ಬಣ್ಣ, ವೇಷ, ವಾಸನೆಗಳ ಜಗ….

ಡಾ. ಪ್ರೇಮಲತ ಬಿ
ಹಸಿರು ಹಚ್ಚೆಯ, ಚೌಕಳಿಯ ಕಚ್ಚೆಯ
ತಿರುವು ಮುರುವಿನ್ನೆಜ್ಜೆಯ
ಜಟಾ ಜೂಟನ ಹುರಿ ಮೈಕಟ್ಟು
ಕಲಾವಿದನಿವ ಮಾಯಾವಿ
ಮಾಯೆಯ ಕಾಲ್ಕೆಳಗಿನ ಅಧಮ!
ಕಾಲ ಬದಲಾದರೇನು?
ಕ್ರಮ ಬದಲಾಗಿಲ್ಲ
ಬಣ್ಣ,ವೇಷ, ವಾಸನೆಗಳ ಜಗ
ನಗ್ನವಾಗಿಸಿದೆ ನಿನ್ನೊಳಗಿನ ಮೃಗ!
ನಿನ್ನ ಠಕ್ಕತೆಗಿದೋ ತಕ್ಕ ಉತ್ತರ
ಉದ್ಭವಿಸಿದಳಿವಳು ಮೀರಿ ನಿನ್ನೆತ್ತರ
ಮಾಟದ ಮೈಯ ಕೋಮಲಾಂಗಿ
ಹಣೆತುಂಬ ರಕ್ತ ಕಾರಿ
ಬಿರು ಬಿರುಸಿನ ಕೇಶ ಕೆದರಿ
ನಟನವಾಡುತ್ತ ನಡು ಮುರಿದು ಬಗ್ಗಿಸಿ
ಕತ್ತಲೆ-ಬೆಳಕಿನ ಸಮತೋಲನ ಸಾರಿ!
ಹೆಣ್ಣಲ್ಲ ಇವಳು ದುರ್ಗಿ
ಬಿಮ್ಮನಿಂತಳು ಕೈಯೆತ್ತಿ ವಿಜಯ ಸಾರಿ!!





Good One
ತುಂಬಾ ಸುಂದರ ,ವಾಸ್ತವಿಕತೆಯನ್ನ ಸಾರಿ ,ಎತ್ತಿ ಹಿಡಿವ ಕವಿತೆ