
ಐನಾಕ್ಸ್ ಲಿಡೋದಲ್ಲಿ ’ಅವಧಿ’ಯ ಪ್ರತಿನಿಧಿ ದಿವ್ಯಾ ಅವರೊಂದಿಗೆ ಮಾತನಾಡಿದ ಗೋರುಕಾನ ಚಿತ್ರ ನಿರ್ದೇಶಕ ಆನಂದ್ ಪಿ ರಾಜು ತಮ್ಮ ಚಿತ್ರ ’ಗೋರು ಕಾನ’ದ ಬಗ್ಗೆ ಹೇಳಿದ್ದು ಹೀಗೆ :
‘ ಕಾಡಿನ ಹಾಡಿಯಲ್ಲಿರುವವರನ್ನು, ಕಾಡನ್ನು ನಾವು ಉದ್ಧಾರ ಮಾದುತ್ತೇವೆ ಎನ್ನುವುದು ಸುಳ್ಳು. ಕಾಡಿಗೆ ತೊಂದರೆ ಆದರೆ ಅದು ಅಲ್ಲಿ ವಾಸವಾಗಿರುವವರಿಂದ ಅಲ್ಲ, ಹೊರಗಿನಿಂದ ಬಂದವರಿಂದ.’

‘ಕಾಡನ್ನು ಉಳಿಸಬೇಕೆಂದರೆ ಅದನ್ನು ಅದರ ಪಾಡಿಗೆ ಬಿಡಬೇಕು. ನನ್ನ ಚಿತ್ರದಲ್ಲಿ ನಾನು ಹೇಳಹೊರಟಿರುವುದು ಸಹ ಇದನ್ನೇ.
ಕಾಡು ಮತ್ತು ಅಲ್ಲಿನ ಜನಕ್ಕೆ ಒಂದು ಸಹಜವಾದ ಸಂಬಂಧ ಇರುತ್ತದೆ, ನಾವು ಅದನ್ನು ಅರ್ಥ ಮಾಡಿಕೊಳ್ಳಬೇಕು.
ಈ ಚಿತ್ರ ಹೆಚ್ಚು ಹೆಚ್ಚು ಜನರನ್ನು ತಲುಪಲಿ ಎನ್ನುವ ಆಸೆ ನನ್ನದು.’
ಚಿತ್ರೋತ್ಸವದಲ್ಲಿ ಇಂದು ’ಗೋರುಕಾನ’ ಕನ್ನಡ ಚಿತ್ರ
ಲೇಖಕರು G
27 December, 2013
ನಿಮಗೆ ಇವೂ ಇಷ್ಟವಾಗಬಹುದು…




0 Comments