ದುಷ್ಟ ಸಂಹಾರಿ..

ರನ್ನ ಕಂದ (ಸಚಿನ್ ಕುಮಾರ ಬ. ಹಿರೇಮಠ)
ನಿಮ್ಮ ಈ ನರ್ತನ
ಯಾವುದರ ಅಪವರ್ತನ?
ಯಾವುದೇ ಭಂಗಿಗಳೂ ಸದ್ಯಕ್ಕೆ ತಾರವು
ಯಾವುದೇ ಪರಿವರ್ತನ…
ನೀ ಸತಿಯೋ ರತಿಯೋಅರಿತರೇನೊಂದು ತರವಲ್ಲ..
ಆ ಶಿವನ ಈ ಮದನ
ಕೆದಕಿದಂತೆ ಇದು ಸಲ್ಲ…
ನಿನ್ನ ಲಲಾಟದ ಮೇಲಿನ ಕೆಂಪು
ನಿನ್ನ ರೌರವದ ಗುರುತೇ?
ಯಾವ ಔಚಿತ್ಯಕ್ಕೆ ಈ ನಿನ್ನ ಸಿಟ್ಟು?
ಇರಬಹುದೇ ನಿಮ್ಮೊಳಗೊಂದು ಗುಟ್ಟು?
ನಿನ್ನ ಬೆನ್ನ ಮೇಲೆ ಅವಳ
ಒಂಟಿಗಾಲಿನ ಭಂಗಿ
ನಿಂತಂತೆ ನಾರಿದೈವವೊಂದು
ಪುರುಷ ಪಿಶಾಚಿಯನ್ನು ನುಂಗಿ..
ಶತಮಾನಗಳಿಂದ ತುಳಿದ ಪುರುಷನ ಪೌರುಷವ
ಹೇಷಾವರದಿ ಕುಕ್ಕಿ ಹತ್ತಿಕ್ಕಿ..
ಮಹಾಪರ್ವವ ಆರಾಧಿಸುತ ನಿಂತ ನಾರಿ
ತಾಂಡವದಿ ದುಷ್ಟ ಸಂಹಾರಿ..
ಸದಾ ಚೇತೋಹಾರಿ…





0 Comments