ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೊಂಚ ಮುಖ ತಿರುಗಿಸು ಬಾಲೆ..

‘ಅವಧಿ ಕ್ಲಿಕ್’ ನಲ್ಲಿ ಪ್ರಕಟವಾದ ಮೇಲಿನ ಫೋಟೋ ನೋಡಿ ಬರೆದ ಕವಿತೆ 

geetha hegde kalmane

ಗೀತಾ ಹೆಗ್ಡೆ ಕಲ್ಮನೆ 

ಹೇಳು
ಮುಖ ಯಾಕೆ
ಮರೆಯಾಗಿಟ್ಟೆ?

ಕಪ್ಪು
ಗುಂಗುರು ಹೆರಳ ಬಾಲೆ
ಅಡಕತ್ತರಿಯಲ್ಲಿ ಸಿಕ್ಕ
ಅಡಿಕೆ ತುಂಡಾದಂತೆ
ನಿನ್ನ ಕೂದಲೇಕೆ
ಮೊಂಡು ಮಾಡಿಕೊಂಡೆ?

Hair2ನಿನಗಿಷ್ಟವೊ
ಅಥವಾ
ಕಟ್ಟಿಕೊಂಡವನ
ಒತ್ತಾಯಕೆ ನೀ
ಮಣಿದೆಯೊ?

ಮರೆಯಾದ ಮುಖ
ಕಣ್ಣು ಮಂಜಾಗಿರುವುದೂ
ಕಾಣುವುದಿಲ್ಲ
ಕೊಂಚ ಮುಖ
ತಿರುಗಿಸು ಬಾಲೆ
ನಾ ನಿನ್ನಮ್ಮನಾಗಿ
ಮುಂಗುರುಳ ಸವರಿ
“ಹಳ್ಳಿ ಹುಡುಗಿ
ದಿಲ್ಲಿ ಸೇರಿ”
ಹೈರಾಣಾದ ಕೊರಗ
ಮಡಿಲೊಳಗಡಗಿಸಿಕೊಂಡು
ನಿನಗೊಂದು ಸವಿ
ಮುತ್ತನಿತ್ತು ಸಂತೈಸುವೆ
ಬಾ ಮಗಳೆ!

ಚಿಂತಿಸದಿರು
ಇದು ಕಲಿಗಾಲ
ಕಾಲಕ್ಕೆ ತಕ್ಕಂತೆ
ನೀನೂ ಬದಲಾಗು
ಹೆಣ್ಣೆಂದು ದೂರುವ
ತುಚ್ಚ ನುಡಿಯಾಡುವ
ಮನಸುಗಳ ನೀ ಮೆಟ್ಟಿ ನಿಲ್ಲು
ಗಂಡಂತೆ ಪುಟಿದೇಳು
“ಹೆಣ್ಣೆ ಹುಟ್ಟಲಿ ನನಗೆ
ಎಂದೂ”
ಹೆರುವವರ ಕೂಗು
ಶಾಶ್ವತವಾಗಲಿ!

‍ಲೇಖಕರು admin

18 August, 2016

1 Comment

  1. Shama, Nandibetta

    I beg to differ from you.

    ಅವಳ್ಯಾಕೆ ಗಂಡಂತೆ ಆಗಬೇಕು?
    ಎಲ್ಲಿಂದೆಲ್ಲಿಗೆ ಕಿತ್ತು ಬಿಸುಟರೂ ಚಿಗಿಯುವುದು, ಪುಟಿದರಳಿ ಮತ್ತೆ ಹೊಸ ಜೀವ ನೀಡುವುದು ಹೆಣ್ಣಲ್ಲವೇ ?

    ಹುಟ್ಟಿ ಬೆಳೆದ ಮನೆ, ಊರು ಕೇರಿ ತೊರೆದು ಕಂಡು ಕೇಳರಿಯದ ಮನೆಗೆ ಬಂದು ಮೂರೇ ದಿನಕ್ಕೆ ಮತ್ತೆ ಮೊದಲಿನಂತೆ ನಸುನಗುತ ಬಾಳುವುದು ಹೆಣ್ಣಿಗಷ್ಟೇ ಸಾಧ್ಯ ಆಗುವ ಚೈತನ್ಯ ಶಕ್ತಿಯಲ್ಲವೇ ?

Trackbacks/Pingbacks

  1. ಕೊಂಚ ಮುಖ ತಿರುಗಿಸು ಬಾಲೆ.. | – Sandhyadeepa…. - […] http://avadhimag.online/2016/08/18/%e0%b2%95%e0%b3%8a%e0%b2%82%e0%b2%9a-%e0%b2%ae%e0%b3%81%e0%b2%96-%e0… […]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading