ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೃಷ್ಣಮೂರ್ತಿ ಬಿಳಿಗೆರೆ ಜೊತೆ ʼಫಟಾ ಫಟ್‌ ʼ

ಸಾಹಿತಿ ಹಾಗೂ ಪ್ರಾಚಾರ್ಯ ಕೃಷ್ಣಮೂರ್ತಿ ಬಿಳಿಗೆರೆ ಅವರು ಕೃಷಿ ಬಗ್ಗೆ ಅಪಾರ ಆಸಕ್ತಿ ಹಾಗೂ ಜ್ಞಾನವನ್ನು ಹೊಂದಿದವರು. ತಂದೆ -ತಾಯಿ ಇಬ್ಬರೂ ಹಾಡುಗಾರರಾಗಿದ್ದರಿಂದ ಹಾಡುವ ಕಲೆ ಸಹಜವಾಗಿಯೇ ಕೃಷ್ಣಮೂರ್ತಿಯವರಿಗೆ ದಕ್ಕಿದೆ.

ಹಾಡಿನ ಜೊತೆಗೆ ಸಾಹಿತ್ಯದ ಕೃಷಿಯನ್ನೂ ಮಾಡುವ ಇವರು ಹಲವಾರು ಕೃಷಿಯ ಕುರಿತ ಹಾಡನ್ನು ರಚಿಸಿದ್ದಾರೆ. ವಿಶೇಷವಾಗಿ ಮಕ್ಕಳ ಹಾಡು ರಾಗಿ ಬಿತ್ತು, ರಾಗಾ ಬಿತ್ತು,  ಜೋಳ ಬಿತ್ತು ಎನ್ನುವ ಹಾಡು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ.

ಇವರು ಈ ಕೃಷಿ ಮಕ್ಕಳ ಹಾಡಿನ ಕುರಿತಾಗಿ ʼಅವಧಿʼಯು ನಡೆಸಿದ ಫಟಾ ಫಟ್‌ ಸಂದರ್ಶನ ಇಲ್ಲಿದೆ

ನಿಮ್ಮಲ್ಲಿ ಹಾಡನ್ನು ಬಿತ್ತಿದವರು ಯಾರು ?

> ನಮ್ಮಪ್ಪ ನಮ್ಮವ್ವ. ಯಾಕಂದ್ರ ಅವರೂ ಹಾಡುಗಾರರು.

ಬಿಳಿಗೆರೆ ಎಲ್ಲಿದೆ.?

> ತಿಪಟೂರು ತಾಲೂಕು, ತುಮಕೂರು ಜಿಲ್ಲೆ, ಕಿಬ್ಬನಹಳ್ಳಿ ಹೋಬ್ಳಿ ಹತ್ರ.

ರಾಗಿ ಬಿತ್ತು, ಜೋಳ ಬಿತ್ತು ಮತ್ತಿನೇನ್‌ ಬಿತ್ತು ?

> ಮನಸ್ಸಿಗೆ ಪ್ರೀತಿ ಬಿತ್ತು, ಸಮಾನತೆ ಬಿತ್ತು.

ಕೃಷಿ ಮೇಲೆ ಹಾಡಿದ್ದಾಯ್ತು ಮುಂದಿನ ಹಾಡು ಯಾವುದರ ಮೇಲೆ ?

> ಮತ್ತೆ ಕೃಷಿ ಮೇಲೆಯೇ. ಹಾಗೂ ‘ಚೂ ಮಂತ್ರಯ್ಯನ ಕಥೆಗಳು’ ಶುರುವಾಗ್ತಿದೆ.

ಹಾಡು ಹಾಡ್ತೀರಿ, ಕವಿತೆ ಬರಿತೀರಿ, ಇನ್ನೇನ್‌ ಮಾಡ್ತೀರಿ ?

> ಪಾಠ ಮಾಡ್ತೀನಿ.

‍ಲೇಖಕರು Avadhi

21 September, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading