ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆಲವು ಹನಿಗಳು…

ಎಚ್ ಕೆ ಶರತ್

ಹೊರಳು ಹಾದಿಗಳಿಲ್ಲದ ಸಾದಾ ರಸ್ತೆ
ಕಣ್ಣೆದುರು ಇರುವುದಷ್ಟೇ ಜಗತ್ತೆಂಬ

ಸುಳ್ಳನು ಹೊದ್ದು ಮಲಗಿದೆ 

ಮೂಲೆಯಲ್ಲೆಲ್ಲೋ
ಮೌನವಾಗಿರುವ ಸತ್ಯ
ಮುಂದೊಂದು ದಿನ
ಇದ್ದಕ್ಕಿದ್ದಂತೆ
ಮಾತಿಗಿಳಿಯಬಹುದು
ಈ ಕ್ಷಣದ ದಿರಿಸು
ಕಳಚಿ ಕೂತು


ಮಣ್ಣಿನ ಮೇಲೆ ಮಲಗಿದ ದೇಹ
ಲೋಕದೊಂದಿಗೆ ಮಾತು ಬಿಟ್ಟಿದೆ
ಕಣ್ಣಿನ ಮೇಲೆ ಕೂತ ಕನಸು
ಕಾಲದೊಂದಿಗೆ ಮಾತಿಗೆ ಕೂತಿದೆ


ಅಲ್ಲೆಲ್ಲೋ ಹುಟ್ಟಿದ ಮಾತು

ಅಲ್ಲೇ ಉಳಿದಿದ್ದರೆ…
ಮೋಹ ಕದ ತೆರೆಯುತ್ತಿರಲಿಲ್ಲ
ಮಾಗದ ಗಾಯ
ಮೈಗಂಟುತ್ತಿರಲಿಲ್ಲ
 
 
 

‍ಲೇಖಕರು G

25 October, 2013

2 Comments

  1. Gururaj katriguppe

    ಮನಸ್ಸು ಮುಟ್ಟಿದ ಹನಿಗಳು. ಧನ್ಯವಾದಗಳು.

  2. mmshaik

    beautiful..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading