‘ಜಗದೀಶ ಉಜ್ಜಮ್ಮನವರ’ ವೃತ್ತಿಯಲ್ಲಿ ಮೇಷ್ಟ್ರು, ಪ್ರವೃತ್ತಿಯಲ್ಲಿ ಅದ್ಬುತ ಪೋಟೊಗ್ರಾಫರ್. ಪಾಠ ಹೇಳಿ ಒಂದೆರಡು ದಿನಗಳ ಕಾಲ ಬಿಡುವು ಸಿಕ್ಕರೆ ಸಾಕು ಕೊರಳಿಗೆ ಕ್ಯಾಮರಾ ನೇತಾಕಿಕೊಂಡು ಕಾಡು ಮೇಡು ಅಲೆದುಬಿಡುತ್ತಾರೆ. ಕಾಡು, ಗಿಡ, ಮರ, ಬಳ್ಳಿ, ನದಿ ತೊರೆ ಅವರ ಆಸಕ್ತಿಯ ವಿಷಯಗಳು. ಚಾರಣ ಎಂದರೆ ಪ್ರಾಣ. ಸ್ನೇಹಿತರ ಗುಂಪುಕಟ್ಟಿಕೊಂಡು ಬೆಟ್ಟ ಹತ್ತುವುದು ಅವರಿಗಿಷ್ಟ.
ಹುಟ್ಟೂರು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕದರಮಂಡಲಗಿ. ಸಧ್ಯ ರಾಣೆಬೆನ್ನೂರಿನಲ್ಲಿ ವಾಸ. ಈಗ ಹರಿಹರ ತಾಲ್ಲೂಕಿನ ಸರ್ಕಾರಿ ಪದವಿಪೂರ್ವ ಕಾಲೇಜು(ಪ್ರೌಢಶಾಲೆ) ಯಲ್ಲಿ ಉಪಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅವರು ತೆಗೆದ ಕೆಲವು ಚಿತ್ರಗಳು ಇಲ್ಲಿವೆ..















0 Comments