ಸರ್ವಾಧಿಕಾರಿ ಹಿಟ್ಲರ್ ಯಹೂದಿಗಳ ನರಮೇಧದಲ್ಲಿ ತೊಡಗಿರುವಾಗ, ಸುತ್ತಲೂ ಹಿಂಸೆ ತಾಂಡವವಾಡುತ್ತಿರುವಾಗ ಆನ್ಯಾ ಎಂಬ ಹದಿಮೂರು ವರ್ಷದ ಹುಡುಗಿ ಸೈನಿಕರ ಕಣ್ಣಿಗೆ ಬೀಳದಂತೆ ತನ್ನ ಮನೆಯ ಮೂಲೆಯಲ್ಲಿ ಅಡಗಿಕೊಳ್ಳುತ್ತಾಳೆ. ಆ ಸಂದರ್ಭದಲ್ಲಿ ಆಕೆಯ ಕುಟುಂಬ ಅಪಾರವಾದ ದೈಹಿಕ ಮತ್ತು ಮಾನಸಿಕ ಯಾತನೆಗೆ ಗುರಿಯಾಗುತ್ತದೆ. ಹೊರಗೆ ವಿಮಾನಗಳ ಸದ್ದು ಕೇಳಿಸುತ್ತಿರುತ್ತದೆ. ಯಾವ ಸಮಯದಲ್ಲಿಯೂ ಹಿಟ್ಲರನ ಸೈನಿಕರು ಆಕೆಯನ್ನು ಮತ್ತು ಆಕೆಯ ಮನೆ ಮಂದಿಯನ್ನು ಪತ್ತೆ ಮಾಡಿ ಕಾನ್ಸಂಟ್ರೇಷನ್ ಕ್ಯಾಂಪಿಗೆ ಕಳುಹಿಸಬಹುದು ಎಂಬ ಹೆದರಿಕೆ ಕಾಡುತ್ತಿರುತ್ತದೆ. ಆ ಸಂದರ್ಭದ ನನ್ನೆಲ್ಲ ಒಳ ಬೇಗುದಿಯನ್ನು ಆನ್ಯಾ ತನ್ನ ಡೈರಿಯಲ್ಲಿ ದಾಖಲಿಸಲು ತೊಡಗುತ್ತಾಳೆ.

ಆನ್ಯಾಳ ಸಾವಿನ ನಂತರ ಪ್ರಕಟವಾದ -ಆನ್ಯಾ ಬರೆದ ಈ ಡೈರಿ ಆಕೆಯ ಕಾಲಾನಂತರವಷ್ಟೇ ಪ್ರಕಟವಾಗುತ್ತದೆ. ಅದರ ಮಿಲಿಯಾಂತರ ಪ್ರತಿಗಳು ಮಾರಾಟವಾಗುತ್ತವೆ. ಅಂತಹ ಕಥಾನಕವನ್ನು ಆಧರಿಸಿ ಬರೆದಿರುವ ನಾಟಕ ‘ಆನ್ಯಾಳ ಡೈರಿ’
ನಾಟಕ ತಂಡ ಮತ್ತು ಪ್ರಯೋಗದ ವಿವರಗಳು –
ಈ ನಾಟಕವನ್ನು ತುಮರಿಯ ಪ್ರಸಿದ್ಧ ನಾಟಕ ತಂಡವಾದ ‘ಕಿನ್ನರ ಮೇಳ’ ತಯಾರಿಸಿದೆ.
‘ಶಬ್ದಗುಣ’ ಮತ್ತು ‘ಕಾಮನಬಿಲ್ಲು’ ಆಶ್ರಯದಲ್ಲಿ ಈ ನಾಟಕವು ದಿನಾಂಕ 16.11.23 ರಂದು ಸಂಜೆ 7 ಗಂಟೆಗೆ ಕುಂದಾಪುರ ಬೋರ್ಡ್ ಹೈಸ್ಕೂಲಿನ ಕಲಾಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ನಿರ್ದೇಶಿಸಿರುವವರು ತರುಣ ರಂಗಕರ್ಮಿ ಉಮೇಶ್ ಸಾಲಿಯಾನ್.
‘ಶಬ್ದಗುಣ’ ಮತ್ತು ‘ಕಾಮನಬಿಲ್ಲು’ ಜೊತೆಯಾಗಿ ನಡೆಸುತ್ತಿರುವ ‘ಆನ್ಯಾಳ ಡೈರಿ’ ಪ್ರಯೋಗಕ್ಕೆ ಮುಕ್ತ ಪ್ರವೇಶವಿದೆ.
0 ಪ್ರತಿಕ್ರಿಯೆಗಳು