ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಳಿದವರಿಗೆಲ್ಲಾ ಒಂದೇ ಅನಂತಮೂರ್ತಿ, ತಿಳಿದವರಿಗಿಬ್ಬರು ಮೂರ್ತಿ..

ಮೋಜಿನ ಪದಗಳು

ಕೆ ವಿ ತಿರುಮಲೇಶ್

ನುಂಗಣ್ಣರು

ಷರೀಫ ಸಾಬರ ಮನೆಗೆ ಹೋದರೆ

ಬಾಗಿಲು ಉಂಟು ಮನೆಯೇ ಇಲ್ಲ

ಏನಪ ಎಂದರೆ ಮನೆಯನು ಬಾಗಿಲು

ನುಂಗಿತು ಎಂತ

 

ತಲೆದಿಂಬುಂಟು ಚಾಪೆಯೆ ಇಲ್ಲ

ಏನಪ ಎಂದರೆ ದಿಂಬು ಚಾಪೆಯನು

ನುಂಗಿತು ಎಂತ

 

ರಾಟೆಯು ಉಂಟು ಬಾವಿಯೆ ಇಲ್ಲ

ಏನಪ ಎಂದರೆ ಬಾವಿನ ರಾಟೆಯು

ನುಂಗಿತು ಎಂತ

 

ಏಣಿಯು ಉಂಟು ಮರವೇ ಇಲ್ಲ

ಏನಪ ಎಂದರೆ ಏಣಿಯು ಮರವನು

ನುಂಗಿತು ಎಂತ

 

ಬೆಟ್ಟವು ಉಂಟು ಕಣಿವೆಯೆ ಇಲ್ಲ

ಏನಪ ಎಂದರೆ ಬೆಟ್ಟವು ಕಣಿವೆಯ

ನುಂಗಿತು ಎಂತ

 

ಆಕಾಶವುಂಟು ಭೂಮಿಯೆ ಇಲ್ಲ

ಏನಪ ಎಂದರೆ ಆಕಾಶ ಭೂಮಿಯ

ನುಂಗಿತು ಎಂತ

 

ಎಲ್ಲಿ ಷರೀಫರು ಎಂದು ನೋಡಿದರೆ

ಷರೀಫರೆ ಇಲ್ಲ-ಗೋವಿಂದ ಭಟ್ಟರು

ನುಂಗಿದರು ಎಂತ!***

 

 

 

ಅನಂತಮೂರ್ತಿ

 

ಉಳಿದವರಿಗೆಲ್ಲಾ ಒಂದೇ ಅನಂತಮೂರ್ತಿ

ತಿಳಿದವರಿಗಿಬ್ಬರು ಮೂರ್ತಿ

ಒಬ್ಬರು ಪೂಜಾಮೂರ್ತಿ

ಆತ್ಮೀಯ, ಪ್ರೀತಿಪಾತ್ರ, ಫುಲ್ ಆಫ್ ಮರ್ಸಿ

ಇನ್ನೊಬ್ಬರು ಉತ್ಸವ ಮೂರ್ತಿ

ಸದ್ದುಗದ್ದಲ, ಗಲಾಟೆ, ಫುಲ್ ಆಫ್ ಕಾಂಟ್ರೋವರ್ಸಿ!

flower

 

 

ಸಾಹಿತ್ಯ ಸಂಭ್ರಮ

 

ಮುಗಿಯಿತು ಸಂಭ್ರಮ ಮುಳುಗಿತು ಸಾಹಿತ್ಯ

ನೀವಿನ್ನು ಹೊರಡ್ಡಿ

ಎಂದರು ಗಿರಡ್ಡಿ!


 

 

ಅಡಿಗರು

ಅಡಿಗೆಗೆಂದು ಗಡಿಗೆ ತಂದು

ಒಡೆದು ಹಾಕಿದ್ರು

ಅಲುಮಿನಿಯಮಾದ್ರು ಪರವಾಯಿಲ್ಲ

ನಮ್ದಾದ್ರೆ ಸಾಕೆಂದ್ರು!

 

ಚಂಡೆ ನಮ್ದು ಮದ್ದಳೆ ನಮ್ದೊ?

ಎರಡೂ ನಮ್ದೆ ಹೊಡೀರಿ ಎಂದ್ರು!

flower

 

 

 

ಪಂಪ ಪ್ರಶಸ್ತಿ

 

ಪಂಪ ಪ್ರಶಸ್ತಿಗೆ ಪಂಪನ ಕರೆದು

ಗೇಟಿನಲ್ಲೇ ತಡೆದ್ರು

ನಾ ಪಂಪ ಕಣ್ರಿ ಎಂದದ್ದಕ್ಕೆ

ಗೊತ್ತು ಕಣ್ರೀ ಆದ್ರೆ ಫೋಟೋ ಐಡಿ ಬೇಕ್ರಿ ಎಂದ್ರು

ಫೋಟೋ ಗೀಟೋ ನಂಗೊತ್ತಿಲ್ಲ

ಏಡಿ ಹಿಡಕೊಂಡ್ ಬರ್ತೀನಂತ

ಹೋದ ಪಂಪ ಬಂದ ಪಂಪ

ಏಡಿ ಹಿಡಕ್ಕೊಂಡು!

flower

 

 

 

ದೇವ್ರು

ರಾಮಚಂದ್ರ ದೇವ

ದೇವ್ರಾಗ್ಲಿಲ್ಲ

ಮಹಾದೇವ ದೇವ್ರು ಹೆಂಗಾದ್ರು ದೇವ್ರು?

 

ಸಿಂಪ್ಲ್ ಪ್ರಿನ್ಸಿಪ್ಲ್ ಎಂದರು ದೇವ್ರು

ಪ್ರಯೋಗ ಯಾವಾಗ್ಲು ರಿಪೀಟಾಗ್ಬೇಕು:

ದೇವನೂರ ಮಹಾದೇವ ಹಾಂಗಾದ್ರು ದೇವ್ರು!

 

 

 

ಬೊಳುವಾರು ಮಹಮದ್ ಕುಂಞಿ

 

ಚಂದದ ಹೆಸರು ಬೊಳುವಾರು ಮಹಮದ್ ಕುಂಞಿ

ಹೇಳಕೆ ಬರದೆ ಸೀಮೆಯವರಂತಾರೆ `ಕುಂಯಿ’.

ಕುಂಯಿ ಅಲ್ಲ, ಕುಂಞಿ ಅಂತ

ಎಷ್ಟೇಳಿದರೂ ಮತ್ತದೇ ಕುಂಯಿ.

ಅದಕಂದರು ಕುಂಞಿ: ಅಯ್ಯೋ ಪಾಪ! ಬಿಟ್ಬಿಡಿ ಅವರ್ನ

ಹೇಳಕಾಗ್ದೆ ಕೂಗಾಡ್ತಾರೆ ಕುಂಯೀ ಕುಂಯೀ!

flower

 

 

 

ಯೂ ಆರ್  ಅನಂತಮೂರ್ತಿ

 

ಕೊನೆ ಕೊನೆಗೆ ಅನಂತಮೂರ್ತಿ ಒಂದು ಬಾಕ್ಸರ್ ಡಮ್ಮಿ ತರ ಆದ್ರು

ಹೋದೋರು ಬಂದೋರು ಕೇಳೋರು : ಯೂ ಆರ್ ಅನಂತಮೂರ್ತಿ?

ಯಸ್ ಎಂದ ತಕ್ಷಣ ಕೊಡೋರು ಪಂಚ್

ಆದರೆ ಅವರ ಸ್ಥಿತಿಸ್ಥಾಪಕ ಗುಣಾನ ಮೆಚ್ಚಲೆ ಬೇಕು

ಒಂದು ಕ್ಷಣದಲ್ಲೇ ಮೊದಲಿನಂತಾಗುತಿದ್ರು!

flower

 

 

 

ವಿ ಆರ್ ಪ್ರತಿಭಾ

 

ವಿ ಆರ್ ಪ್ರತಿಭಾ ಅಂತ ಎಷ್ಟೇಳಿದರೂ

ಜನ ಕೇರ್ ಮಾಡೋದೇ ಇಲ್ಲ

ಯಾತಕ್ಹೇಳ್ತೀನಿ: ಆತ್ಮ ಗೌರವದ ಕಾಲ

ಇದಲ್ಲ!

 

‍ಲೇಖಕರು G

18 December, 2015

12 Comments

  1. murali

    Sir superb poems thank you you made my day….
    Murali

  2. ಗಣನಾಥ. ಮೈಸೂರು

    ಎಷ್ಟು ಚೆನ್ನಾಗಿವೆ! ಎಂಥ ತಾಜಾ ಮೋಜಿನ ಪದಗಳು! ಸರ್ ಇನ್ನೂ ಬರೀರಿ.

  3. ಕರ್ಕಿ ಕೃಷ್ಣಮೂರ್ತಿ

    ಹ..ಹ್ಹಾ…ತುಂಬಾ ಚೆನ್ನಾಗಿದೆ ಸರ್…!ಮತ್ತೆ ಮತ್ತೆ ಓದಿಕೊಂಡು ಖುಶಿ ಪಡಬಹುದು.( ನೀವು ಹೈದರಾಬಾದಿನಲ್ಲಿ ಇರುವುದಕ್ಕೆ ಬಚಾವು !)

  4. ಡಾ.ಶಿವಾನಂದ ಕುಬಸದ

    ತುಂಬ ಚೆನ್ನಾಗಿವೆ..
    ಮಜಾ ಬಂತು ಸರ್..:)

  5. ಇಂದಿರೇಶ ಜೋಶಿ

    ನಾಮ ಪದಗಳ ಜೋಡಣೆ ಮೋಜಿನದಾಗಿದೆ. ನಿಜಕ್ಕೂ ಮೋಜಿನದಾಗಿದೆ.

  6. Jayashree Deshpande

    ಅಪರೂಪದ ತಿಳಿಹಾಸ್ಯದ ಕಿರುಗವನಗಳು ….ತು೦ಬಾ ಚೆನ್ನಾಗಿವೆ!

  7. K.HEMCHANDRA

    ENTHA MOJINA KAVANAGALU. PUN-DITTU GE SALAM

  8. Anil Talikoti


    ಕೆ.ವಿ.ಟಿ.
    ಕಲಿಸಿದಲ್ಲವಾದರೂ ಬರೆದಿದ್ದೆಲ್ಲಾ ಕನ್ನಡದ ವಿಟ್ಟೆ
    ಮೂಸದ ಪುಷ್ಪಗಳ್ಯಾವವಿಲ್ಲ ಈ ಚಿಟ್ಟೆ
    ಓದಿ ಮೋಜು ಪಟ್ಟೆ, ಓದದಿರೆ ನೀ ಕೆಟ್ಟೆ
    ಇವು ಹೊಟ್ಟೆ ಮೇಲೆ ತೊಟ್ಟ ಪಟ್ಟೆ ಬಟ್ಟೆ
    ಬುರುಡೆಗಿವು ಹೊಟ್ಟೇ, ಅಲ್ಲವಯ್ಯ ಬರೀ ಲೊಳಲೊಟ್ಟೆ.
    ~ಅನಿಲ ತಾಳಿಕೋಟಿ

  9. ಅಕ್ಕಿಮಂಗಲ ಮಂಜುನಾಥ

    ವಾಹ್ ! ವಾಹ್ ! ಚಂದದ ಪದಗಳು.

  10. vidyashankar

    Super relief from serious poetry! 🙂

  11. samyuktha

    😀

  12. Arathi ghatikar

    Bhala pun ide fun ide padyadalli

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading