
ಸನತ್ ಕುಮಾರ್ ಬೆಳಗಲಿ

ಆಗಿನ ಗದ್ದರ ಹಾಗಿದ್ದರು, ಈಗಿನ ಗದ್ದರ ಹೀಗಿದ್ದಾರೆ, ಇದಕ್ಕಿಂತ ವಿಶೇಷ ವಾಖ್ಯಾನ ಅನಗತ್ಯ ಅನಿಸುತ್ತದೆ,
ಮೊನ್ನೆ ತಾನೆ ಸಿ ಪಿ ಎಂ ಸಮಾವೇಶದಲ್ಲಿ ಪಾಲುಗೊಂಡಿದ್ದರು,
ಜನರ ನಂಬಿಕೆಯನ್ನು ಗೌರವಿಸುವ ಹೆಸರಿನಲ್ಲಿ ಪುರೋಹಿತರ ಎದುರು ಮಂಡಿಯೂರಿ ಕುಳಿತದ್ದನ್ನು ಕಂಡು ನನಗೂ ಮೊದಲು ನಂಬಲಾಗಲಿಲ್ಲ,
ನಾನು ತುಂಬ ಇಷ್ಟಪಟ್ಟ ಲಕ್ಷಾಂತರ ಜನರಿಗೆ ಸ್ಪೂರ್ತಿ ನೀಡಿದ ಗದ್ದರರ ಈ ಸ್ಥಿತಿ ನೊಡಿ ನನಗೂ ಬೇಸರವಾಗಿದೆ,
ಆದರೆ ಗದ್ದರ ಕೂಡ ಮನುಷ್ಯ ಬಾಬಾಸಾಹೇಬರು ಮತ್ತು ಭಗತ ಸಿಂಗರಂಥ ತ್ಯಾಗವನ್ನು ಅವರಿಂದ ನಿರೀಕ್ಷಿಸುವದು ಬೇಡ.
ಗದ್ದರ ಎಲ್ಲೂ ಹೋಗಿಲ್ಲ ಪಶ್ಚಾತಾಪ ಮಾಡಿಕೊಂಡು ಮತ್ತೆ ಬರುತ್ತಾರೆ
ಗದ್ದರರಿಗೆ ಸರಿಸಾಟಿಯಾದ ಕ್ರಾಂತಿಕಾರಿ ಕಲಾವಿದರಾದ ಸಂಭಾಜಿ ಭಗತ್, ಶೀತಲ ಸಾಠೆ ಅವರಂಥ ನೂರಾರು ಸಾಂಸ್ಕೃತಿಕ ಕಾರ್ಯಕರ್ತರು ಹೋರಾಟದ ಸಾಗರದಲ್ಲಿದ್ದಾರೆ






0 Comments