ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಛಂದ ಪುಸ್ತಕ ಬಹುಮಾನದ ಫಲಿತಾಂಶ ಇಲ್ಲಿದೆ

ಛಂದ ಪುಸ್ತಕ ಫಲಿತಾಂಶ

 


ಈ ಸಾಲಿನ ಛಂದ ಪುಸ್ತಕ ಬಹುಮಾನವನ್ನು ಶ್ರೀ ಪದ್ಮನಾಭ ಭಟ್, ಶೇವ್ಕಾರ ಅವರು ತಮ್ಮ ಕಥಾಸಂಕಲನದ ಹಸ್ತಪ್ರತಿಗೆ ಪಡೆದುಕೊಂಡಿದ್ದಾರೆ. 23 ವರ್ಷದ ಪದ್ಮನಾಭ ಉತ್ತರ ಕನ್ನಡ ಜಿಲ್ಲೆಯವರು. ಸದ್ಯ ಬೆಂಗಳೂರಿನ ಪ್ರಮುಖ ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿ ತರಬೇತಿ ಪಡೆಯುತ್ತಿದ್ದಾರೆ. ಈ ಸಾಲಿನ ಬಹುಮಾನದ ನಿರ್ಣಯವನ್ನು ಹಿರಿಯ ವಿಮರ್ಶಕಿ ಶ್ರೀಮತಿ ಎಂ.ಎಸ್. ಆಶಾದೇವಿ ಮಾಡಿದ್ದಾರೆ. ನಾಡಿನ ಯುವಕತೆಗಾರರನ್ನು ಗುರುತಿಸುವ ಈ ಸ್ಪರ್ಧೆಗೆ ಸುಮಾರು 48 ಹಸ್ತಪ್ರತಿಗಳು ಪ್ರವೇಶ ಕೋರಿ ಬಂದಿದ್ದವು. ಅವುಗಳ ಮೊದಲ ಸುತ್ತಿನ ಆಯ್ಕೆಯನ್ನು ಕತೆಗಾರ್ತಿ ಸುಮಂಗಲಾ ಮಾಡಿದ್ದರು. ಎಲ್ಲರಿಗೂ ಛಂದಪುಸ್ತಕವು ಧನ್ಯವಾದಗಳನ್ನು ಅರ್ಪಿಸುತ್ತಿದೆ. 
‘ಛಂದ ಪುಸ್ತಕ’ವು ಈ ಪುಸ್ತಕವನ್ನು ಪ್ರಕಟಿಸಿ, ಕತೆಗಾರರಿಗೆ ಹದಿನೈದು ಸಾವಿರ ರೂಪಾಯಿ ಬಹುಮಾನ, ಪ್ರಶಸ್ತಿ ಪತ್ರ ಮತ್ತು ಪಾರಿತೋಷಕವನ್ನು ನೀಡುತ್ತದೆ. ಇದೇ ಜೂನ್ ತಿಂಗಳಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತದೆ.

‍ಲೇಖಕರು G

9 March, 2014

11 Comments

  1. Kavya Nagarakatte

    ಕಂಗ್ರಾಟ್ಸ್ ಲೇ:)

  2. AnandTeertha Pyati

    Heartly congratulations to Padmanabh.

  3. venkatesha G

    Congratulations to Padmanabha Bhat

  4. mmshaik

    abhinandanegaLu..

  5. Anonymous

    Congrats Padmanabh.

  6. anupama prasad

    ಪದ್ಮನಾಭ ಭಟ್, ಶೇವ್ಕಾರ್ ಅವರಿಗೆ ಆತ್ಮೀಯ ಶುಭಾಷಯಗಳು.
    ಅನುಪಮಾ ಪ್ರಸಾದ್.

  7. Giridhar Karkala

    Congratulations…
    .

  8. Vijay Hugar

    Abhinandanegalu…. 🙂

  9. kumvee

    padmanabh abhinandanegalu
    kumvee

  10. Anonymous

    congrats Padmanabha

  11. amardeep.ps

    abhinandanegalu …..padmanaabha bhat…ji.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading