ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ.
ಅವರ ನಿರಂತರ ಪರಿಶ್ರಮ ಬದ್ಧತೆ ವೃತ್ತಿಪರತೆ ಆಪ್ತ ಮಾತು ನನಗೆ ಯಾವಾಗಲೂ ಇಷ್ಟ, ಅನಿರೀಕ್ಷಿತವಾಗಿ ನಾನು ಇವರ ಆಫೀಸ್ ಗೆ ಹೋದಾಗ ಅಚ್ಚರಿಯೊಂದು ಕಾದಿತ್ತು ನನಗೆ… ನಾಡಿನ ಶ್ರೇಷ್ಠ ಚಿಂತಕರು, ಲೇಖಕರು ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ.ಬಿ.ಎ. ವಿವೇಕ ರೈ ಅವರ ಹೊಸ ಗ್ರಂಥ ‘ಕಲಿತದ್ದು ಕಲಿಸಿದ್ದು’ ಆಗತಾನೆ ಮುದ್ರಣದಿಂದ ಬಂದ ಒಂದಷ್ಟು ಪ್ರತಿಗಳ ಕಟ್ಟು ಇವರ ಟೇಬಲ್ ಬಂದು ಕೂತಿತ್ತು.

ಸದಾ ಪುಸ್ತಕಗಳ ಜೊತೆ ಭಾವನಾತ್ಮಕ ಸಂಬಂಧ ಇಟ್ಟುಕೊಂಡು ಬದುಕುತ್ತಿರುವ ಜಮೀಲ್ ಸಾವಣ್ಣ ಮತ್ತು ಅವರ ಶ್ರೀಮತಿಯವರ ಮುಖದಲ್ಲಿ ಮನೆಯಲ್ಲಿ ಮಗು ಹುಟ್ಟಿದ ಕ್ಷಣದಲ್ಲಾಗುವ ಸಂತಸ ಕಾಣ್ತಾ ಇತ್ತು… ಮಾತಾಡ್ತಾ ಮಾತಾಡ್ತಾ ಜಮೀಲ್ ಅವರು ಸರ್ ಈ ಹೊಸ ಪುಸ್ತಕದ ಕಟ್ಟನ್ನು ನೀವೇ open ಮಾಡಿ ಪ್ರಥಮ ಪ್ರತಿ ಸ್ವೀಕರಿಸಿ ಅಂತ ಸ್ನೇಹ ದಿಂದ ಆಗ್ರಹಿಸಿಯೇಬಿಟ್ಟರು…
ಆ ಮಹಾನುಭಾವರ ಕೃತಿಯ ಪ್ರಥಮ ಪ್ರತಿಯನ್ನು ಸ್ವೀಕರಿಸುವ ಯೋಗ್ಯತೆ ಇದಿಯೋ ಇಲ್ವೊ ನಂಗಂತೂ ಗೊತ್ತಿಲ್ಲಾ ಆದರೆ ಯೋಗವಂತು ಸಿಕ್ತು. ಸದಾ ಪುಸ್ತಕಗಳ ಜೊತೆಯಲ್ಲಿಯೇ ಬದುಕುವ ನನಗೆ ನಿಜಕ್ಕೂ ಇದು ಸಾರ್ಥಕ ಕ್ಷಣ.
ಅಂದಹಾಗೆ ಈ ಕೃತಿಗೆ ‘ಅವಧಿ’ಯ ನನ್ನ ನೆಚ್ಚಿನ ಲೇಖಕ ಸ್ನೇಹದ ಬಂಧು ಜಿ.ಎನ್. ಮೋಹನ್ ರವರ ಬೆನ್ನುಡಿ ಇದ್ದು ಕೃತಿಯನ್ನು ಓದಲು ನಮ್ಮನ್ನೆಲ್ಲಾ ಪ್ರೇರೇಪಿಸುತ್ತದೆ. ಡಾ. ವಿವೇಕ್ ರೈ ಸರ್, ಜಮೀಲ್ ಸರ್ ಅಭಿನಂದನೆಗಳು. ನಿಮ್ಮ ಕೃತಿ ಬೇಗ ಬೇಗ ಓದುಗರಿಗೆ ತಲುಪಿ ಮತ್ತೆ ಮತ್ತೆ ಮುದ್ರಣವಾಗಲಿ…
ಈ ಕೃತಿ ಕೊಳ್ಳಲು- ಇಲ್ಲಿ ಕ್ಲಿಕ್ಕಿಸಿ
ಜಮೀಲ್ ಸಾವಣ್ಣ ಅಂಗಳದಲ್ಲಿ ನಾನು 'ಕಲಿತದ್ದು'
ನಿಮಗೆ ಇವೂ ಇಷ್ಟವಾಗಬಹುದು…




0 Comments