ನಾ ದಿವಾಕರ
ನಕ್ಸಲ್ ಎಂದು ಭಾವಿಸಿ ಗುಂಡು ಹಾರಿಸಿಬಿಟ್ಟೆವು ಶೃಂಗೇರಿಯಲ್ಲಿ ಗೋವು ಸಾಗಿಸುತ್ತಿದ್ದ ಚಾಲಕ ಕಬೀರ್ ಎಂಬ ಅಮಾಯಕನ ಹತ್ಯೆ ಮಾಡಿದ ನಂತರ ನಕ್ಸಲ್ ನಿಗ್ರಹಪಡೆಯ ಅಧಿಕಾರಿಗಳು ನೀಡಿದ ಹೇಳಿಕೆ ಇದು. ಒಂದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಡಳಿತ ವ್ಯವಸ್ಥೆಯ ಸಿಬ್ಬಂದಿಯಿಂದ ಇಂತಹ ಹೇಳಿಕೆ ವ್ಯಕ್ತವಾಗುವುದು ಅಪಾಯಕಾರಿಯಷ್ಟೇ ಅಲ್ಲ ಖಂಡನಾರ್ಹವೂ ಹೌದು. ಯಾವುದೇ ಸಾಮಾಜಿಕ ವ್ಯವಸ್ಥೆಯಲ್ಲಿ ಅಪರಾಧಗಳು ಸಹಜ. ಆದರೆ ಅಪರಾಧಿಯನ್ನು ನಿರ್ಧರಿಸುವುದು ನಿರ್ಧಿಷ್ಟ ಅಪರಾಧಗಳ ಹಿಂದಿನ ಸನ್ನಿವೇಶ. ಎಂತಹುದೇ ಅಪರಾಧವಾದರೂ ನ್ಯಾಯಾಂಗದ ಪರಾಮರ್ಶೆಗೆ ಒಳಗಾದ ನಂತರವೇ ಶಿಕ್ಷೆಯ ಪ್ರಮಾಣ ತೀರ್ಮಾನವಾಗಬೇಕು. ನಕ್ಸಲ್ ಎಂಬ ಹಣೆಪಟ್ಟಿ ಒಬ್ಬ ವ್ಯಕ್ತಿಗೆ ಸಾವಿನ ಪ್ರಮಾಣ ಪತ್ರವನ್ನು ನೀಡುವುದಿಲ್ಲ. ನೀಡಿದ್ದೇ ಆದರೆ ಆಡಳಿತ ವ್ಯವಸ್ಥೆಯ ನಿರ್ವಾಹಕರು ಸಾವಿನ ದಲ್ಲಾಳಿಗಳಾಗಿಬಿಡುತ್ತಾರೆ. 1984ರಲ್ಲಿ, 2002ರಲ್ಲಿ ಇದರ ನಿದರ್ಶನವನ್ನು ಕಾಣಬಹುದು.
ಫ್ಯಾಸಿಸ್ಟ್ ವ್ಯವಸ್ಥೆಯಲ್ಲಿ ಇದರ ಮತ್ತೊಂದು ಆಯಾಮವನ್ನು ಕಾಣಬಹುದು. ಇಲ್ಲಿ ಪ್ರತಿರೋಧಿ ವರ್ತನೆಯೇ ಸಾವಿನ ಪ್ರಮಾಣ ಪತ್ರವಾಗಿಬಿಡುತ್ತದೆ. ಅಪರಾಧಗಳನ್ನು ನಿರ್ಧರಿಸುವ ಹಕ್ಕು ವ್ಯವಸ್ಥೆಯ ನಿರ್ವಾಹಕರಿಗೆ ಮಾತ್ರವಲ್ಲ, ವ್ಯವಸ್ಥೆಯ ಸಮರ್ಥಕರಿಗೂ ಕೊಡಮಾಡಲಾಗುತ್ತದೆ. ಭಿನ್ನಾಭಿಪ್ರಾಯಕ್ಕೆ ಅವಕಾಶವೇ ಇರುವುದಿಲ್ಲ. ಸ್ಥಾಪಿತ ವ್ಯವಸ್ಥೆಯ ಪ್ರತಿಪಾದನೆಗಳನ್ನು ಒಪ್ಪದೆ ಇರುವವರು ಮತ್ತು ವಿರೋಧಿಸುವವರಿಗೆ ಇಲ್ಲಿ ಬದುಕುವ ಹಕ್ಕು ಇರುವುದಿಲ್ಲ. ನಾಜಿ ಜರ್ಮನಿಯಲ್ಲಿ ಇದನ್ನು ಕಂಡಿದ್ದೇವೆ.. ಬಹುಶಃ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದನ್ನು ಕಾಣುತ್ತಿದ್ದೇವೆ. ಮೋದಿ ಅಲೆಯ ಪ್ರಭಾವವೋ ಏನೋ ಇದು ಅತಿರೇಕಕ್ಕೆ ಹೋಗುತ್ತಿದೆ. 1989-1993ರ ಅಯೋಧ್ಯಾಕಾಂಡದ ಅವಧಿಯಲ್ಲಿ ಸಂಘಪರಿವಾರ ಬಿತ್ತನೆ ಮಾಡಿದ ದ್ವೇಷದ ಬೀಜಗಳು ಈಗ ನಮೋ ನಮೋ ಎಂದು ಜಪ ಮಾಡುತ್ತಾ ಫಸಲು ನೀಡುತ್ತಿವೆ. ಹಿಂದುತ್ವ ಮತ್ತು ಫ್ಯಾಸಿಸಂನ ಪ್ರಯೋಗಾಲಯದ ನೂತನ ಪ್ರಯೋಗಗಳು ಅಯೋಧ್ಯೆ, ಮುಂಬೈ, ಗುಜರಾತ್, ಒರಿಸ್ಸಾ ಪಯಣ ಮುಗಿಸಿ ಈಗ ದಕ್ಷಿಣ ಕನ್ನಡದಲ್ಲಿ ಬೀಡು ಬಿಟ್ಟಿದೆ.
ಈ ಪಯಣದ ಒಂದು ಭಾಗವಾಗಿಯೇ ಕಬೀರ್ನಂತಹ ಒಬ್ಬ ವ್ಯಕ್ತಿ ಕೇವಲ ದನ ಸಾಗಿಸಿದ ತಪ್ಪಿಗಾಗಿ ಹತ್ಯೆಗೀಡಾಗುತ್ತಾನೆ. ದನವನ್ನು ಮಾರಾಟ ಮಾಡುವ ವ್ಯಕ್ತಿ ನೇಪಥ್ಯೆದಲ್ಲಿರುತ್ತಾನೆ. ದನವನ್ನು ಕೊಳ್ಳುವ ಉದ್ಯಮಿ ಬೆಳಕಿಗೇ ಬರುವುದಿಲ್ಲ. ದನದ ಮಾಂಸವನ್ನು ರಫ್ತು ಮಾಡಿ ಕೋಟ್ಯಂತರ ರೂಗಳ ಲಾಭ ಗಳಿಸುವ ಉದ್ಯಮಿ ಅಂತಾರಾಷ್ಟ್ರೀಯ ಮಾರುಕಟ್ಟೆಯ ಅರಮನೆಗಳಲ್ಲಿ ವಾಸಿಸುತ್ತಾ ಮೆರೆಯುತ್ತಾನೆ. ಇಲ್ಲಿ ತನ್ನ ಹೊಟ್ಟೆ ಹೊರೆಯಲು ದನಗಳನ್ನು ವಾಹನದಲ್ಲಿ ಸಾಗಿಸುವ ಅಮಾಯಕ ಚಾಲಕ, ತನ್ನ ವೃತ್ತಿ ಧರ್ಮವನ್ನು ಅನುಸರಿಸಿ ದನವನ್ನು ಕಡಿದು ಸರಬರಾಜು ಮಾಡುವ ಕಸಾಯಿಖಾನೆಯವ ಗೋ ರಕ್ಷಕರಿಂದ ಆಕ್ರಮಣಕ್ಕೊಳಗಾಗುತ್ತಾನೆ. ಮತೀಯ ಭಾವನೆಗಳ ಬುನಾದಿಯ ಮೇಲೆ ಆಡಳಿತ ವ್ಯವಸ್ಥೆಯ ಒಂದು ಭಾಗವಾಗಿ ರೂಪುಗೊಳ್ಳುವ ಫ್ಯಾಸಿಸ್ಟ್ ಮನೋಧರ್ಮದ ಸಾಂಸ್ಕೃತಿಕ ಆರಕ್ಷಕರು ಈ ಆಕ್ರಮಣಗಳ ರೂವಾರಿಗಳಾಗುತ್ತಾರೆ. ಮಂಗಳೂರಿನ ಹೋಂ ಸ್ಟೇ ಪ್ರಕರಣದಲ್ಲಿ ಮಹಿಳಯೆರ ಮೇಲೆ ಹಲ್ಲೆ ನಡೆಸಿದ ಪ್ರಭೃತಿಗಳೇ ಇಲ್ಲಿ ಮುಂಚೂಣಿಯಲ್ಲಿರುತ್ತಾರೆ..
ಸರ್ಕಾರ ಯಾವುದೇ ಇರಲಿ ಪ್ರಭುತ್ವ ಇಂತಹ ಫ್ಯಾಸಿಸ್ಟ್ ಪ್ರವೃತ್ತಿಗೆ ಪರೋಕ್ಷವಾಗಿ, ಪ್ರತ್ಯಕ್ಷವಾಗಿ ಒಂದು ಅವಕಾಶ ನೀಡಿದಾಗ ಅಭಿವ್ಯಕ್ತಿ ಸ್ವಾತಂತ್ರ್ಯ ಮಾತ್ರವಲ್ಲ ಬದುಕುವ ಹಕ್ಕೂ ಸಹ ಹಲ್ಲೆಗೊಳಗಾಗುತ್ತದೆ. ಕಬೀರನ ಹತ್ಯೆಯನ್ನು ಮಾನವೀಯ ನೆಲೆಯಲ್ಲಿ ವಿರೋಧಿಸುವ ಸುರೇಶ್ ಭಟ್ ಅವರಂತಹ ಹೋರಾಟಗಾರರ ಮುಖಕ್ಕೆ ಸಗಣಿ ಎರಚಲಾಗುತ್ತದೆ. ಅರವಿಂದ ಕೇಜ್ರಿವಾಲ್ ಗೆ ಕಪಾಳಮೋಕ್ಷ ಮಾಡಲಾಗುತ್ತದೆ. ಪ್ರಜಾತಂತ್ರ ವ್ಯವಸ್ಥೆಯ ಆಡಳಿತ ಯಂತ್ರಗಳು ಇಂತಹ ಫ್ಯಾಸಿಸ್ಟ್ ಮನೋಧರ್ಮದ ಸಂಘಟನೆಗಳಿಗೆ, ವ್ಯಕ್ತಿಗಳಿಗೆ ಮಾಹಿತಿದಾರರ ಸ್ಥಾನ ನೀಡುವ ಮೂಲಕ ಅನಧಿಕೃತ ಪರವಾನಗಿಯನ್ನೂ ನೀಡಿರುತ್ತದೆ. ಹಾಗಾಗಿಯೇ ದನ ಸಾಗಿಸುವವರನ್ನು ಹಿಡಿದು, ಥಳಿಸಿ ಪೊಲೀಸರಿಗೆ ಒಪ್ಪಿಸುವ ಈ ಸಂಘಟನೆಗಳು ಧರ್ಮ ರಕ್ಷಣೆಯ ಹೆಸರಿನಲ್ಲಿ ಮಾನವ ಧರ್ಮವನ್ನೇ ಉಲ್ಲಂಘಿಸಲು ಮುಂದಾಗುತ್ತಾರೆ. ವಸ್ತ್ರ ಸಂಹಿತೆಯನ್ನು ಹೇರುತ್ತಾರೆ. ಮಾನವರ ನಡುವಿನ ಸ್ನೇಹಕ್ಕೆ ಮತೀಯ ಸ್ವರೂಪ ನೀಡಿ ಲವ್ ಜಿಹಾದ್ ಹೆಸರಿನಲ್ಲಿ ಸಮುದಾಯದ ಮೇಲೆ ನಿಯಂತ್ರಣ ಸಾಧಿಸುತ್ತಾರೆ.
ಇಲ್ಲಿ ಹಲ್ಲೆಗೊಳಗಾಗುವುದು ವ್ಯಕ್ತಿಗಳಲ್ಲ , ಸಂಘಟನೆಗಳಲ್ಲ. ಪ್ರಜಾತಂತ್ರ ಮೌಲ್ಯಗಳು. ಮಾನವೀಯ ಮೌಲ್ಯಗಳು. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಂವಿಧಾನಿಕ ಮೌಲ್ಯಗಳು. ಇದನ್ನು ತಡೆಗಟ್ಟುವ ಗುರುತರ ಹೊಣೆಗಾರಿಕೆ ಚುನಾಯಿತ ಸರ್ಕರದ ಮೇಲಿದೆ. ಇದನ್ನು ಪ್ರತಿಭಟಿಸುವ ಹಕ್ಕು ಪ್ರಜ್ಞಾವಂತ ಜನತೆಗಿದೆ. ಆದರೆ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನಗಳು ನಡೆದಾಗ ಸರ್ಕಾರ ಮೌನ ವಹಿಸಿದರೆ ಏನು ಮಾಡುವುದು ? ಇದು ಮೂರ್ತ ಪ್ರಶ್ನೆ. ಭಾರತದ ಪ್ರಜಾತಂತ್ರ ವ್ಯವಸ್ಥೆ ಫ್ಯಾಸಿಸಂನತ್ತ ದಾಪುಗಾಲು ಹಾಕುತ್ತಿರುವುದರ ಸಂಕೇತ ಸ್ಪಷ್ಟವಾಗಿದೆ. ಮುಂದಿನ ಹೆಜ್ಜೆ ???????????????







idu nijakkoo khedakari
ದಿವಾಕರ್ ಅವರಿಗೆ– ಕಬೀರ್ ಸಾವು ತಾವು ತಿಳಿದುಕೊಂಡಷ್ಟು ಸರಳವಾಗಿಲ್ಲ. ಅದರ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ವಿಶ್ಲೇಷಣೆಗಳು ಪತ್ರಿಕೆಗಳಲ್ಲಿ, ಬ್ಲಾಗುಗಳಲ್ಲಿ ನಡೆದಿವೆ. ಆದರೆ ತಮ್ಮ ನಕ್ಸಲರ ಬಗೆಗಿನ soft corner ಚಿಂತನೆಯಲ್ಲಿ ಅವರಿಂದ ಹತರಾದ ಸಾಮಾನ್ಯ ಜನರ ಬಗ್ಗೆ ,ಯೋಧರ ಬಗ್ಗೆ ಕರುಣೆಯ ಒಂದು ಹನಿಯೂ ಇಲ್ಲವಲ್ಲ. ಇದು ನ್ಯಾಯವೇ? ಜತೆಗೆ ಕಬೀರ್ ಸಾವಿನ ಜತೆ ಮೋದಿ ಅಲೆಯ ಪ್ರಸ್ತಾಪಮಾಡಿರುವುದು ತಮ್ಮ ಪೂರ್ವಗ್ರಹ ಅಲ್ಲವೇ????
ಮೋದಿ ಅಲೆ ಸೃಷ್ಟಿಸುತ್ತಿರುವ ಫ್ಯಾಸಿಸ್ಟ್ ಮನೋಧರ್ಮಕ್ಕೂ, ಸಮರಶೀಲತೆಗೂ, ಯುದ್ಧಪ್ರಿಯತೆಗೂ ಮತ್ತು ನ್ಯಾಯಾನ್ಯಾಯಗಳ ಪರಾಮರ್ಶೆಯಿಲ್ಲದೆ ಕಂಡಲ್ಲಿ ಗುಂಡಿಟ್ಟು ಕೊಲ್ಲುವ ಅಮಾನವೀಯ ಸಾಮಾಜಿಕ ವ್ಯವಸ್ಥೆಗೂ ಅವಿನಾಭಾವ ನಂಟು ಇದೆ. ಯೋಧರ ಬಗ್ಗೆ ಕರುಣೆಯ ಹನಿ ಇಲ್ಲ ಎಂದು ಹೇಗೆ ಭಾವಿಸುವಿರಿ. ಇಲ್ಲಿ ನಾನು ಕಬೀರನ ಸಾವನ್ನು ಒಬ್ಬ ವ್ಯಕ್ತಿಯ ನೆಲೆಯಲ್ಲಿ ನೋಡಿದ್ದಾನೆ. ಮುಸ್ಲಿಂ , ನಕ್ಷಲ್, ದೇಶದ್ರೋಹಿ ಇತ್ಯಾದಿಗಳ ನೆಲೆಯಲ್ಲಿ ಅಲ್ಲ. ನಕ್ಸಲ್ ವಿರುದ್ಧ ಕಾರ್ಯಾಚರಣೆಯಲ್ಲಿ ಸೇನೆಯನ್ನು ಬಳಸಿಕೊಂಡು ನೂರಾರು ಸೈನಿಕರ ಹತ್ಯೆಗೆ ಕಾರಣರಾದವರು ಮೋದಿಯಂತಹ ಆಳ್ವಿಕರೇ ಅಲ್ಲವೇ. ನೀವು ನಕ್ಸಲ್ ವಿರೋಧಿ ಕಾರ್ಯಾಚರನೆಯನ್ನು ಸಮರ್ಥಿಸುವಿರಾದರೆ ಸೇನೆಯ ಬಗ್ಗೆ ನೀವೂ ಚಿಂತಿಸಬೇಕಾಗುತ್ತದೆ. an eye for an eye makes the whole world blind ಎಂದು ಗಾಂಧೀಜಿ ಹೇಳಿದ್ದರು. ಸಾಮಾಜಿಕ, ರಾಜಕೀಯ ಸಮಸ್ಯೆಗಳ ನಿವಾರಣೆಗಳಿಗೆ ಮಾನವೀನ ನೆಲೆಯ ಪ್ರಯತ್ನಗಳೇ ಸಮರ್ಥನೀಯ.
ಹಿಂದುತ್ವ ಮತ್ತು ಫ್ಯಾಸಿಸಂನ ಪ್ರಯೋಗಾಲಯದ ನೂತನ ಪ್ರಯೋಗಗಳು ಈಗ ದಕ್ಷಿಣ ಕನ್ನಡದಲ್ಲಿ ಬೀಡು ಬಿಟ್ಟಿದೆ,ನಿಜ.
Anonymous ಅವರಿಗೆ— ಆದರ್ಶಗಳು,ಮಾನವೀಯ ಮುಖಗಳು ಇರಬೇಕು. ಅದನ್ನು ನಾನು ವಿರೋಧಿಸುವವನಲ್ಲ. ಆದರೆ ನಮ್ಮ ಸುತ್ತಾ ಶತ್ರು ರಾಷ್ಟ್ರಗಳು ಸುತ್ತುವರಿದಿರುವಾಗ ನೀವು ಮಾನವೀಯತೆಯ ಜಪ ಮಾಡುತ್ತಾ ಕೂರುವುದು ವ್ಯಾವಹಾರಿಕವಲ್ಲ. . ಇಡೀ ಪ್ರಪಂಚವನ್ನೇ ನಿಶಸ್ತ್ರಗೊಳಿಸುವುದು ಅಸಾಧ್ಯದ ಮಾತು. ನಮ್ಮ ದೇಶದ ರಕ್ಷಣೆ ಮಾಡುವುದು ಮತ್ತು ಆ ಮೂಲಕ ಜನಗಳ ಹಿತ ಕಾಯುವುದು ಸರ್ಕಾರದ ಕರ್ತ್ಯವ್ಯ. ಜೈಲು,ಸೈನ್ಯ,ಗಡಿಗಳಿಲ್ಲದ ಆದರ್ಶ ಸಮಾಜದ,ರಾಷ್ಟ್ರಗಳ ಕಲ್ಪನೆ ಬಗ್ಗೆ ಎ ಸಿ ರೂಮಿನಲ್ಲಿ ಕುಳಿತು ಚರ್ಚೆ,ಭಾಷಣ ,ಸೆಮಿನಾರುಗಳನ್ನು ಮಾಡಬಹುದು. First class ಟಿ ಎ, ಡಿ ಎ ಪಡೆದು ಆರಾಮವಾಗಿ ಮನೆಗೆ ಬರಬಹುದು . ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ವಿಶ್ವಮಾನವತೆಯ ಸಂದೇಶ ಸಾರಲು ನಮಗೆ ಅನುವು ಮಾಡಿಕೊಟ್ಟಿರುವುದು ಸೈನ್ಯ,ಪೋಲಿಸ್ ಮತ್ತು ಸರ್ಕಾರ ಎಂಬುದನ್ನು ನಿರಾಕರಿಸಲು ಸಾಧ್ಯವೇ ಇಲ್ಲ. ಭಾರತಕ್ಕೆ ಸ್ವಾತಂತ್ರ್ಯಬಂದಾಗಲಿನಿಂದ ಇಂದಿನವರೆಗೂ ಶತ್ರು ರಾಷ್ಟ್ರಗಳ ಸಮಸ್ಯೆ ಇದೆ. ಅವರಾಗೇ ಕಾಲು ಕೆರೆದು ಕೊಂಡು ಬರುತ್ತಿದ್ದಾರೆ,ಗಡಿಗಳಲ್ಲಿ ಗುಂಡಿನ ದಾಳಿ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಸರ್ಕಾರ ಕೈ ಕಟ್ಟಿ ಕೂರಬೇಕೆ? ಶಾಂತಿಯ ಮಂತ್ರ ಹೇಳಿದರೆ ಶತ್ರುಗಳು ವಾಪಸ್ಸು ಹೋಗುತ್ತಾರೆಯೇ?
Sir, why cant you write anything without prejudice?
I dont think you would have written this piece if the deceased person was not Kabir but any name of the religion you belong to.
You are a tremendous writer; we have loved your writing since long time.
But, it pains to see you getting prejudiced for no reason.
It is easy to sit in the comfort of your room and write judgmental articles in retrospect.
What if the deceased person had a gun with him and had killed a couple of officers?
The retrograde analysis is the easiest; but should be done by experts and not people who have no personal experience of how the combat goes.
Please think over.
Anonymous ಅವರಿಗೆ — ತಾವು ಚರ್ಚೆಯಲ್ಲಿ ೩೦-೪-೧೪ ರಂದು ೪. ೩೯ರ ಸಮಯದಲ್ಲಿ ವ್ಯಕ್ತ ಪಡಿಸಿರುವ ‘why cant you write anything without prejudice ….’ಎಂದು ಪ್ರಾರಂಭವಾಗುವ ಅಭಿಪ್ರಾಯ ನನ್ನ ಕುರಿತದ್ದೋ ಅಥವಾ ಆ ಲೇಖನವನ್ನು ಬರೆದವರಿಗೆ ಸಂಬಂಧಿಸ್ಸಿದ್ದೋ ತಿಳಿಯಲಿಲ್ಲ. ಪ್ರತಿಕ್ರಿಯೆಯ ಪ್ರಾರಂಭದಲ್ಲಿ ಹೆಸರನ್ನು ಸೂಚಿಸಿದ್ದರೆ ಚೆನ್ನಾಗಿತ್ತು. ಇರಲಿ. ನನ್ನ ಪ್ರತಿಕ್ರಿಯೆಯ ನಂತರ ತಾವು ಪ್ರತಿಕ್ರಿಯಿಸಿರುವುದರಿಂದ ನನಗೇ ಸಂಬಂಧಿಸಿದ್ದು ಎಂದು ಭಾವಿಸಿದ್ದೇನೆ. ನಾನು ಯಾವ ಪೂರ್ವಗ್ರಹಪೀಡಿತನಾಗಿ ಪ್ರತಿಕ್ರಿಯೆ ಬರೆದಿಲ್ಲ. ತಾವು ಸತ್ತವರ ಹೆಸರು ಸೂಚಿಸಿ ಅವರ ಬದಲು ನನ್ನ ಹೆಸರು ಸೂಚಿಸುವ ಜನಾಂಗ/ಮತ/ಧರ್ಮದವರು ಯಾರಾದರೂ “ಆ ಘಟನೆಯಲ್ಲಿ”ಮೃತರಾಗಿದ್ದರೆ ಇದೇ ರೀತಿ ಬರೆಯುತ್ತಿದ್ದೀರಾ? ಎಂದು ಪ್ರಶ್ನಿಸಿದ್ದೀರಿ. ನಾನೂ ಸಹ ತಮಗೆ ಇದೇ ಪ್ರಶ್ನೆ ಹಾಕಬಹುದಲ್ಲವೇ? ತಾವು ಮತ್ತು ಈ ಲೇಖನ ಬರೆದವರೂ ಸೇರಿದಂತೆ ರಾಜ್ಯದಾದ್ಯಂತ ಸಾಮಾಜಿಕ ಜಾಲ ತಾಣಗಳಲ್ಲಿ,ಪತ್ರಿಕೆಗಳಲ್ಲಿ ಬರೆದವರು/ಬರೆಯುತ್ತಿರುವವರೂ “ಆ ಘಟನೆಯನ್ನು” ಒಂದು ಧರ್ಮದ ಹೆಸರಿನ ಜತೆ ತಳುಕುಹಾಕಿ ಬರೆಯುತ್ತಿದ್ದೀರಿ ಎಂದು ಅನಿಸುತ್ತಿಲ್ಲವೇ? ಇದಕ್ಕೆ ಪುರಾವೆಯೋ ಎಂಬಂತೆ ಸರ್ಕಾರದ ನಡೆ-ನುಡಿಗಳೂ ಸೇರಿಕೊಂಡಿವೆ. ಇದನ್ನು ನಾನು ಹೇಳಿದ್ದೇ ತಪ್ಪೇ? ನಾನು ಇಂದು ಸಮಾಜವನ್ನು ಕಾಡುತ್ತಿರುವ ನಕ್ಸಲ್ ನಂತಹ ಒಂದು ಸಮಸ್ಯೆಯ ಬಗ್ಗೆ ಮಾತ್ರ ಬರೆದಿದ್ದೇನೆ. ಆದರೆ ತಾವು “what if the deceased person had a gun with him and had killed one or two officers?” ಎಂದು ಕೇಳಿದ್ದೀರಿ. ನಾನು ರೂಮಿನಲ್ಲಿ ಕುಳಿತು ಒಂದು shoot out ಪ್ರಕರಣದ analysis ಬರೆದಿಲ್ಲ. ಆದರೆ ಬೆಳಗಿನ ಜಾವ ಮೂರರಿಂದ ನಾಲ್ಕು ಗಂಟೆಯ ಸುಮಾರಿನಲ್ಲಿ ನಡೆದ ಆ ಪ್ರಕರಣವನ್ನು ‘ಕ್ಯಾಮೆರಾ’ ಕಣ್ಣಿನಲ್ಲಿ ತಾವೇ ಸ್ವತಃ ನೋಡಿದಂತೆ ಬರೆದವರ ಹಿತಾಸಕ್ತಿ/ಬದ್ಧತೆ/ಧ್ಯೇಯ/ಧೋರಣೆಗಳ ಬಗ್ಗೆ ಮಾತ್ರ ಪ್ರತಿಕ್ರಿಯಿಸಿದ್ದೇನೆ. ಇದು ತಮಗೆ prejudice ಎಂದು ಕಂಡರೆ ನಾನು ಏನು ಮಾಡಲಿ?
Mr Sriranga
Sorry for the confusion.
It was not meant for you, but for the original author.
Since I wrote it as a separate comment (and not as reply to your comment, as I am doing now), I felt I am addressing the author.
In fact, I agree with your views!
Despite leaving my name, the browser has taken it as anonymous! I dont know the reason
I have never left any anonymous comment.
Sorry for the confusion again.
Thank you
First of all i would like to make a point clear. in my article i have never referred kabir either as a naxal or as a muslim my first sentence , a quote by the police , is mentioned to expose the dangerous stance of a state. ” What if kabir had ppossesed a weapon ” ? this question needs to be answered in a seperate article. suffice to say, as a human rights activist i want a democratic state to be democratic and not trigger happy. The british, in particular general Dyer massacred hundreds in jalianwalabagh. the british argument was the same ” what if the congregation turned out to be violent against the state ” Bhagaath singh was hanged by british on the text ” what if bhagat singh had resorted to violent revolution” in both these cases state and its reading of a protest movement is the culprit. Bhagath singh was an enemy of british raj, his ideology is still an enemy of indian state, is it not ? to understand the role of state vis a vis protest movements please read nelson mandela’s defence upon his conviction by white government. I am translating it. killing a person by the state apparatus assuming him/her to be of some identity tantamounts to a military state not democratic one. I hold the same view even if the victim is kabir , thomas, rama or sardar singh.
Sir,
It takes a greater canvas and arena to discuss this problem.
It is neither simple nor point-blank. The multifactorial facets of the problem cannot be evaluated from a single angle or mono-view point.
“ಕಬೀರ್ ಎಂಬ ಅಮಾಯಕ” is a retrospective analysis. When you are on the spot, you dont have the privilege of knowing this. There are only two choices: fire or die. The third choice of running away or ignoring does not serve the purpose of forming the force.
The CID enquiry has clearly observed that the firing was not meant to kill; it was meant to disable the victim from doing anything harmful to the squad.
It was very unfortunate that the kind of weapons they get do not follow the thinking of person who fires. But, the members of squad are choiceless in this issue.
Sir, such officers are needed to enable us to have a good night sleep so that we can get up fresh and write intellectual stuff. Their action should be seen in the light of such indebtation.
Sir, there is lot of difference between perspective of General Dyer and this squad. We should be intelligent enough to understand this before giving a gross comparison. It is the same difference between massacre and firing for self-defense.
Sir, again, bringing Bhagat Singh in this discussion was futile. Enemy of state becomes hero once the opposition gains power. It is more of “paradigm shift” than absolute truth.
Sir, I sypmathise with your “human right activist” clause. But, even the members of squad are also humans. They are guarding an extremely dangerous territory. Your “human rights” should be extended to them also. Otherwise, the “human rights” will get reduced to a selective bias and loses its value among common citizens like us.
Thank you for responding amidst your busy schedule; it is very much appreciated.
ನಾ. ದಿವಾಕರ್ ಅವರಿಗೆ– ತಮ್ಮ ಲೇಖನವನ್ನು ತಾವು ಸಮರ್ಥಿಸಿಕೊಳ್ಳುವುದು ತಪ್ಪೇನಿಲ್ಲ. ಆದರೆ ಇದುವರೆಗೆ ತಮ್ಮ ಲೇಖನದ ಬಗ್ಗೆ ಬಂದ ಪ್ರತಿಕ್ರಿಯೆಗಳಿಗೆ ಸ್ವಲ್ಪ ಮಟ್ಟಿಗಾದರೂ ತಾವು ಉತ್ತರಿಸಬೇಕಾಗಿತ್ತು. ಭಗತ್ ಸಿಂಗ್ ನ ಹಾಗೆ ಮಹಾತ್ಮ ಗಾಂಧೀ,ಸುಭಾಷ್ ಚಂದ್ರ ಬೋಸ್ ಮತ್ತು ಭಾರತದ ಸ್ವಾತಂತ್ರ್ಯಕ್ಕಾಗಿ ಒಂದಲ್ಲ ಒಂದು ರೀತಿಯಲ್ಲಿ ಹೋರಾಡಿದವರೂ ಸಹ ಬ್ರಿಟೀಷರ ಪಾಲಿಗೆ ತಲೆನೋವಾಗಿದ್ದವರೇ ಅಲ್ಲವೇ? ಆದರೆ ಇಂದು ಒಬ್ಬನ ನಡೆ-ನುಡಿ ಅನುಮಾನಾಸ್ಪದವಾಗಿದ್ದರೆ “ಮಾನವ ಹಕ್ಕುಗಳ” ರಕ್ಷಣೆಯ ಅಡಿಯಲ್ಲಿ ಆತ ರಾಜಾ ರೋಷವಾಗಿ ಸಮಾಜದಲ್ಲಿ ಓಡಾಡಿಕೊಂಡಿರಬೇಕು; ಸರ್ಕಾರ,ಸೈನ್ಯ ಮತ್ತು ಪೊಲೀಸರು ಅವನನ್ನು ಅತಿಥಿಯಂತೆ treat ಮಾಡಬೇಕೆಂದು ಒತ್ತಾಯಿಸುವುದು ಸರಿಯಲ್ಲ. ಅವರುಗಳ ಹೆಸರು ಕಬೀರ್,ಜೋಸೆಫ್,ರಾಮ ಏನಾದರೂ ಆಗಿರಲಿ ಭಗತ್ ಸಿಂಗ್,ಗಾಂಧೀ,ಬೋಸ್ ಮತ್ತಿತರ ಸ್ವಾತಂತ್ರ್ಯ ಹೋರಾಟಗಾರರ ಜತೆ compare ಮಾಡುವುದು ಬುದ್ಧಿಯ ಚಮತ್ಕಾರವಾಗಬಹುದೇ ಹೊರತು ನ್ಯಾಯ-ನೀತಿ-ಧರ್ಮವಾಗಲಾರದು.