ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೋಪಾಡ್ಕರ್ ಎಂಬ ಕಿಂದರಿಜೋಗಿ

ಸುಳ್ಯ, ಕೊಡಗು, ಕಾಸರಗೋಡು ಮೂರರ ಸಂಸ್ಕೃತಿ ಮೇಳೈಸಿದ ಊರೇ ಅಡಕಾರು. ದಟ್ಟ ಕಾನನಕ್ಕೆ ಮುನ್ನುಡಿ ಬರೆದಂತೆ ಇರುವ ಊರು. ದಕ್ಷಿಣ ಕನ್ನಡದಿಂದ ಇನ್ನೇನು ಕೊಡಗಿಗೆ ದಾಟಿಕೊಂಡುಬಿಡುತ್ತೇವೆ ಎನ್ನುವಾಗ  ಸಿಗುವ ಈ ಊರಿನ ಹುಡುಗ ಗೋಪಾಲ.

ಗೋಪಾಲ ಎಂದರಾಗಲೀ, ಅಡಕಾರು ಎಂದರಾಗಲೀ ಯಾರಿಗೂ ಗುರುತು ಹತ್ತದ ಈತ ಎರಡೂ ಮೈವೆತ್ತ ಗೋಪಾಡ್ಕರ್. ಮಂಗಳೂರಿನ ಶಾಲೆಯಲ್ಲಿ ಉಪಾದ್ಯಾಯ. ಆದರೆ ಇದಕ್ಕೂ ಮೀರಿ ಅವರು ಮಕ್ಕಳ ಮನಸ್ಸಿನ ಜೊತೆ ನಿರಂತರವಾಗಿ ಪ್ರಯೋಗ ನಡೆಸುತ್ತಿರುವ ಮನಃಶಾಸ್ತ್ರಜ್ಞ. ಮೋಹನ್ ಸೋನ, ಐ ಕೆ ಬೊಳುವಾರು, ಎಂ ಜಿ ಕಜೆ ಜೊತೆಗೂಡಿ ನಿರತ ನಿರಂತ ಹುಟ್ಟುಹಾಕಿದ ಗೋಪಾಡ್ಕರ್ ಮಕ್ಕಳ ರಂಗಭೂಮಿಗೆ ನೀಡಿದ ಕೊಡುಗೆ ಅಪಾರ. ಅಲ್ಲಿಂದ ಶುರುವಾದ ಮಕ್ಕಳ ಒಡನಾಟ ಅವರನ್ನು ಇಂದು ಒಬ್ಬ ಯಶಸ್ವಿ ಮಕ್ಕಳ ತಜ್ಞರನ್ನಾಗಿ ಬೆಳಸಿದೆ. ಮಕ್ಕಳ ಮನಸ್ಸು, ನೆನಪು, ಶಿಕ್ಷಣಕ್ಕಾಗಿಯೇ ಇವರು ಸ್ಥಾಪಿಸಿದ ‘ಸ್ವರೂಪ’ ಮಕ್ಕಳ ಸಮೂಹ ಅನೇಕ ಕುತೂಹಲದ ಪ್ರಯೋಗಗಳನ್ನು ನಡೆಸಿದೆ.

ಗೋಪಾಡ್ಕರ್ ಕರಾವಳಿಯಲ್ಲಿ ಕಲೆಗಾರರ ಸೈನ್ಯವನ್ನೇ ಹುಟ್ಟುಹಾಕಿದ ಚಂದ್ರಶೇಖರ್ ಮಾಸ್ತರ್ ಅವರ ಶಿಷ್ಯ. ಅದರಲ್ಲಿಯೂ ವಿಶೇಷ ಪ್ರಯೋಗ ಇವರ ಆಸಕ್ತಿ. ಕ್ಷಣ ಮಾತ್ರದಲ್ಲಿ ಗೋಡೆಗಳನ್ನೇ ಚಿತ್ರಾಲಯವಾಗಿಸಿಬಿಡುವ ತಾಕತ್ತು ಇವರಿಗಿದೆ. ತುಳು ಸಾಹಿತ್ಯ ಅಕಾಡೆಮಿಯ ಗೋಡೆಗಳು ಎಂತವರನ್ನೂ ತಲೆದೂಗುವಂತೆ ಮಾಡಿದೆ. ಗೋಪಾಡ್ಕರ್ ಅವರ ಕಲೆಗಾರಿಕೆಯ ಬಗ್ಗೆ ಒಂದು ನೋಟ ಇಲ್ಲಿದೆ.

   

   

 

‍ಲೇಖಕರು avadhi

12 May, 2008

1 Comment

  1. gurubaliga

    ಕಾರ್ಯಕ್ರಮವೊಂದಕ್ಕೆ ರಂಗ ವಿನ್ಯಾಸ ಮಾಡಿಸಲು ಹೋಗಿದ್ದೆ. ಮಾತನಾಡುತ್ತಿರುವ ಹಾಗೆಯೆ
    ೧.ನನ್ನ ಮುಖದ ಉಗುರು ಚಿತ್ರ
    ೨. ಕ್ರೆಯೊಂಸ್ ನಿಸರ್ಗದ ಚಿತ್ರ (ಬಿಡಿಸಿದ್ದು ಮಾತ್ರವಲ್ಲ ಚೌಕಟ್ಟು ಅಳವಡಿಸಿ ಕೂಡ)
    ೩. ನಾನು ಹೋದ ಕೆಲಸ
    ಇಷ್ಟೆಲ್ಲಾ ಮಾಡಿ ಕೊಟ್ಟರು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading