ಜಯಲಕ್ಷ್ಮಿ ಪಾಟೀಲ್

ನನಗರ್ಥವಾಗದ ಒಂದು ವಿಷಯವನ್ನು ಚಿತ್ರರಂಗದ ಯಾರಾದರೂ ಅರ್ಥ ಮಾಡಿಸಿ ಪ್ಲೀಸ್.
ಯಾವುದೇ ಭಾರತೀಯ ಭಾಷಯ ಚಿತ್ರರಂಗವಾಗಿರಲಿ, ಯಾಕೆ ಗೀತರಚನೆ ಬರೀ ಗಂಡಸರಿಗಷ್ಟೇ ಸೀಮಿತ?
ಅಪರೂಪಕ್ಕೆ ಯಾರಾದ್ರೂ ಹೆಣ್ಣುಮಕ್ಕಳು ಸಿನಿಮಾ ಹಾಡುಗಳನ್ನು ಬರೆದುದು ಇದ್ದರೆ ಅಥವಾ ಕವಿಯತ್ರಿಯರ ಕವನಗಳನ್ನು ಸಿನಿಮಾ ಹಾಡಿಗೆ ಬಳಸಿಕೊಂಡಿದ್ದಾಗಲಿ ಇದ್ದರೆ ದಯವಿಟ್ಟು ಅದನ್ನೂ ತಿಳಿಸಿ.
ಕನ್ನಡ ಸಿರಿಯಲ್ಗಳಿಗೆ ಹೆಣ್ಣುಮಕ್ಕಳು ಶೀರ್ಷಿಕೆಗೀತೆಗಳನ್ನು ಬರೆದಿರುವುದು ಗೊತ್ತು. ಆದರೆ ಸಿನಿಮಾ ಹಾಡುಗಳು… ಊಂಹೂಂ, ಗೊತ್ತಿಲ್ಲವಾದ್ದರಿಂದ ಕೇಳುತ್ತಿರುವೆ





ಸಿನೆಮಾ ಹಾಡು-ಕತೆಗಳು ‘ಗಂಡು ಗಂಡಿಗಾಗಿ ಬರೆಯಲ್ಪಡುವ ಅರ್ಥಧರ್ಮಸೂಕ್ತಗಳು. ಹೆಣ್ಣುಗಳಿಗೆ ಅವೆಲ್ಲ ಹೇಗೆ ತಿಳಿಯುತ್ತವೆ ಮಣ್ಣು?
Namaskara sir mahileyaru cinema hadugallanna baredavaru idare avarige namage gottillada ganda gali avarige gottu yakandre samajavanna hattiradinda noduvavaru avru pratoba nandakumar Kavana allade cinima geete barididare karanantaradinda adu record Agalilla innu ulida list nale kodtini sir
ಎಂಥಾ ಬೀಜದಂಥಾ ಮಾತು ಹೇಳಿದ್ರಿ ಸರ್, ವಾಹ್! 🙂
kannada film lli aathara baredavar paiki tumba jana eddare bahushah nivu gamanisilla anisutte
ಅಲ್ಲೊಂದು ಇಲ್ಲೊಂದು ಹಾಡುಗಳನ್ನು ಬರೆದವರ ಹೆಸರುಗಳು ನನಗೂ ಗೊತ್ತಿವೆ. ಒಂದ್ಹತ್ತು ವರ್ಷಗಳ ಮಟ್ಟಿಗಾದರೂ ಕನ್ನಡ ಚಿತ್ರರಂಗದಲ್ಲಿ ಸತತ ಬರೆದವರ ಹೆಸರು ಹೇಳ್ತೀರಾ?
ಸತತವಾಗಿ ಕೇಳಿಬರುವುದು ಬಿಡಿ, ಕನಿಷ್ಟ ೧೦-೧೫ ಹಾಡುಗಳನ್ನಾದರೂ ಬರೆದ, ಆಗಾಗ ಅವರ ಹಾಡು ಬಂದಾಗಲೆಲ್ಲ ಓಹ್ ಇದು ಇವ್ರು ಬರೆದಿದ್ದು ಎನ್ನುವ ಕನ್ನಡದ ಇಬ್ಬರು ಗೀತರಚೆಗಾರ್ತಿಯರ ಹೆಸರುಗಳನ್ನು ಹೇಳಿ ಸಾಕು.
ಜಯಲಕ್ಷ್ಮಿ ನಾನು ಬಬ್ಲೂಷ ಫಿಲ್ಮಿಗೆ ಒಂದು ಹಾಡು ಬರೆದಿದ್ದೇನೆ. ಆ ಹಾಡು ಭಿನ್ನವಾಗಿ ಬಹಳ ಚೆನ್ನಾಗಿದೆ ಅಂತ ಶೂಟಿಂಗ್ ನಲ್ಲಿ ಎಲ್ಲರೂ ಆ ಹಾಡಿನ ಮೂಲಕವೇ ನನ್ನನ್ನು ಗುರುತಿಸುತ್ತಿದ್ದರು. ಅವಕಾಶ ಸಿಕ್ಕರೆ ಇನ್ನಷ್ಟು ಬರೆಯುವ ಆಸೆ ಇದೆ.
ಆದರೆ ನೀವು ಎತ್ತಿರುವ ಪ್ರಶ್ನೆ ಸೂಕ್ತ ಮತ್ತು ಸಕಾಲ ಮಹಿಳೆಯರು ಚಿತ್ರರಂಗದಲ್ಲಿ ಕೇವಲ ಮಾರುಕಟ್ಟೆ ಸರಕಾದದ್ದೇ ಹೆಚ್ಚು…..ಇತ್ತೀಚೆಗಷ್ಟೇ ಚಿತ್ರಕತೆ ನಿರ್ದೇಶನ ಅಂತ ಅಲ್ಲೊಬ್ಬರು ಇಲ್ಲೊಬ್ಬರು ಹೆಜ್ಜೆ ಇಟ್ಟಿದ್ದಾರೆ.
ಅಭಿನಂದನೆಗಳು ಶಾಂತಾ. 🙂 ಹೆಚ್ಚು ಹೆಚ್ಚು ನೀವು ಚಿತ್ರಗಳಿಗೆ ಗೀತೆ ಬರೆಯುವಂಥಾ ಅವಕಾಶಗಳು ಸೃಷ್ಟಿಯಾಗಲಿ. ತನ್ಮೂಲಕ ಇತರ ಪ್ರತಿಭೆಗಳಿಗೆ ಅವಕಾಶದ ಬಾಗಿಲು ತೆರೆಯುವಂತಾಗಲಿ.
Teluginalli Smt.Bhanumathi Ramakrishna gita rachane madi,sangita nirdeshana madi,haduthiddaru. Avaru Janapriya chitra nirdeshaki aagiddaru.
ಅಂಥವರ ಸಂಖ್ಯೆ ಸಾವಿರವಲ್ಲದಿದ್ದರೂ ನೂರರಷ್ಟಾದರೂ (ಇಡೀ ಭಾರತೀಯ ಚಿತ್ರರಂಗ) ಆಗಿ ಜನರಿಗೆ ಗೂಗಲ್ನ ಸಹಾಯವಿಲ್ಲದೆ ಅವರುಗಳ ಹೆಸರು ಗೊತ್ತಾಗುವಂತಾಗಲಿ. 🙂
In Mytri film 1 song lyrics by SharanYa