ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮ್ಮನೂರಿನ ನೆನಪಿನ ಪರಿಮಳ…..ಒಟ್ಟಿಗೆ ಘಮ್ಮಂತಿದೆ…!!

 

 

 

ಚರಿತಾ ಮೈಸೂರು

 

 

 

 

 

ಹೊರಗೆ ಜಿರಿಗುಡುವ ಮಳೆ…
ಒಳಗೆ ಘಮ್ಮೆನುವ ಬಿಸಿಬಿಸಿ ತಿನಿಸು…
ಮೈಸೂರಿನ ಮನೆಯಲ್ಲಿ ಮಲೆನಾಡು ಹುಟ್ಟೋದು ಹೀಗೆ !!

ಇದು ಕೊಡಗಿನ ‘ಕೂವಾಲೆ ಪುಟ್ಟು’/ಹಿಟ್ಟು.
ಒಂದು ರಾತ್ರಿ ನೆನೆಸಿಟ್ಟ ಅಕ್ಕಿಯ ಜೊತೆಗೆ ಹಲಸಿನ ತೊಳೆ/ಬಾಳೆಹಣ್ಣು, ಬೆಲ್ಲ, ಏಲಕ್ಕಿ ತರಿತರಿಯಾಗಿ ರುಬ್ಬಿಕೊಂಡು, ಅದಕ್ಕೆ ಕಾಯಿಹೋಳು ಬೆರೆಸಿ, ಕೂವೆ ಎಲೆ/ಅರಿಶಿಣದ ಎಲೆ/ಬಾಳೆಲೆಯಲ್ಲಿ ಸುತ್ತಿ, ಹಬೆಯಲ್ಲಿ ಮೂವತ್ತು ನಿಮಿಷ ಬೇಯಿಸೋದು.
ತುಂಬಾ ಸರಳ ರೆಸಿಪಿ. ರುಚಿ ಮಾತ್ರ ಅದ್ಭುತ ! ಇದರ ಜೊತೆ ಬೆಸ್ಟ್ ಕಾಂಬಿನೇಶನ್ ಅಂದ್ರೆ, ಜೇನು ಮತ್ತು ತುಪ್ಪ.

ಕೂವೆ ಎಲೆ, ಹಲಸಿನಹಣ್ಣು ಎರಡೂ ಸದ್ಯಕ್ಕೆ ಇಲ್ಲದಿದ್ರೂ ಹೋದವಾರ ಮಾಮ ತಂದುಕೊಟ್ಟಿದ್ದ ಕೊಡಗಿನ ಬಾಳೆಗೊನೆ ಇದ್ದೇ ಇತ್ತು. ಅರಿಶಿನದ ಎಲೆ ಕೂಡ ಹಿತ್ತಲ ಗಿಡದಲ್ಲಿತ್ತಲ್ಲ ! ಇನ್ನು ಈ ಹಬೆಯಾಡುವ ‘ಕೂವಾಲಿಟ್ಟು’ ರೆಡಿಯಾಗೋದೆಷ್ಟೊತ್ತು ?!
ಹಿಟ್ಟು ಬಾಳೆಲೆ, ಕೂವೆ ಎಲೆ, ಅರಿಶಿನದೆಲೆ ಯಾವುದರಲ್ಲಿ ಬೆಂದರೂ ಅದನ್ನು ‘ಕೂವಾಲಿಟ್ಟು’ ಅಂತ್ಲೆ ಕರೆಯೋದು ರೂಢಿ. ಹಾಗಾಗಿ, ಇದನ್ನೂ ಹಾಗಂತ್ಲೆ ಕರೆಯಬಹುದು.

ಏಲಕ್ಕಿ, ಬೆಲ್ಲ, ಬಾಳೆಹಣ್ಣು, ಅರಿಶಿಣದೆಲೆಯ ಗಂಧ ಮತ್ತು ಅಮ್ಮನೂರಿನ ನೆನಪಿನ ಪರಿಮಳ…..ಒಟ್ಟಿಗೆ ಘಮ್ಮಂತಿದೆ…!!

‍ಲೇಖಕರು avadhi

28 December, 2017

1 Comment

  1. Lalitha siddabasavayya

    ನೋಡಿದ್ರೇ ಬಾಯಲ್ಲಿ ನೀರೂರ್ತಾ ಇದೆ ,, ವಾವಾವಾವಾ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading