
ಬಸವಣ್ಣೆಪ್ಪ ಕಂಬಾರ
ಕಾಗದದ ದೋಣಿಯೆ
ಯಾಕಿಂತಾ ಮೌನ…?
ಬೆಂಕಿ ನೆತ್ತಿಮ್ಯಾಲ ಇಟಗೊಂಡ
ಇದೆಂತಾ ಪಯಣಾ…?
ನಿನ್ನ ಹಾದಿಗೆ ಬೆಳಕು ಬೇಕು ಖರೇ
ಆದರ ಹಕೀಕತ್ತ ಇರೋದ ಬ್ಯಾರೇ
ನಾನು ಘನ ಮೌನ, ಹಾಗು ಕತ್ತಲು
ನಿನ್ನ ಎರಿದವ ಬೆಂಕಿಯೊ…. ಬೆಳಕೊ…..
ಊರು ಬಿಟ್ಟು ಹೊರಟವನಿಗೆ ನೀ ಹೆಗಲಾಗಿರುವೆ
ಕೆಂಪು ಹಗಲಾಗಿರುವೆ
ಅಲೆಯೊಳು ಕೆಂಪು ಬಲೆ ಬೀಸಿ
ಆರ್ಭಟ ಮಾಡುತ ನಡೆದಿರುವೆ
ಕಡಲಿಗಂಜಿದವ ಕದ್ದು ಓಡುತ್ತಿರುವನು
ನನಗೇಕೆ ಬೇಕು ಬೆಳಕು
ನಿನ್ನ ನೆತ್ತಿ ಸುಡುತ್ತಿರುವವನ
ಮೇಲೆ ಅದೆಂತಾ ಮೋಹ
ಆ ಕೆಂಪು ಚೋರನ ಬಿಸಾಕು
ನನ್ನ ಮೈ ಮೇಲೆ
ಕೊಂದು ಹುಡಿಮಾಡುವೆ
ನನ್ನ ನೋಡಿದರೆ ಎಷ್ಟು ಅಹಂಕಾರ
ನಿನ್ನದೆ ಅಲ್ಲವೇ ಸಹಕಾರ…
ಸಾಗಲಿ ನಿಮ್ಮ ಪಯಣ
ಸಾಕು ನನಗೆ ಈ ಮೌನ…





ಪೆನ್ನೊಳಗಿನ
‘ಬೆಂಕಿ’ ನಿಮ್ಮ ಕವಿತೆ