ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಖಜುರಾಹೊ – ಅಶೋಕ್ ಶೆಟ್ಟರ್ ಕವಿತೆ

ಖಜುರಾಹೊ

– ಅಶೋಕ್ ಶೆಟ್ಟರ್

ಸಂಭೋಗದ ಸುಖ ಯಾರದು?

ಕಲ್ಲಿನಲಿ ಕಣ್ಡರಿಸಿದೀ ಶಿಶ್ನ ಮೊಲೆಗಳು

ಬೇರೂರಿವೆ ಜೀವನದ ಕಲ್ಲ ಭ್ರಮೆಯಲ್ಲಿ

ತಣ್ಣಗಿವೆ ಸ್ಪರ್ಶಕ್ಕೆ ತೆಕ್ಕೆ ಬಿದ್ದಿಹ ಜೋಡಿ

ಆದರೆ

ಆ ಉದ್ರಿಕ್ತ ತೋಳೆಸೆತ?

ಅವಳು ಬಿರಿದಂತೆಲ್ಲ ಅವಳ ಹಿಂಬದಿ ತಿರುವು?

ಕಲ್ಲಲ್ಲ ಅದು

ಕಾಮೋದ್ರೇಕದ ಬೆಂಕಿ

ಸೊಂಟದಿಂದ ಚಿಮ್ಮಿದ ಹೂ ಮೃದುತ್ವ

ಪ್ರವಾಹಕ್ಕೆ ಸಿಕ್ಕ ಮಾಂಸದ ಹಾಡು

ಗಂಡಿನದೂ ಅಲ್ಲ

ಹೆಣ್ಣಿನದೂ ಅಲ್ಲ

ಸಂಭೋಗದ ಸುಖವಿರುವುದು ಶಿಲ್ಪಿ-ಶಿಲೆಗಳ ಮಧ್ಯೆ

(ಮಾಲತಿ ರಾವ್ ಎಂಬುವವರ Khajuraho ಎಂಬ ಪದ್ಯದ ಅನುವಾದ. ಯಾವುದೋ ಒಂದು ಕಾಲದಲ್ಲಿ ನಾನು ಮಾಡಿದ್ದು)

 

‍ಲೇಖಕರು G

28 November, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading