ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಚೆನ್ನುಡಿ’ಗೆ ಕಿರು ನಾಟಕೋತ್ಸವ ಪ್ರಶಸ್ತಿ

ಬೆಂಗಳೂರು ಕಿರುನಾಟಕೋತ್ಸವ ತಂಡದ ನಮಸ್ಕಾರಗಳು. ಪ್ರವರ ಥಿಯೇಟರ್ ಮತ್ತು ಅಶ್ವಘೋಷ ಥಿಯೇಟರ್ ಟ್ರಸ್ಟ್ ಜಂಟಿ ಸಹಯೋಗದೊಂದಿಗೆ ಆಯೋಜಿಸಿದ ಬೆಂಗಳೂರು ಕಿರುನಾಟಕೋತ್ಸವ 2023 ಅಂತಿಮ ಹಂತದ ಸ್ಪರ್ಧೆ ಜುಲೈ-2 ರಂದು ಬೆಂಗಳೂರಿನ ಹನುಮಂತನಗರದಲ್ಲಿರುವ ಪ್ರಭಾತ್ ಕೆ.ಎಚ್.ಕಲಾಸೌಧದಲ್ಲಿ ನಡೆಯಿತು.

ಖ್ಯಾತ ರಂಗಕರ್ಮಿಗಳಾದ ಲಕ್ಷ್ಮಿ ಚಂದ್ರಶೇಖರ್ , ಗೌರಿ ದತ್ತು ಮತ್ತು ಡಾ. ಬೇಲೂರು ರಘುನಂದನ್ ಅವರು ಅಂತಿಮ ಹಂತದ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ರಂಗಕರ್ಮಿಗಳಾದ ಬಿ. ಸುರೇಶ, ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್, ಪ್ರಕಾಶಕರಾದ ಜಮೀಲ್ ಸಾವಣ್ಣ, ಕಲಾತ್ಮಕ ನಿರ್ದೇಶರಾದ ಹನು ರಾಮಸಂಜೀವ ಮತ್ತು ನಂದೀಶ್ ದೇವ್, ತಾಂತ್ರಿಕ ನಿರ್ದೇಶರಾದ ಮಂಜು ನಾರಾಯಣ್, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬೆಂಗಳೂರು ಕಿರುನಾಟಕೋತ್ಸವ 2023 – ಪ್ರಶಸ್ತಿ ವಿಜೇತರು :

  1. ಅತ್ಯುತ್ತಮ ನಾಟಕ (ತೀರ್ಪುಗಾರರ ಆಯ್ಕೆ) – ‘ಚೆನ್ನುಡಿ’  |  ತಂಡ – ಬೆಂಗಳೂರು ಥಿಯೇಟರ್ ಆನ್ಸಂಬಲ್
  2. ಅತ್ಯುತ್ತಮ ನಾಟಕ (ಪ್ರೇಕ್ಷಕರ ಆಯ್ಕೆ) – ‘ಎತ್ತ ಮುಖ ಮಾಡಲಯ್ಯ ನಾ’ | ತಂಡ – ಉತ್ಕರ್ಷ್ ಅಭಿನಯ
  3. ‘ ಆರ್ .ನಾಗೇಶ್’ ಅತ್ಯುತ್ತಮ ನಿರ್ದೇಶನ – ರೇವಂತ್ ಆರ್ ಮಾಳಿಗೆ | ನಾಟಕ – ಕನ್ನಡಿಗ(ಳು) | ತಂಡ – ಕರಣ ಥಿಯೇಟರ್
  4. ‘ಸಂಚಾರಿ ವಿಜಯ್’ ಅತ್ಯುತ್ತಮ ನಟ – ಪುನೀತ್ .ಆರ್. ಎನ್ | ನಾಟಕ – ಎತ್ತ ಮುಖ ಮಾಡಲಯ್ಯ ನಾ । ತಂಡ – ಉತ್ಕರ್ಷ್ ಅಭಿನಯ
  5. ‘ಉಮಾಶ್ರೀ’ ಅತ್ಯುತ್ತಮ ನಟಿ – ರಾಣಿ ಪಿ. ವಿಶ್ವನಾಥ್ | ನಾಟಕ – ಕನ್ನಡಿಗ(ಳು) | ತಂಡ – ಕರಣ ಥಿಯೇಟರ್
  6. ಅತ್ಯುತ್ತಮ ನಾಟಕ ವಿನ್ಯಾಸ – ಅಭಿಮನ್ಯು ಭೂಪತಿ | ನಾಟಕ – ಚೆನ್ನುಡಿ | ತಂಡ – ಬೆಂಗಳೂರು ಥಿಯೇಟರ್ ಆನ್ಸಂಬಲ್
  7. ಅತ್ಯುತ್ತಮ ಕಥೆ (ಸ್ವರಚಿತ) – ಅಭಿಮನ್ಯು ಭೂಪತಿ ಮತ್ತು ರೋಹಿತ್ ಹೆಚ್. ಎನ್ | ನಾಟಕ – ಚೆನ್ನುಡಿ | ತಂಡ – ಬೆಂಗಳೂರು ಥಿಯೇಟರ್ ಆನ್ಸಂಬಲ್
  8. ಅತ್ಯುತ್ತಮ ಭಿತ್ತಿಪತ್ರ ವಿನ್ಯಾಸ – ಶಶಾಂಕ್ .ಆರ್ ಮತ್ತು ವರ್ಷ .ಎಸ್ | ನಾಟಕ – ಕನ್ನಡಿಗ(ಳು) | ತಂಡ – ಕರಣ ಥಿಯೇಟರ್
  9. ತೀರ್ಪುಗಾರರ ವಿಶೇಷ ಮೆಚ್ಚುಗೆ ಪಡೆದ ಬಾಲ ನಟಿ – ಪುನರ್ವಿ | ನಾಟಕ – ಕನ್ನಡವೆಂದರೆ ಈಗಿನ ಜನರೇಶನ್ ಗೆ ತೊಂದರೆ | ತಂಡ – ಮಲೆನಾಡು ರಂಗ ತಂಡ’ 

‍ಲೇಖಕರು avadhi

3 July, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading