ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಗಂಗೆ ಬಾರೆ ಗೌರಿ ಬಾರೆ’ ಬಿಡುಗಡೆ ಫೋಟೋ ಆಲ್ಬಂ…

ಮೆಹಬೂಬ್ ಮಠದ ಕೊಪ್ಪಳ ಕಂಡಂತೆ

ಖ್ಯಾತ ಕಥೆಗಾರ ಡಾಕ್ಟರ್ ಮಿರ್ಜಾ ಬಷೀರ್ ಅವರ ಕಾಡುವ ಪಶುವೈದ್ಯ ಆತ್ಮಕಥನ ‘ಗಂಗೆ ಬಾರೆ ಗೌರಿ ಬಾರೆ’. ‘ಅವಧಿ’ಯಲ್ಲಿ ಅಂಕಣವಾಗಿ ಪ್ರಸಾರವಾದ ಈ ಕೃತಿಯನ್ನು ‘ಬಹುರೂಪಿ’ ಪ್ರಕಟಿಸಿದೆ.

ತುಮಕೂರಿನ ಅಮಾನಿಕೆರೆಯ ಬಳಿ ಇರುವ ಕನ್ನಡ ಭವನದಲ್ಲಿ ಈ ಕೃತಿಯನ್ನು ‘ಸುಧಾ’ ಹಾಗೂ ‘ಮಯೂರ’ ಕಾರ್ಯನಿರ್ವಾಹಕ ಸಂಪಾದಕರಾದ ಚ ಹ ರಘುನಾಥ್ ಅವರು ಬಿಡುಗಡೆ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ಲೇಖಕಿಯರ ಸಂಘಗಳ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕ ಲೇಖಕಿಯರ ಸಂಘದ ರಾಜ್ಯ ಅಧ್ಯಕ್ಷರಾದ ಡಾ. ಎಚ್ ಎಲ್ ಪುಷ್ಪ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಕಲಾವಿದರಾದ ಬಿ ಜಿ ಗುಜ್ಜಾರಪ್ಪ ಮುಖ್ಯ ಅತಿಥಿಗಳಾಗಿದ್ದರು.

‘ಬಹುರೂಪಿ’ಯ ಮುಖ್ಯಸ್ಥರಾದ ಜಿ ಎನ್ ಮೋಹನ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆಎಸ್ ಸಿದ್ದಲಿಂಗಪ್ಪ, ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಜಿ ಮಲ್ಲಿಕಾ ಬಸವರಾಜು ಉಪಸ್ಥಿತರಿದ್ದರು.

ಕಾರ್ಯಕ್ರಮದ ಫೋಟೋ ಆಲ್ಬಂ ಇಲ್ಲಿದೆ

‍ಲೇಖಕರು Admin

21 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading