ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೋ ಮಾತೆಯೆಂದಿರಾ..?

ಚಲಂ ಹಾಡ್ಲಹಳ್ಳಿ 

ಗೋ ಮಾತೆಯೆಂದಿರಾ..?
ನಿಮ್ಮ ನಂಬಿಕೆ ಅಂದುಕೊಳ್ಳಿ
ನಮ್ಮ ಮನೆಯ ಹಸು
ನಿಮ್ಮ ಮಾತೆಯಾಗಲಾರದು
ಯಾಕೆಂದರೆ
ನಿಮ್ಮ ಮಾತೆಯನ್ನು
ಅಷ್ಟು ಕಾಳಜಿಯಿರುವ ನೀವು
ನನ್ನ ಮನೆಯಲ್ಲೇಕೆ ಬಿಡುತ್ತೀರಿ..?
ಕೋಳಿ ಸಾಕುತ್ತೇನೆ
ಮನೆಯವರಿಗೆ ಅಥವಾ
ನೆಂಟರು ಬಂದರೆ
ಕೋಳಿ ಕುಯ್ದು ಸಾರು ಮಾಡುತ್ತೇನೆ
ಒಂದು ಹಬ್ಬ ಎಂದರೆ
ಕುರಿ,ಹಂದಿ ಹೊಡೆಯುತ್ತೇನೆ
ದನವನ್ನು ಸಾದಾರಣವಾಗಿ
ಮಾಂಸಕ್ಕಾಗಿ ಸಾಕುವುದಿಲ್ಲವಾದರೂ
ಸಾಕಿರುವ ಹಸು, ಹೋರಿ, ಎಮ್ಮೆಗಳನ್ನು
ಆಗಾಗ ಮಾರುತ್ತೇನೆ
ಹಸುವನ್ನು ಮಾರುವುದಾ..?
ಅಂದರೆ ಮಾತೆ..ಗೋಮಾತೆಯನ್ನು
ಅಂತ ಜಗಳಕ್ಕೆ
ನೀವು ಬರಲಾರಿರಿ
ನಮ್ಮ ಮನೆಯಲ್ಲಿ
ನಿಮ್ಮ ಮಾತೆ ಯಾಕಿರುತ್ತಾರೆ..?
ಒಂದು ವರುಷವಾದರೂ
ಗರ್ಭ ಕಟ್ಟದ ಹಸುವಿಗೆ
ಈ ಪಶು ವೈದ್ಯ
ಎಡಗೈಯ್ಯನ್ನು ಹಿಂಬದಿಯಿಂದ
ಒಳನೂಕಿ
ಗರ್ಭ ನಿಲ್ಲುವ ಇಂಜೆಕ್ಷನ್‌ ಹಾಕುವಾಗ
ಈ ಬಾರಿಯಾದರೂ ಗರ್ಭ ನಿಲ್ಲುತ್ತೆ
ಅನ್ನೋ ಭರವಸೆ..
ಗೋಮಾತೆಯ ಗರ್ಭಕೋಶಕ್ಕೆ
ಎಡಗೈ ಹಾಕುವ ಈ
ಪಶುವೈದ್ಯನಿಗೆಷ್ಟು ಸೊಕ್ಕು ಅಂತ
ಗೋಮಾತೆಯೆನ್ನುವ ನೀವು
ಕೇಳಲಾರಿರಿ
ಆತ ಹಸುವನ್ನು ಮಾತೆಯೆನ್ನದೇ
ಆರೋಗ್ಯ ನೋಡಿಕೊಂಡವ
ಗೋಮಾಂಸ ನಿಷೇದ ಅಂತಾಗಿದೆ
ಯಾರದೋ ಭಾವನೆಗೆ ಧಕ್ಕೆಯಂತೆ…
ತಿನ್ನದವರಿಗೆ ಧಕ್ಕೆ, ತಿನ್ನುವವರಿಗೂ ಧಕ್ಕೆ..
ನಮ್ಮ ಮನೆಯ ಹಸುವಿಗೂ
ಒಂದು ಆಹಾರ ಪದ್ದತಿಯಿತ್ತು
ಭತ್ತ, ರಾಗಿ ಹುಲ್ಲು
ಜೋಳ, ಸೀಮೇಹುಲ್ಲು
ಹಿಂಡಿ ಬೂಸಾ ಕಲಗಚ್ಚು
ಅದಕ್ಕೆಂದೂ ಮಾಂಸದ
ತುಂಡುಗಳನ್ನು ತಿನ್ನಿಸಲು
ಸಾದ್ಯವಿರಲಿಲ್ಲ..
ಹಾಗೇ ಇದೇ
ತಣ್ಣಗಿನ ದನಿಯಲ್ಲಿ ಹೇಳುತ್ತೇವೆ
ನಮಗೆ ಹುಲ್ಲು ತಿನ್ನಿಸುವ
ಪ್ರಯತ್ನ ಮಾಡಬೇಡಿ..

‍ಲೇಖಕರು avadhi

27 May, 2017

1 Comment

  1. Virupakshappa T

    Just unsubscribing avadhi.bcos of such vithandavaada maaduva janarind.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading