ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೃಷಿ ಮಾಧ್ಯಮ ಕೇಂದ್ರ ವಿಚಾರ ಮಂಥನ

ಆತ್ಮದೀಪ ಆರೋಗ್ಯ ಮತ್ತು ಪರಿಸರ ಸಂಘಟನೆ ಹಾಗೂ

ಕೃಷಿ ಮಾಧ್ಯಮ ಕೇಂದ್ರ
ಇವರ ಆಶ್ರಯದಲ್ಲಿ

 
cam-logo1

 
 
 
`ರೈತರಿಂದಲೆ ಕೃಷಿ ಸಂಶೋಧನೆ’ ಕುರಿತ ವಿಚಾರ ಮಂಥನ
ದಿನಾಂಕ: ಶುಕ್ರವಾರ, ಏಪ್ರಿಲ್ 10, 2009
ಸ್ಥಳ: ಬಾಲಬಳಗ, ಮಹಿಷಿ ರಸ್ತೆ, ಮಾಳಮಡ್ಡಿ, ಧಾರವಾಡ
ಸಮಯ : ಸಂಜೆ 6ರಿಂದ 7.30
ವಿಷಯ ಮಂಡನೆ:
ಪಿ.ವಿ. ಸತೀಶ್
ನಿರ್ದೇಶಕರು
ಡೆಕ್ಕನ್ ಡೆವಲಪ್ಮೆಂಟ್ ಸೊಸೈಟಿ

ಪಸ್ತಾಪುರ, ಝಹೀರಾಬಾರ್, ಆಂಧ್ರ ಪ್ರದೇಶ
ದಯವಿಟ್ಟು ಬನ್ನಿ. ನಿಮ್ಮ ಸ್ನೇಹಿತರನ್ನೂ ಕರೆತನ್ನಿ.
ರೈತರೇ ನಡೆಸುವ ಕೃಷಿ ಸಂಶೋಧನೆಗಳಿಗೆ ಒತ್ತು ನೀಡುವ ಉದ್ದೇಶದಿಂದ `ಆದರ್ಸ’ (ADARSA : Alliance for Democratising Agricultural Research : South Asia) ಎಂಬ ವೇದಿಕೆ ರೂಪುಗೊಂಡಿದೆ. ಡೆಕ್ಕನ್ ಡೆವಲಪ್ಮೆಂಟ್ ಸೊಸೈಟಿ ಈ ವೇದಿಕೆಯ ನೇತೃತ್ವ ವಹಿಸಿದೆ. ಡಿಡಿಎಸ್ ಕಳೆದೆರಡು ದಶಕಗಳಿಂದ ಆಂಧ್ರ ಪ್ರದೇಶದ 75 ಮಳೆಯಾ ರಿತ ಹಳ್ಳಿಗಳಲ್ಲಿ ಹತ್ತಾರು ಬಗೆಯ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು ಅಲ್ಲಿನ ರೈತಾಪಿ ಮಂದಿಯ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದೆ. ಸಮುದಾಯಕ್ಕೆ ಆಹಾರ ಸಾರ್ವಭೌಮತ್ವ ಪ್ರಾಪ್ತವಾಗಬೇಕು ಎಂಬುದು ಈ ಸಂಸ್ಥೆಯ ಆಶಯ. ಅದು ಈಗಾಗಲೇ ಸಾಕಾರವಾಗಿದೆ. ಸಂಸ್ಥೆಯ ಮಾರ್ಗದರ್ಶನದಲ್ಲಿ ಮೇದಕ್ ಜಿಲ್ಲೆಯ ಅರೆ ಮಳೆಯಾಶ್ರಿತ ಪ್ರದೇಶದಲ್ಲಿ ಸುಮಾರು ಐದು ಸಾವಿರ ಎಕರೆಯಷ್ಟು ಪಾಳುಬಿಟ್ಟಿದ್ದ ಭೂಮಿಯಲ್ಲಿ 1996ರಿಂದ ಸ್ಥಳೀಯ ಮಹಿಳೆಯರು ಕಿರುಧಾನ್ಯಗಳನ್ನು ಬೆಳೆಯುತ್ತಿದ್ದಾರೆ. ಈ ಮೂಲಕ ಅವರು ಪ್ರತಿ ವರ್ಷ ಸುಮಾರು 20 ಲಕ್ಷ ಕೆ.ಜಿ.ಯಷ್ಟು ಹೆಚ್ಚುವರಿ ಧಾನ್ಯ ಉತ್ಪಾದಿಸುತ್ತಿದ್ದಾರೆ. ಈ ಉತ್ಪನ್ನದ ಒಂದು ಭಾಗವನ್ನು ಸಮುದಾಯ ಧಾನ್ಯ ಬ್ಯಾಂಕ್ ಗಾಗಿ ಬಳಸುತ್ತಾರೆ. ಈ ಬ್ಯಾಂಕ್ ಕಿರುಧಾನ್ಯಗಳನ್ನು ಬಳಸಿ ಒಂದು ಪರ್ಯಾಯ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ನಡೆಸುತ್ತಿದೆ. ಡಿಡಿಎಸ್ ಸಮುದಾಯ ಬಾನುಲಿ ಕೇಂದ್ರವನ್ನೂ ನಡೆಸುತ್ತಿದೆ. ಸಂಸ್ಥೆ ಪ್ರತಿ ವರ್ಷ ನಡೆಸುವ ದೇಸಿ ಬೀಜ ಜಾತ್ರೆ ತುಂಬ ವಿಶಿಷ್ಟವಾದುದು.
ಸಂಪರ್ಕ : ಡಾ ಸಂಜೀವ ಕುಲಕರ್ಣಿ – 9448143100
 
 

 

‍ಲೇಖಕರು avadhi

10 April, 2009

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading