ಕನ್ನಡ ಪತ್ರಿಕೋದ್ಯಮದಲ್ಲಿ ಸದಾ ಜೀವಂತ ಆಲೋಚನೆಗಳೊಂದಿಗೆ ಸಂಚರಿಸುವ, ಹೊಸ ತಲೆಮಾರಿನ ಜೊತೆ ಸಂವಾದ ನಡೆಸುವ, ಹುಮ್ಮಸ್ಸು ತುಂಬುವ, ಎಲ್ಲಕ್ಕೂ ಮಿಗಿಲಾಗಿ ಪತ್ರಿಕೋದ್ಯಮದ ಇಂದಿನ ಆಲೋಚನೆಗಳೊಂದಿಗೆ ಬದಲಾವಣೆಗೆ ತೆರೆದುಕೊಳ್ಳುತ್ತಾ ಹೋಗುವ ಪ್ರಜಾವಾಣಿಯ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕ ರಾಜಾ ಶೈಲೇಶಚಂದ್ರ ಗುಪ್ತ ಅವರು ಕರ್ನಾಟಕ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ಟಿ ಎಸ್ ಆರ್ ಪ್ರಶಸ್ತಿ ಸ್ವೀಕರಿಸಿದರು.
ರಾಜಾ ಶೈಲೇಶ್ ಚಂದ್ರ ಅವರದ್ದು ‘ಯಥಾ ರಾಜಾ ತಥಾ ಪ್ರಜಾ’ ಶೈಲಿ. ಅವರು ಸರಿಯಾಗಿ ಮುನ್ನಡೆಸಿದ್ದಾರೆ. ಅವರ ಪ್ರಜೆಗಳೂ ಸರಿಯಾದ ದಾರಿಯಲ್ಲಿದ್ದಾರೆ ಎಂಬುದು ಹೆಮ್ಮೆ.
ಇದೇ ಸಂದರ್ಭದಲ್ಲಿ ಶಿವರಾಮ ಅಸುಂಡಿ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಸುಮಂಗಲಾ ಮಮ್ಮಿಗಟ್ಟಿ ಹಾಗೂ ಶಿವಾನಂದ ಕಳವೆ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಸ್ವೀಕರಿಸಿದರು. ಎಲ್ಲರಿಗೂ ಅಭಿನಂದನೆಗಳು.

ಖುಷಿಯಾಯ್ತು ಗುಪ್ತಾಜಿ…
ನಿಮಗೆ ಇವೂ ಇಷ್ಟವಾಗಬಹುದು…





I met Shaileshchandra Gupta in Mumbai on his visit for some information once. He truly deserve this honour.