ಪ್ರಿಂಟ್ ಹಾಕದೆ ಉಳಿದ ಫೋಟೋಗಳು…
ನಾಗರಾಜ್ ಹೆತ್ತೂರು
ಅಂತರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ಅವರು ತೆಗೆದಿರುವ ರಾಷ್ಟ್ರಕವಿ ಕುವೆಂಪು ಅವರ ಅಪರೂಪದ ಫೋಟೋ ಇದು. ಬ್ಲಾಕ್ ಅಂಡ್ ವೈಟ್ ಕಾಲದಲ್ಲಿ ತೆಗೆದಿರುವ ಫೋಟೋ. ಕೆ.ಟಿ ಅವರೊಂದಿಗೆ ಕುಳಿತು ಅವರ ಕಂಪ್ಯೂಟರ್ ನಲ್ಲಿ ಬೇರೆ ಬೇರೆ ಫೋಟೋ ಹುಡುಕುತಿದ್ದಾಗ ಸಿಕ್ಕಿತು. ಒಮ್ಮೆ ಕೆ.ಟಿ ಗೆಳೆಯ ಪೂರ್ಣಚಂದ್ರ ತೇಜಸ್ವಿ ಜತೆ ಮನೆಗೆ ಹೋದಾಗ ` ಅಣ್ಣನ ಫೋಟೋ ತೆಗೆಯಬೇಕು ನೀನು’ ಎಂದು ತೇಜಸ್ವಿ ಯವರು ಹೇಳಿ ತೆಗೆಸಿದ ಫೋಟೋಗಳಿವು.

ಇದು ಒಂದು. ಕೆ.ಟಿ ಪೋಟೋ ತೆಗೆಯುತ್ತಿದ್ದರೆ ಕುವೆಂಪು ಮಗುವಿನಂತೆ ಕುಳಿತುಕೊಂಡಿದ್ದರಂತೆ. ಹೇಗೆ ಕುಳಿತುಕೊಳ್ಳಬೇಕು ಶಿವಪ್ರಸಾದ್ ಎಂದು ಕೇಳುತ್ತಿದ್ದರಂತೆ. ಅಂತಹ ಮಹಾನ್ ವ್ಯಕ್ತಿ. ಇದೊಂದು ಜೀವನದ ಮರೆಯಲಾಗದ ಕ್ಷಣ ಎನ್ನುತ್ತಾರೆ ಕೆ.ಟಿ. ಎಷ್ಟು ಜನರಿಗೆ ಈ ಅದೃಷ್ಟ ಸಿಕ್ಕುತ್ತದೆ ಅಲ್ಲವೇ…? ಅಂದ ಹಾಗೆ ಈ ಫೋಟೋಗಳು ಇನ್ನೂ ಪ್ರಿಂಟ್ ಆಗದೆ ಉಳಿದಿದ್ದು ಇವೆಲ್ಲವನ್ನೂ ದೊಡ್ಡದಾಗಿ ಪ್ರಿಂಟ್ ಹಾಕಿಸಿ ಪ್ರದರ್ಶನಕ್ಕೆ ಇಡುವ ಉದ್ದೇಶ ಕೆ.ಟಿ ಅವರದ್ದು. ಅವರ ಅನುಮತಿ ಇಲ್ಲದೇ ದಯವಿಟ್ಟು ಬೇರೆಯವರು ಬಳಸುವಂತಿಲ್ಲ. ಇದು ವಿನಯಪೂರ್ವಕ ಮನವಿ.










interesting! belaku saalade kappu kappu aagide. Flash upayogisabekittu.
ತುಂಬಾ ಅಪರೂಪದ ಚಿತ್ರಗಳು.ಧನ್ಯವಾದಗಳು.
Hettur, when were these pictures taken? And what camera and film did KT use?
Portraits could have made better use of light and darkness in my opinion. Touch too dark for my taste. But nice expressions.
ಅವರು ಅಷ್ಟು ಕಷ್ಟಪಟ್ಟು ಬೆಳಕು ನೆರಳಿನ ವಿನ್ಯಾಸ ಸೃಷ್ಟಿಸಿದ್ದಾರೆ. ನೀವು ಫ್ಲಾಷ್ ಉಪಯೋಗಿಸಬೇಕಾಗಿತ್ತು ಅಂತಿದ್ದೀರಲ್ಲ?!
🙂 ನೆರಳು ಜಾಸ್ತಿ ಆಯಿತು ಅಂತ ಅನ್ನಿಸುತ್ತಿಲ್ವಾ ನಿಮಗೆ?
Chenda ide …
ಕೆ.ಟಿ.ಶಿವಪ್ರಸಾದ್ ಸಾರ್ ಈ ಪೋಟೋ ತೆಗೆಯುವಾಗ ಕುವೆಂಪು ಹೇಗೆ ಕುಳಿತು ಕೋಳ್ಳಲಿ ಕಲಾವಿದ ಶಿವ ಅಂದಾಗ ಅವರಿಗೆ ಮುಜುಗರ ವಾಗುತ್ತಿತ್ತಂತೆ ಇಷ್ಟು ದೋಡ್ಡ ಸಾಹಿತಿ ಪೋಟೋ ಹೇಗೆ ತೆಗೆಯುವುದಪ್ದ್ಪ ಆಂತ. ಕೆ.ಟಿ. ಚನ್ನಾಗಿ ಪೋಟೋ ತೆಗೆದಿದ್ದಾರೆ ಅಲ್ಲವಾ .