ಘೋಡೇ ಕೋ ಜಲೇಬೀ ಖಿಲಾನೇ ಲೇ ಜಾ ರಿಯಾ ಹ್ಞೂ…

ರಘುನಂದನ

ಘೋಡೇ ಕೋ ಜಲೇಬೀ ಖಿಲಾನೇ ಲೇ ಜಾ ರಿಯಾ ಹ್ಞೂ ಎಂಬ ಅದ್ಭುತವಾದ ಚಲನಚಿತ್ರವನ್ನು ಕುರಿತು ನಿಮಗೆ ತಿಳಿಸಲು ಈ ಒಸಗೆ ಬರೆಯುತ್ತಿದ್ದೇನೆ.

ಅನಾಮಿಕಾ ಹಕ್ಸರ್ ಪರಿಕಲ್ಪಿಸಿಕೊಂಡು, ಬರೆದು, ನಿರ್ದೇಶಿಸಿದ ಈ ಚಿತ್ರವು ಇದೇ ಜೂನ್ 17, 18, 19, ಈ ಮೂರು ದಿನಗಳಂದು ಮಾತ್ರ ಪ್ರತಿದಿನ ಸಂಜೆ 7.25ಕ್ಕೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ವೆಗಾ ಸಿಟಿ ಮಾಲ್‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ನ ಪಿವಿಆರ್ ಚಲನಚಿತ್ರ ಮಂದಿರದಲ್ಲಿ ನೋಡಲು ಸಿಕ್ಕುತ್ತದೆ. ಇದು ವ್ಯಾಪಾರೀ ಚಿತ್ರವಲ್ಲವಾದ್ದರಿಂದ, ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳುವುದು ಅಸಾಧ್ಯವೇ ಆಗಿರುವಾಗ, ಅನಾಮಿಕಾ ಅವರು ಹರಸಾಹಸ ಮಾಡಿ ಪ್ಲಟೂನ್ ಎಂಬ ಚಿತ್ರವಿತರಕರ ಸಹಕಾರದಿಂದ ಪಿವಿಅರ್ ಸಮೂಹದ ಜೊತೆ ಮಾತನಾಡಿ ಮುಂಬೈ, ದೆಹಲಿ ಮುಂತಾದ ಕೆಲವು ಊರುಗಳಲ್ಲಿ ಇದು ಬೆಳಕುಕಾಣುವಂತೆ ನೋಡಿಕೊಂಡಿದ್ದಾರೆ. ಇದೀಗ ಬೆಂಗಳೂರಿನ ಸರದಿ ಅನ್ನುವುದು ಸಂತಸದ ಸಂಗತಿ.

ಈ ಸಿನಿಮಾವು 2019ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿ ಪಡೆದಿದೆ. ನಮ್ಮ ದೇಶ ಮತ್ತು ಹೊರದೇಶಗಳ ಹಲವು ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಬಹಳ ಮೆಚ್ಚುಗೆ ಗಳಿಸಿದೆ. ನಾನು ಇದನ್ನು ಎರಡೂವರೆ ವರ್ಷದ ಹಿಂದೆ Urban Lens ಎಂಬ ಚಿತ್ರೋತ್ಸವದಲ್ಲಿ ನೋಡಿ ಅಕ್ಷರಶಃ ಅಲ್ಲಾಡಿಹೋದೆ.

ನೀವೆಲ್ಲವರೂ – ನಾವೆಲ್ಲರೂ – ನೋಡಲೇ ಬೇಕಾದ ಸಿನಿಮಾ ಇದು. ನೀವು ಬೆಂಗಳೂರಿನಲ್ಲಿ ಇರುವವರಾದರೆ, ತಪ್ಪದೆ ಈ ಸಿನಿಮಾ ನೋಡಿ.

ಅಷ್ಟೇಕೆ, ತುಮಕೂರು, ಮಂಡ್ಯ, ರಾಮನಗರ, ಕನಕಪುರ, ಚನ್ನಪಟ್ಟಣ, ಮೈಸೂರು ಮುಂತಾಗಿ ಬೆಂಗಳೂರಿನ ಆಸುಪಾಸಿನಲ್ಲಿ ಇರುವವರಾಗಿ, ಸಿನಿಮಾ ಕಲೆಯನ್ನು ತುಂಬ ಪ್ರೀತಿಸುವವರಾದರೆ, ಆ ಕ್ಷೇತ್ರದಲ್ಲಿ ಕೆಲಸಮಾಡುತ್ತಿರವವರಾದರೆ, ಹೇಗಾದರೂ ಮಾಡಿ ಇದನ್ನು ನೋಡಿ. ನೋಡಲು ನೀವು ಪಟ್ಟ ಪ್ರಯಾಸವೇನೂ ವ್ಯರ್ಥವಾಗುವುದಿಲ್ಲ. ಬದಲಿಗೆ, ನಿಮ್ಮಲ್ಲಿ ಧನ್ಯತೆಯ ಭಾವವೇ ಉಳಿಯುತ್ತದೆ ಎಂಬ ಧೈರ್ಯವಿದೆ ನನಗೆ.

ಈ ಸಿನಿಮಾವನ್ನು ಕುರಿತ ಉಳಿದೆಲ್ಲ ವಿವರವನ್ನು ನಾನು ನಿಮ್ಮ ಜೊತೆ ಈಗ ಹಂಚಿಕೊಳ್ಳಲಿರುವ ಹಲವು ಲೇಖನಗಳು, ವಿಡಿಯೋಗಳು ಹೇಳುತ್ತವೆ. ಅನೇಕ ಕೊಂಡಿಗಳನ್ನು ಕಳಿಸುತ್ತಿದ್ದೇನೆ. ದಯವಿಟ್ಟು, ಬೇಸರ ಮಾಡಿಕೊಳ್ಳಬೇಡಿ.

ಈ ವಿಷಯದಲ್ಲಿ ಈವತ್ತು ಬೆಳಗ್ಗೆ ನಾನು ಸ್ನೇಹಿತರು ಹಲವರಿಗೆ ಇದೇ ಕೊಂಡಿಗಳನ್ನು ಕಳಿಸಿದ್ದೆ. ಇದೊಂದು ಬ್ರಾಡ್‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಕಾಸ್ಟ್ ಸಂದೇಶವಾದ್ದರಿಂದ, ಈ ಕೊಂಡಿ, ಲೇಖನ ಮುಂತಾದ್ದೆಲ್ಲ ಅವರಿಗೆ ಈಗ ಎರಡನೇ ಬಾರಿ ತಲುಪುತ್ತದೆ. ಹೀಗೆ ತೊಂದರೆಕೊಟ್ಟದ್ದಕ್ಕೆ ಅವರೆಲ್ಲರ ಕ್ಷಮೆ ಕೋರುತ್ತಿದ್ದೇನೆ.

ನೀವು ನೋಡಿ. ಸುದ್ದಿಯನ್ನು ಹರಡಿ. ಬಹಳ, ಬಹಳ ಅಪರೂಪದ ಸಿನಿಮಾ, ಅಸಲಿ ಸಿನಿಮಾವೊಂದನ್ನು ನೋಡಿದ ಅನುಭವ ನಿಮ್ಮ ಸ್ನೇಹಿತರಿಗೂ, ಇಷ್ಟರಿಗೂ ಆಗಲಿ.

‍ಲೇಖಕರು Admin

June 21, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: