ಮೂಲ – ಲ್ಯಾಂಗ್ಸ್ಟನ್ ಹ್ಯೂಸ್
ಕನ್ನಡಕ್ಕೆ – ವೈ ಬಿ ಹಾಲಬಾವಿ
ಲ್ಯಾಂಗ್ಸ್ಟನ್ ಹ್ಯೂಸ್ ಅಮೇರಿಕಾ ಕಂಡ ಪ್ರಸಿದ್ಧ ಕವಿ, ಚಿಂತಕ, ಲೇಖಕ, ಸಾಮಾಜಿಕ ಹೋರಾಟಗಾರ. ಜಾಜ್ ಕಾವ್ಯದ ಪಿತಾಮಹರೆಂದು ಪರಿಗಣಿಸಲಾಗುತ್ತಿದ್ದ ಇವರು ಹಾರ್ಲಂ ಪುನರುಜ್ಜೀವನ ಚಳುವಳಿಯ ಪ್ರಮುಖ ಮುಖಂಡರಾಗಿದ್ದರು.
ಇವರು ಆಫ್ರೋ-ಅಮೇರಿಕನ್ ಜೀವನದ ಸಂಕಷ್ಟಗಳು ಮತ್ತು ಕನಸುಗಳನ್ನು ತಮ್ಮ ಸಾಹಿತ್ಯದಲ್ಲಿ ವಿಶಿಷ್ಟ ಶೈಲಿಯಲ್ಲಿ ಅನಾವರಣಗೊಳಿಸಿದವರು. ಇವರ ಒಂದಿಷ್ಟು ಕವಿತೆಗಳ ಕನ್ನಡ ಅನುವಾದ ಇಲ್ಲಿವೆ.
೧ .ಕನಸುಗಳು
ಕನಸುಗಳನ್ನು
ಬಿಗಿಯಾಗಿ ಹಿಡಿದುಕೊಳ್ಳಿ
ಕನಸುಗಳು ಸತ್ತರೆ
ಜೀವನ ರೆಕ್ಕೆ ಮುರಿದ ಹಕ್ಕಿ
ಸಾಧ್ಯವಾಗದು ಹಾರಲು.
ಕನಸುಗಳನ್ನು
ಬಿಗಿಯಾಗಿ ಹಿಡಿದುಕೊಳ್ಳಿ
ಕನಸುಗಳು ಇಲ್ಲದ ಜೀವನ-
ಹಿಮದಿಂದ ಹೆಪ್ಪುಗಟ್ಟಿದ
ಬರೀ ಬಂಜರು ನೆಲ.
೨ .ಚಳಿಗಾಲದ ಚಂದಿರ
ಎಷ್ಟು ತೆಳುವು, ಎಷ್ಟು ಹರಿತ
ಇಂದಿನೀ ರಾತ್ರಿಯ ಚಂದಿರ
ಎಷ್ಟು ಸೂಕ್ಷö್ಮ, ಎಷ್ಟು ತೀಕ್ಷ÷್ಣ, ಎಷ್ಟು
ಭಯಾವಹ ಬಿಳುಪು-
ಇಂದಿನೀ ರಾತ್ರಿಯ ಚಂದಿರನ
ಸಪೂರ ಬಾಗಿದ ಕೊಕ್ಕು!
೩ .ನನ್ನ ಜನರು
ಸುಂದರವಾಗಿದೆ ಈ ಇರುಳು,
ಅಂತೆಯೇ ನನ್ನ ಜನರ ಮುಖಗಳೂ.
ಸುಂದರವಾಗಿವೆ ನಕ್ಷತ್ರಗಳು,
ಅಂತೆಯೇ ನನ್ನ ಜನರ ಕಣ್ಣುಗಳೂ.
ಸುಂದರವಾಗಿದ್ದಾನೆ ಸೂರ್ಯನೂ.
ಸುಂದರವಾಗಿವೆ ನನ್ನ ಜನರ ಆತ್ಮಗಳೂ.
೪ .ಕೊನೆ
ಅಲ್ಲಿ ಗೋಡೆಯ ಮೇಲೆ
ಗಡಿಯಾರಗಳಿಲ್ಲ,
ಮತ್ತು ಸಮಯವೂ ಇಲ್ಲ,
ಬೆಳಗಿನಿಂದ ಬೈಗಿನವರೆಗೆ ನೆಲದಗುಂಟ
ನಡೆದಾಡುವ
ನೆರಳುಗಳೂ ಇಲ್ಲ.
ಬಾಗಿಲಾಚೆ
ಬೆಳಕೂ ಇಲ್ಲ ಕತ್ತಲೆಯೂ ಇಲ್ಲ
ಅಲ್ಲಿ ಬಾಗಲೇ ಇಲ್ಲ!
೫ .ಚೈತ್ರಕಾಲದ ಶಶಿ
ಬೆತ್ತಲೆಯಾಗಿಹಳು ಶಶಿ.
ವಿವಸ್ತçಗೊಳಿಸಿಹನು ಗಾಳಿ.
ಮೋಡದುಡುಪುಗಳನ್ನು ಅವಳ ಮೈಮೇಲಿಂದ
ಕಿತ್ತೆಸೆದಿರುವನು ಗಾಳಿ
ಮತ್ತೀಗ ಅವಳು ಬೆತ್ತಲೆ
ಸಂಪೂರ್ಣ ಬೆತ್ತಲೆ.
ಆದರೆ,
ಓ ನಿರ್ಲಜ್ಜ ಶಶಿಯೇ-
ನೀನೇಕೆ ನಾಚಿ ನೀರಾಗುತ್ತಿಲ್ಲ?
ಬೆತ್ತಲೆಯಾಗಿರುವುದು
ಒಳ್ಳಯದಲ್ಲವೆಂದು ನಿನಗೆ ತಿಳಿಯದೆ?
೬ .ಕನಸಿನ ಕಾವಲುಗಾರ
ಓ ಕನಸುಗಾರರೇ,
ತಂದುಕೊಡಿ ನನಗೆ,
ನಿಮ್ಮೆಲ್ಲ ಕನಸುಗಳನ್ನು.
ತಂದುಕೊಡಿ ನನಗೆ,
ನಿಮ್ಮೆಲ್ಲ ಹೃದಯ ಗೀತೆಗಳನ್ನು.
ನೀಲಿ ಮೋಡದ ಬಟ್ಟೆಯಲ್ಲಿ ಸುತ್ತಿ
ಲೋಕದ ಅತೀ ಒರಟು ಬೆರಳುಗಳಿಂದ
ದೂರವಿರಿಸುವೆ ಅವುಗಳನ್ನು!
೭ .ನಸೀಬು
ಕೆಲವೊಮ್ಮೆ
ತುಂಡೊAದು ಬೀಳುತ್ತದೆ
ಮೋಜಿನ ಮೇಜುಗಳಿಂದ,
ಕೆಲವೊಮ್ಮೆ
ಮೂಳೆಯೊAದು ಎಸೆಯಲ್ಪಡುತ್ತದೆ.
ದೊರಕುತ್ತದೆ ಕೆಲವರಿಗೆ ಪ್ರೀತಿ,-
ಕೆಲವರಿಗೆ ಸ್ವರ್ಗ ಮಾತ್ರ!
೮ .ಪದ್ಯ
ಗೆಳೆಯನ ಪ್ರೀತಿಸಿದೆ.
ನನ್ನಿಂದ ದೂರ ಹೋದನವನು.
ಹೇಳಲು ಹೆಚ್ಚೇನೂ ಉಳಿದಿಲ್ಲ.
ಮೃದುವಾಗಿ
ಶುರುವಾದಂತೆಯೇ ಮುಗಿಯುವುದು ಕವಿತೆ-
ನಾನು ನನ್ನ ಗೆಳೆಯನನ್ನು ಪ್ರೀತಿಸಿದೆ.






0 Comments