ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಷಮಿಸಿ ನಾವ್ ಹೇಳೋದೆಲ್ಲಾ ತಮಾಶೆಗಾಗಿ! ರಾಮಯ್ಯ pun and fun

ಪನ್ – ಫನ್

– ಸೂತ್ರಧಾರ ರಾಮಯ್ಯ

sing-le ಲೈನರ್ಸ್ – ಅನೇಕ ತಾನಾ   ಲೋಕಪಾಲ್ ‘ಬಿಲ್ಲಿ’ಗೆ ಗಂಟೆ ಕಟ್ಟೋಕೆ ‘ಚೂಹಾ’ ಗಳನ್ನ ನೇಮಿಸಿದರಂತೆ!   ಈ ಖಾದಿ ಆಟದವರ ಪಾರಮ್ಯಕ್ಕೆ ಪರ್ಯಾಯವೇ ಇಲ್ಲವೇ? ಅಂದರೆ, ಯಾಕೆ ನಾವಿಲ್ಲವೇ ಕಾವಿಯಾಟದವರು ಅಂದರಂತೆ!   ಓದದೆ ಬರಿತಲೇ ಇರೋನಿಗೆ ತಲೆ ಬರಿದಂತೆ; ಬರಿದಲೆ ಓದುತಲೇ ಇರೋನಿಗೆ ತಲೆ ಓಡದಂತೆ.   ಎತಿಕ್ಸ್ನೆಲ್ಲಾ ಎಲ್ಲಿಟ್ಟೆಯೋ ಪುಡಾರಿಪುಂಡಲೀಕ ಅಂದರೇ, ಎಲ್ಲಾ ಎತ್ತಿಕ್ಸ್ ಬುಟ್ಟೆ ಅಂದನಂತೆ!   ‘ವಿಷ’ಯ ಏನೆಂದರೆ, ಎಲ್ಲಾ ‘ಕಾಲ’ದಲ್ಲಿಯೂ ‘ಕೂಟ’ಗಳು ಇರುತ್ತವಂತೆ- ಕಲಾ ಕೂಟಗಳು ಹೊರತಲ್ಲವಂತೆ!   ತ್ರಿಕಾಲ ಜ್ಞಾನಿಗಳು ಎಲ್ಲಿರಬೇಕು? ಉತ್ತರ: ಪ-ತ್ರಿಕಾಲ-ಯದಲ್ಲಿ.   ಸ್ಟಿಂಗ್ ಆಪರೇಷನ್ ಮೂಲಕ ಮಾಧ್ಯಮಗಳು/ ನ್ಯೂಸ್ ಮೀಡಿಯಾಗಳು ಅಧಿಕಾರಸ್ತರ ಕುತ್ತಿಗೆಗೇ ಕುತ್ತು ತರುವುದರಿಂದ ಅವುಗಳನ್ನು ‘ನೂಸ್’ ಮೀಡಿಯಾ ಅಂತ ಕರಿಯಬಹುದೇ?   ಬರೀ ಪ್ರಲಾಪ ಗಳೇ ನಡೆದರೂ, ಕೋಟಿಗಟ್ಟಲೆ ಲಾಸು. ಒಂದು ನಿಮಿಷಕ್ಕೆ ಹದಿನೆಂಟು ಲಕ್ಷ ರೂಗಳ ನಷ್ಟವಂತೆ, ಹೀಗಾದರೆ ಬದುಕಿ ಉಳಿದೀತೇ ಸಂ ಸತ್ತು? ಸಾರ್ವಜನಿಕರ ಸಂಪತ್ತು!?   ಉಳ್ಳವರ ಅತಿ ಆಸೆಯೇ ಬಡವರ ದುಃಖಕ್ಕೆ ಕಾರಣ – ಅಧುನಿಕ ಬುಡ್ಡಾ.   ಒಂದು ಆಹ್ವಾನ ಪತ್ರಿಕೆ ಹೀಗಿತ್ತು: ರಾಯರಿಗೆ ಕನಕಾಭಿಷೇಕ ಮತ್ತು ಅವರ ನಾಲ್ಕನೇ ತಲೆಮಾರಿನ ಮೊದಲ ‘ಕುಡಿ ಗೆ’ ನಾಮಕರಣ. ಸ್ತಳ: ಶರಾಫ್ ಬಸಪ್ಪ ಗಂಗಮ್ಮ ಹಾಲ್. (ಗಾಂಧಿ ಬಜಾರಿನಲ್ಲಿದೆ)   ತನ್ನ ಕ್ಷೇತ್ರದ ಪ್ರತಿಯೊಬ್ಬ ಮತದಾರನನ್ನೂ ಹೆಸರಿಡಿದು ಕರೆವ ರಾಜಕಾರಿಣಿ ಖಂಡಿತಾ ಮತ ಲಬಿ, ಇದು ಒಂಥರಾ ಮತಲಾಬಿ.   ಹೇಳಿಕೆ: ಗಜಲ್ ಖಂಡಿತಾ ಸಾಯುವುದಿಲ್ಲ. ಕೇಳಿಕೆ: ಆದರೆ, ಕೇಳುವವರು? ಅಂಧಹಾಗೆ, ಕುರುಡರ ರಾಜ್ಯದಲ್ಲಿ ಕಣ್ಣುಳ್ಳ ಅಂಧರೂ ಮಹಾನುಭಾವರು.   ತಪ್ಪೆಸಗಿಯೂ, ಶಿಕ್ಷೆಯಿಂದ- ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಜನ(ರ)ತಂತ್ರ : ಜುಡಿಷಿಯಲ್ ಎನ್ಕ್ವೈರಿ?   end ಗುಟುಕು ನಾಯಕತ್ವ: ಒಳ್ಳೆ ಕೆಲಸ ಮಾಡೋದು; ಮಾಡೋಕೆ ಬಿಡೋದು. ನಾಯ್ ಕತ್ವ: ಒಳ್ಳೆ ಕೆಲಸ ಮಾಡೋರನ್ನ ಸಹಿಸದೆ, ಅವರ ವಿರುದ್ಧ ಸದಾ ಬೊಗುಳ್ತಿರೋದು.    ]]>

‍ಲೇಖಕರು G

20 January, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading