ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಲಿಕ್ ಆಯ್ತು ಕವಿತೆ: ಎದೆಯ ಕಿಚ್ಚು ದೀಪವಾಗಲಿ..

bidaloti ranganathಬಿದಲೋಟಿ ರಂಗನಾಥ್

ತಣ್ಣನೆಯ ಸಮುದ್ರ
ಕತ್ತಲೆಯಲೂ ಶಾಂತವಾಗಿ ಹರಿದು
ನೆಮ್ಮದಿಯಲಿ ಉಸಿರಾಡುತ್ತಿರಬೇಕಾದರೆ
ಅದಾವುದು ಹಡಗಿನಲಿ ಧೀಢಿರ್ ಕಿಚ್ಚು.!

ಕತ್ತಲೆಯಲಿ ಮುಳಗಿಹ ಮೌಢ್ಯವ ಬಿಟ್ಟು
ಸಮುದ್ರದ ಮೇಲೆ ನಿರಾಳವಾಗಿ
ಚಲಿಸುತ್ತಿರುವ ಹಡಗಿನ ಮೇಲೇಕೆ ಕಿಚ್ಚಿನ ಕಣ್ಣು
ಒಂದು ದೀಪದ ಬೆಳಕಾಗಿ ಬದಲಾಗಲಿ
ಹಡಗಿನ ಕೂತು ಆ ದೀಪದ ಬೆಳಕಿನಲಿ ಪದ್ಯವಾದರು
ಕೀಚುತ್ತೇನೆ.

ಸಮುದ್ರಕ್ಕೆ ಕಿಚ್ಚನು ನುಂಗುವುದು ಗೊತ್ತಿದೆ
ಮನುಷ್ಯನನ್ನ ನೂಕಿ ಹಡಗಿನಲಿ ಕೂತು
ಆಕಾಶಕ್ಕೆ ನಾಲಿಕೆ ಚಾಚಿದರೆ
ತಣ್ಣಗೆ ಬೆಳಗುವ ಚಂದ್ರ ಚುಕ್ಕಿಗಳು
ಸುಟ್ಟು ಭೂಮಂಡಲವೇ
ಉರಿದು ಬೂದಿಯಾದಾತು.

ಸಮುದ್ರದ ಅಂಚಿನಲಿ
ಗವ್ವೆನ್ನುವ ಕತ್ತಲಿದೆ
ಓಡಿಸುವ ಕೈಗಳಿಲ್ಲ..
ನಾಡು ಕಾಡು ಎಲ್ಲವೂ ಬೆಳಕ ಉಗಿಯುವ
ದೀಪಗಳಾಗಲಿ…
ಬದಲಾಗುವ ಮನಸುಗಳು ಹುಟ್ಟಲಿ.

ನೀಲಿ ತಿಳಿ ನೀರಿಗೆ
ಅಲ್ಲಲ್ಲಿ ಎಸೆದ ಕೆಂಡಗಳಗಳಂತೆ
ಕಾಣುವ ಸಮುದ್ರವೇ
ನೀನಾಗು ಬೆಂಕಿಯನು ನುಂಗುವ ಅಗ್ನಿ
ಉಳಿದ ಬೂದಿಯ ಮೇಲೆ
ನಾನೊಂದು ದೀಪವಾಗುತ್ತೇನೆ.
ಆಗೊಂದು ಸಮುದ್ರರಾಗದಲಿ
ಹಾಡೊಂದು ಮೂಡಿ…
ನೂರಾರು ದೀಪಗಳು ಮೂಡಿ
ತುಟಿ ಮೂಡಿದ ಕಂದಮ್ಮಗಳಿಗೆ
ಬೆಳಕನೀಯುತ್ತವೆ.

ನನ್ನ ಕಣ್ಣಿಗೆ
ಅದೊಂದು ಹಸಿರು ಕಾಡು
ಬೆಳಕಾದ ನಾಡಿನ ಹೆಜ್ಜೆ ಗುರುತು.
ಮಲ್ಲಿಗೆಯ ಹಾಸು.
ಸಮುದ್ರಕ್ಕೂ ಮನಸಿದೆ
ಹರಸಿ ಬಂದವರ ಬದುಕಿಗೆ
ಬದಲಾಗುವ ಹಂಬಲವಿದೆ.

ತಣ್ಣನೆಯ ಕವಿತೆ ಹೆಜ್ಜೆ ಸೋಕಿದರೆ,
ಕಿಚ್ಚು ದೀಪವಾಗುವುದು ಖಚಿತ.
ನಾನು ಕವಿಯಾಗುವುದು ನಿಶ್ಚಿತ.

‍ಲೇಖಕರು Admin

1 November, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading