
ವಿಜಯಲಕ್ಷ್ಮಿ ಸಿ
ಕಡಲ ಜ್ಯೋತಿಯೆ ನೀ,
ಇಲ್ಲವೇ ಉರಿಯುವ ಜ್ವಾಲೆಯೆ ನೀ!!
ಸಾಗರದ ಅಲೆಗಳ ಏರಿಳಿತಕೆ ಪ್ರತಿಕ್ರಿಯೆಯೇ ನಿನ್ನ ನರ್ತನ,
ಇಲ್ಲವೇ ಬೀಸುವ ಚಾಮರದ ಸ್ಪರ್ಶದಿ ತಂದ ನಾಚಿಕೆಯ ರೂಪವೇ ಆ ನಿನ್ನ ಬಿನ್ನಾಣ??
ಕಡಲ ಒಡಲಾಳದಲ್ಲಿ ಆಡುವ ಜೀವಗಳಿಗೆ ದಾರಿ ದೀಪವೋ ನೀನು,
ತೇಲುವ ಹಡಗಿನ ಮಡಿಲ ಸುಡುವ ಬೆಂಕಿಯೋ ನೀನು..
ಮುಸ್ಸಂಜೆಯ ಭಾನುವೇ ನಾಚಿ ಬಾನಿಂದ ಮರೆಯಾಗುವಂತೆ ಮಿನುಗಿದೆ ನಿನ್ನ ಕಾಂತಿ..
ನೋಡುವ ನಯನಗಳಿಗಂತು ಅದ್ಭುತ ಬಿಂಬ ನೀರೊಳಗಿನ ಆ ನಿನ್ನ ಪ್ರತಿಬಿಂಬ..





super dr