ಕೊಟ್ಟ ಹೆಮ್ಮೆಯಲೊಂದು ಕೊಡಲಾಗದ ಖೇದದಲೊಂದು..
ಲಡಾಯಿ ಪ್ರಕಾಶನ
1 ಹಸಿ ನೆಲ ಇತ್ತಾದರೂ ಆ ಹೂ ನಡುಗಾಲದಲ್ಲೇ ಬಾಡಿ ಹೋಯಿತು ಬೀಸಿಬಂದ ಗಾಳಿ ಅಕಾರಣ ಹುಟ್ಟಿದ ನಿನ್ನ ಮೌನದ ಬಿಸಿ ತಾಗಿಸಿತು 2 ಮಗಳೆ ಅಮ್ಮನ ಸಮಾಧಿ ಅಷ್ಟು ದೂರವಿದೆ ನಡಿ ಸತ್ತುಬಿದ್ದ ಈ ಹಂದಿಯನು ರಸ್ತೆಯಾಚೆ ಮಣ್ಣು ಮಾಡೋಣ 3 ಈ ಹೆಜ್ಜೆಗೆ ಮರಭೂಮಿ ಮುಂದಿನ ಹೆಜ್ಜೆಗೆ ಕಡಲಾದ ನಿನ್ನ ತುಂಬಿಕೊಂಡೆ ತುಂಬಿಕೊಂಡೂ ಖಾಲಿಯಾಗುವರಿವು ಹುಟ್ಟಿದಾಗ ನಿನ್ನ ಪ್ರೇಮಿಸಿದೆನೆನಿಸಿತು 4 ಈ ಪ್ರೇಮ ನವೋದಯ ನವ್ಯ ಬಂಡಾಯ ಕಾವ್ಯದಲಿ ಎದ್ದುಬಂದಿತು ಈಗದು ತನ್ನ ತಾನರಿವ ಕಾವ್ಯದಕ್ಷರದಲಿ ತಾವು ಕಂಡುಕೊಂಡಿತು 5 ನೀ ಬರೆದ ಓಲೆ ಓದಿದೆ ಈಗ ಲೋಕ ಮದಿರೆ ಕುಡಿದಿರುವೆನೆಂದು ಆರೋಪಿಸುತ್ತದೆ 6 ಅಗಲಿಕೆಯ ಕೊಳದಿಂದೆದ್ದ ಮೌನಗಳೆರಡು ಸಂಜೆ ಹೊತ್ತು ಮುಖಾಮುಖಿಯಾದವು ಕೊಟ್ಟ ಹೆಮ್ಮೆಯಲೊಂದು ಕೊಡಲಾಗದ ಖೇದದಲೊಂದು ಕರಗಿ ಸಂಜೆ ಬೆಳೆಯಿತು 7 ಲೋಕ ಕೇಳಿತು ಊಟ ರಕ್ತ ಗಾಳಿ ಏನೂ ಅಲ್ಲದ ಪ್ರೇಮವನ್ನೇಕೆ ಸದಾ ಅರಸುತ್ತೀ? ಹೇಳುವುದೇನು ಪ್ರೇಮದ ಹೊರತಾದ ಹಾದಿಗಳೆಲ್ಲವೂ ದ್ವೇಷದ ಕಡೆ ತಿರುಗುತ್ತಿವೆ 8 ಮಾವಿನಹಣ್ಣು ಚೀಪಿ ಬೇಕಾಬಿಟ್ಟಿ ಗೊರಟೆ ಎಸೆದರೇನು ಮರಳಿ ಬಂದಾಗ ಗೊರಟೆ ಚಿಗರೊಡೆದ ಹೆಮ್ಮರದ ಹಣ್ಣಿಗೆ ಕೈ ಚಾಚುವನು.. 9 ನೀನು ಆ ಚರಿತ್ರೆ ದೇಶಭಕ್ತಿ ಧರ್ಮದ ಕನ್ನಡಿಗಳಲಿ ಇಣುಕುತ್ತಲೇ ಹೋದೆ ನಿನ್ನ ಪ್ರೀತಿಸುವುದೆಂದರೆ ಉಳಿದವರ ದ್ವೇಷಿಸುವ ಬಿಂಬವೇ ಎದ್ದುಕಂಡಿತು]]>ನಿಮಗೆ ಇವೂ ಇಷ್ಟವಾಗಬಹುದು…






ಲೋಕ ಕೇಳಿತು ಊಟ ರಕ್ತ ಗಾಳಿ ಏನೂ ಅಲ್ಲದ ಪ್ರೇಮವನ್ನೇಕೆ ಸದಾ ಅರಸುತ್ತೀ?
ಹೇಳುವುದೇನು ಪ್ರೇಮದ ಹೊರತಾದ ಹಾದಿಗಳೆಲ್ಲವೂ ದ್ವೇಷದ ಕಡೆ ತಿರುಗುತ್ತಿವೆ
…..manamuttuva saalugalu….
ಆರನೇ ಮತ್ತು ಏಳನೇ ದ್ವಿಪದಿಗಳು ತುಂಬಾ ಸೊಗಸಾಗಿವೆ…