ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆ.ಎಚ್ ಮುಸ್ತಾಫ ಅವರಿಗೆ ಕಥಾ ಬಹುಮಾನ

 ‘ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಸ್ಪರ್ಧೆಯಲ್ಲಿ ಈ ಬಾರಿ ಮಂಗಳೂರ ವಿ.ವಿ ಸಂಶೋಧನಾ ವಿದ್ಯಾರ್ಥಿ ಮುಸ್ತಾಫ ಕೆ.ಎಚ್ ಕತೆ ಆಯ್ಕೆಯಾಗಿದೆ.

ಲೇಖಕ ಡಾ .ಪ್ರಹ್ಲಾದ ಅಗಸನಕಟ್ಟೆಯವರ ಸ್ಮರಣಾರ್ಥ, ಹುಬ್ಬಳ್ಳಿಯ ಅಕ್ಷರ ಸಾಹಿತ್ಯ ವೇದಿಕೆ ಈ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು.

ಜೂನ್ ೯ ರವಿವಾರ ಬೆಳಿಗ್ಗೆ ೧೦ ಗಂಟೆಗೆ ಹುಬ್ಬಳ್ಳಿಯ ಕಿಮ್ಸ್ ಸಭಾ ಭವನದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ವೇದಿಕೆಯ ಪರವಾಗಿ ಸುನಂದಾ ಪ್ರಕಾಶ್ ಕಡಮೆ ಅವರು ತಿಳಿಸಿದ್ದಾರೆ.

ಮುಸ್ತಾಫ ಅವರು ಮಂಗಳೂರ ವಿ.ವಿ ಯಲ್ಲಿ ಕನ್ನಡ ಎಂ. ಎ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಪ್ರಸ್ತುತ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ‘ಕನ್ನಡ ಸಾಹಿತ್ಯ ಸಂಸ್ಕೃತಿ ವಿಮರ್ಶೆ: ಕಿ ರಂ ನಾಗರಾಜ ಮಾದರಿ ‘ ವಿಷಯದ ಕುರಿತು ಸಂಶೋಧನಾ ವಿದ್ಯಾರ್ಥಿ.

‍ಲೇಖಕರು avadhi

2 June, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading