ಡಾ.ಚಂದ್ರಶೇಖರ ಕಂಬಾರ ಅವರ ಸಮಗ್ರ ಸಾಹಿತ್ಯಕ್ಕೆ 2011ನೇ ಸಾಲಿನ ಜ್ಞಾನ ಪೀಠ ಪ್ರಶಸ್ತಿ ದೊರೆತಿದೆ. ಇದು ಕನ್ನಡಕ್ಕೆ ಸಿಕ್ಕಿರುವ 8ನೇ ಜ್ಞಾನಪೀಠ ಕಿರೀಟ..
ಬೆಳಗಾವಿಯ ಘೋಡಗಿರಿಯಲ್ಲಿ ಜನಿಸಿದ ಡಾ. ಚಂದ್ರಶೇಖರ ಕಂಬಾರರು ಬಹುಮುಖ ಪ್ರತಿಭೆ. ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಅಧ್ಯಾಪಕ, ಜಾನಪದ ತಜ್ಞ, ಆಡಳಿತಗಾರರಾಗಿ ಅವರು ಹಲವು ಕ್ಷೇತ್ರಗಳಲ್ಲಿ ತನ್ನ ಚಾಪನ್ನು ಮೂಡಿಸಿದ್ದಾರೆ. ಜಾನಪದ ಸೊಗಡನ್ನೂ, ಧಾರವಾಡದ ಕನ್ನಡ ಭಾಷೆಯನ್ನು ಕನ್ನಡ ಸಾಹಿತ್ಯಕ್ಕೆ ತಂದವರು.
ಹೇಳತೇನ ಕೇಳ, ಸಿರಿಸಂಪಿಗೆ, ಬೆಳ್ಳಿಮೀನು, ಕಾಡುಕುದುರೆ, ನಾಯಿಕಥೆ, ಜೋಕುಮಾರಸ್ವಾಮಿ, ಮಹಾಮಾಯಿ, ಹರಕೆಯ ಕುರಿ, ಋಷ್ಯಶೃಂಗ, ಬೆಪ್ಪುತಕ್ಕಡಿ ಭೋಳೇಶಂಕರ, ಸಿಂಗಾರವ್ವ ಮತ್ತು ಅರಮನೆ ಮುಂತಾದವು ಕಂಬಾರರ ಪ್ರಮುಖ ಕೃತಿಗಳು. ಶಿಖರ ಸೂರ್ಯ ೨೬ ವರ್ಷಗಳ ನಂತರ ಇತ್ತೀಚೆಗೆ ಹೊರಬಂದ ಕಾದಂಬರಿ, ಈ ಕೃತಿಗೆ ಠ್ಯಾಗೋರ್ ಪ್ರಶಸ್ತಿ ದೊರೆತಿದೆ.
ಕಂಬಾರರು ತಾವೇ ಬರೆದ ಕಾದಂಬರಿಗಳನ್ನು ಚಲನಚಿತ್ರಗಳಾಗಿಸಿದರು. ಕರಿಮಾಯಿ, ಸಂಗೀತಾ, ಕಾಡುಕುದುರೆ ಇವುಗಳಲ್ಲಿ ಪ್ರಮುಖವಾದುವು.
ಅವರ ಸಿರಿಸಂಪಿಗೆ ನಾಟಕಕ್ಕೆ 1991ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ.
ಕಂಬಾರರು ಬೆಂಗಳೂರು ವಿಶ್ವವಿದ್ಯಾಲಯದ ಉಪನ್ಯಾಸಕರಾಗಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿ, ದೆಹಲಿ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿ, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.






ಕಂಬಾರರಿಗೆ ಪ್ರಶಸ್ತಿ ಬಂದಿದ್ದು ತುಂಬ ಸಂತೋಷದ ವಿಷಯ.
ಆದರೆ ದಯವಿಟ್ಟು ಗಮನಿಸಿ ಹಿಟ್ಟಿನ ಹುಂಜ – ಕಾರ್ನಾಡರ ನಾಟಕ.
ವಿಶ್ವಾಸದಿಂದ, ಸಿಂಧು
corrected..thanks
ಅವಧಿ ಕಂಬಾರರ ಬಗ್ಗೆ, ಅವರ ಸಾಹಿತ್ಯ ಕೃತಿಗಳ,ಸಿನಿಮಾ,ನಾಟಕಗಳ ಬಗ್ಗೆ ನೀಡಿದ್ದಕ್ಕೆ,ಅಭಿನಂದನೆಗಳು, ಒಂದು ಮಾತು ನನಗೆ ಹೇಳಲಿಕ್ಕೆ ನನಗೆ ಕುಶಿಯಾಗುತ್ತದೆ, ಅವರು ಬರಹಗಾರೊಂದೆ ಅಲ್ಲ ಒಬ್ಬ ಅತ್ಯುತ್ತಮ,ಮಾತುಗಾರರು,ಅವರ ಬಾಯಲ್ಲೇ ಅವರ ಶಿವಪುರ KATHEKELI ,ಹೆಗ್ಗೋಡಿನ ಸಂಸ್ಕೃತಿ ಶಿಬಿರದಲ್ಲಿ ಥ್ರಿಲ್ ಆಗಿದ್ದೆ ,ಅವರು ಮೂಡ್ನಲ್ಲಿದ್ದಾಗ ಅವರ ಮಾತುಗಳು ನಿಜಕ್ಕೂ WONDERFUL, IT IS A RARE OPPORTUNITY, ಎಂಟು ಕಿರೀಟ ತಂದುಕೊಟ್ಟ ಎಲ್ಲಾ ಲೇಖಕರಿಗೂ HATS OFF,ಜೈ ಕನ್ನಡಾಂಬೆ .ನನಗೆ ರಾಜರತ್ನಂ ಹಾಡು ನೆನಪು ಬರುತ್ತೆ ,” ನಾಲಗೆ ಸೀಳ್ಸಿ ,ಬಾಯಿ ಹೊಲಿಸಿಹಾಕಿದ್ರೂನುವೆ ಮೂಗ್ನಲ್ಲಿ ಕನ್ನಡ ಪದವಾಡ್ತೀನಿ ,” ಹೆಂಡ ಹೋಗ್ಲಿ ,ಹೆಂಡತಿ ಹೋಗ್ಲಿ ,ಪರ್ಪಂಚ ಇರೋತನಕ ಕನ್ನಡ ಪದಗೊಳು ನುಗ್ಲಿ ” .ಕಂಬಾರರ ಒಂದು ಹಾಡು ನನ್ನನ್ನು ನಿರನತವಾಗಿ ಕಾಡ್ತಿದೆ ,ಅದು ಇಂದಿನ SOCIAL RELEVENCY ಕೂಡ ” ENAA HELALAVVA BHARATHI ,IDI JAGADAGELLA HABBITAVVA NINNA KEERUTHI ,HATTAVATARAKE HETTAVALADI,CHILLARE DEVARU CHATTISU KOTI,DEVARIGONDODNDU JATIYAKATI,JANAGANAVELLA RANARANGAMADI” SADYAVADRE AVADHIYALLI AA HADU PRAKATISI…
.D.RAVI VARMA HOSPET.
ನಮ್ಮ ಕನ್ನಡನಾಡಿಗೆ ಕನ್ನಡಕೆ ಮತ್ತು ಕಂಬಾರರಿಗೆ ಅಭಿನಂದನೆಗಳು
ಕನ್ನಡ ವಿಶ್ವ ಮಾನ್ಯ ಭಾಷೆ !
ಕನ್ನಡ ಕನ್ನಡ ಕನ್ನಡ !
–ನಂದಿ ಜೆ. ಹೂವಿನಹೊಳೆ
ಸಂಚಾಲಕರು-ಚಿತ್ತಾರದುರ್ಗ.ಕಾಂ
ಪ್ರಶಕ್ತ್ಜಿ ಸಿಕ್ಕಿದೆಯೇನ್ಥಾದರೂ ನಾವು ಕನ್ನಡ ಪುಸ್ತಕಗಳನ್ನು ಓದುವಾ . ಓದುಗರ ಮೆಚ್ಚುಗೆ ದೊಡ್ಡ ಪ್ರಶಸ್ತಿ. ಕಂಬಾರರಿಗೆ ಅಭಿನಂದನೆಗಳು. ಜ್ಞಾನಪೀಠ ಇನ್ನೂ ಬರದಿದ್ದರೂ ಜಿ ಎಸ ಎಸ , ಕಣವಿ ಯಂಥವರು ನಮಗೆ ಮೇರು ಕವಿಗಳೇ .
ಓ ಏನ್ ವಿ ಕುರುಪ್ ಅವ್ರಿಗೆ ಪ್ರಸಸ್ತಿ ಬಂದಾಗ ಮಲಯಾಳಂ ದೃಶ್ಯ ಮಾಧ್ಯಮಗಳಲ್ಲಿ ಬಂಧಂಥಹ ಪಾಂಡಿತ್ಯಪೂರ್ಣ ಮತ್ತು ಆರೋಗ್ಯಕರ ಕಾರ್ಯಕ್ರಮಗಳನ್ನು ನಮ್ಮಲ್ಲಿ ಹೇಗೆ ನಿರಿಕ್ಷಿಸಲಿ ? ಕರ್ನಾಟಕ ಸಾಹಿತ್ಯ ಅಕಾಡೆಮಿ ವೆಬ್ ಸೈಟ್ ನಲ್ಲಿ ಕಂಬಾರರ ಕಾವ್ಯ ವಾಚನ {ಗಾಯನ } ಕಂಡು ಕೇಳಿ ಆನಂದಿಸಿರಿ http://karnatakasahithyaacademy.org/#
I adore him. I have written a bit in Kendasampige. Quoting it here will be a repetition, which i think unessessary.
quodos to him
vijayaraghavan
ಬೇಂದ್ರೆ ಯವರ ನಂತರ ಕಂಬಾರ ರಷ್ಟು ಈ ನೆಲದ ಭಾಷೆಯ ಶೈಲಿಯನ್ನು ಹಚ್ಚಿ ಕೊಂಡು ಬರೆದವರು ಬೇರೆ ಯಾರು ಇಲ್ಲವೇನೋ. ಈ ನೆಲದ ಮಣ್ಣಿನ ಭಾಷೆಯಿಂದ ಅರಳಿದ ಅವರ ಸಿರಿ ಸಂಪಿಗೆ ಹೂವುಗಳು ಶಾಶ್ವತ ವಾಗಿ ಕನ್ನಡದ ಮುಡಿಯನ್ನು ಅಲಂಕರಿಸುತ್ತವೆ. ಅಪ್ಪಟ ದೇಸಿ ಪ್ರತಿಭಾ ಶಿಖರ ಮತ್ತು ಕಾಡುವ ಕಾಡು ಕುದುರೆ ಕಂಬಾರ್ ರಿಗೆ
ಅಭಿನಂದನೆಗಳು. ಅವರ ಬಗ್ಗೆ ಬರೆದ ಅವಧಿ ಗೆ ಅನಂತ ವಂದನೆಗಳು
ಇದರೊಂದಿಗೇ ಕಂಬಾರರ ಮತ್ತೊಂದು ಪದ ನೋಡಿ –
ಸಲಾಂ ಅಲೈ ಕುಂ ಡಿಂಗು ಡಾಂಗು ಸಾಹೆಬರಾ ಭಲೆ ಮೋಜುಗಾರ,
ಯಾರಿಲ್ಲ ಎದುರಿಗೆ ನಿಲ್ಲವರಾ ನಿನ ಸಮಾನರಾರ,
ಈ ನಾಡನ್ನಾಳೋ ರಾಜ,
ತಲೆ ತುಂಬಾ ಬದನೆ ಬೀಜ,
ಅವರಿಗಿಂತ ನೀವೇ ಉತ್ತಮರಾ….ಓ ಸಾಹೆಬರಾ..
ಪ್ರಜಾಫಬ್ರಭುತ್ವಕ್ಕೆ ಬಂದ ದುಸ್ಥಿತಿಯನ್ನು ವಿಡಂಬನಾ ಶೈಲಿಯಲ್ಲಿ ಹೇಳುವ ಈ ಪದ ಕೂಡಾ ಬಹಳ ಪ್ರಸ್ತುತ..
ಮಸ್ತು ಸಾರ್ ಈ ಹಾಡು !!
aana anli yadi tumbi badeti
wish you happy congrats to chandrashekara kambara sir.
Iam very happy . wish you happy congrats sir