ಮಾತಾಡೆನೆಂಬ ಮುನಿಸು ಮಂದಿಗೆ…
–ಚೇತನಾ ತೀರ್ಥಹಳ್ಳಿ
ಚಿತ್ರ : ಬಾಲು ಮಂದರ್ತಿ
ನನ್ನ ಮನೆಯ ಗೋಡೆಗಳಿಗೆ
ಕಿವಿಗಳನಿರಿಸಿಲ್ಲ
ಮಾತಾಡಲಿ ಯಾರ ಕೂಡ?
ಮಾತೆಂದರೆ ವಾಕರಿಕೆ ಗೆಳೆಯಾ
ಮುತ್ತೆಂದು ಅರಸುತಿದ್ದ
ನೀ ಜತೆಗಿಲ್ಲದೆ…
ಕಾದು ಕಾಯಿಸುವ
ಜೀವವಿರಲುಕ್ಕಿ
ಸುರಿಯುತಿತ್ತು ಮಾತು,
ಸತ್ತ ದಿನಗಳ
ಹೆಣದ ತಂಪಿಗೆ
ಸೆಟೆದು ಬಿದ್ದಿವೆ ಪದಗಳು.
ಮಾತಾಡೆನೆಂಬ ಮುನಿಸು ಮಂದಿಗೆ,
ದನಿಯನೆಲ್ಲಿಂದ
ಬಗೆದು ತರಲಿ ನಾನು?
ಚೇತನಾ ತೀರ್ಥಹಳ್ಳಿ ಕವಿತೆ: ಸೆಟೆದು ಬಿದ್ದಿವೆ ಪದಗಳು
ನಿಮಗೆ ಇವೂ ಇಷ್ಟವಾಗಬಹುದು…





ಮುನಿಕೊಂಡ ಮಾತುಗಳೆಲ್ಲಾ ಕವಿತೆಯಾಗಿ ಮೂಡಿದ್ದಾವಲ್ಲಾ…..
ಚೆನ್ನಾಗಿದೆ ಕಣ್ರೀ.
Gaadhavaada abhivyakti…good one.
chennagide……….
ಏಕಾಂತದ ಹಿಂಸೆ !!!
ಚೆನ್ನಾಗಿದೆ.