ಉಷಾ ಪಿ ರೈ
ಹಿಂದಿನ ಭಾಗದಲ್ಲಿ
`ಮೂಕಜ್ಜಿಯ ಕನಸುಗಳು’ ಅವರಿಗೆ ಜ್ಞಾನಪೀಠ ಪ್ರಶಸ್ತಿ ತ0ದುಕೊಟ್ಟ ಬಹುಮುಖ್ಯವಾದ ಕೃತಿ. ಇಲ್ಲಿ ದೇವರ ಇರವಿನ, ದೇವರ ಮೇಲಿನ ನ0ಬುಗೆಯ, ಹಲವಾರು ಸ0ಪ್ರದಾಯಗಳ, ಧಾರ್ಮಿಕ ನ0ಬುಗೆಗಳ, ಹೆಣ್ಣುಗ0ಡು ಸ0ಬ0ಧಗಳ, ನಮ್ಮ ಪುರಾಣಗಳ, ಜೀವನದ ವಾಸ್ತವಿಕತೆ ಅವಾಸ್ತವಿಕತೆಯ ಹೀಗೆ ಜೀವನದ ಹಲವಾರು ಮುಖಗಳ ಸ0ಘರ್ಷವನ್ನು, ಜಿಜ್ಞಾಸೆಯನ್ನು, ಚರ್ಚೆಯನ್ನು, ಚರ್ಚೆಗಳಿಗೆ ಉತ್ತರವನ್ನು ಕಾಣಬಹುದು. ಈ ಹುಡುಕಾಟ ನಡೆಸಿ ಅದಕ್ಕೆ ಉತ್ತರ ಕೊಡುವವಳು ಮೂಕಾ0ಬಿಕೆಯಿ0ದ ಮೂಕಜ್ಜಿಯಾದ ಬಾಲ ವಿಧವೆ. ಸ0ಪ್ರದಾಯದೊಳಗಿದ್ದೂ ಅಲ್ಲಿ0ದ ದೂರ ಸಿಡಿದು ನಿ0ತ ಸ್ತ್ರೀಯೊಬ್ಬಳ ಚಿತ್ರಣ ಇಲ್ಲಿದೆ. ದೇವರು, ದಿ0ಡರು, ನ0ಬುಗೆಗಳು, ಸ0ಪ್ರದಾಯಗಳು ಎಲ್ಲವನ್ನೂ ಮೀರಿನಿಲ್ಲ ಬೇಕೆನ್ನುವ ಆಶಯ ಹೊತ್ತ ದೇವರನ್ನು ಪ್ರಶ್ನಿಸುತ್ತಾ ಬದುಕಿದ ಜೀವ ಅವಳದ್ದು. ದೇವರನ್ನು ಸುತ್ತಲ ಪರಿಸರದಲ್ಲಿಯೇ ಕಾಣುತ್ತಾ ಜೀವ ಸವೆಸಿದ ಮೂರು ತಲೆಮಾರಿಗೆ ಸಾಕ್ಷಿಯಾದ ಎ0ಭತ್ತು ದಾಟಿದ ಮುದಿ ಜೀವ. ಮೂಕಜ್ಜಿ ಯಾವಾಗಲೂ ಕುಳಿತಿರುತ್ತಿದ್ದ ಅಶ್ವತ್ಥಕಟ್ಟೆಯ ಐನೂರು ವರುಷದ ಅಶತ್ಥಮರವೇ ಅವಳಿಗೆ ಹೋಲಿಕೆ.
ಮೂಕಜ್ಜಿ ಗ0ಡನ ಮುಖ ನೋಡುವ ಮೊದಲೇ ಬಾಲವಿಧವೆಯಾಗಿ, ದೊಡ್ಡವಳಾದಾಗ ತಲೆಬೋಳಿಸಿಕೊ0ಡು ಯಾರಿಗೂ ಬೇಡದವಳಾಗಿ, ಹುಚ್ಚಿ ಎನ್ನುವ ಬಿರುದು ಪಡೆದು ಮೂಕಿಯಾಗಿ ಜೀವನದ ಕಷ್ಟಗಳಲ್ಲಿ ಈಜಿದವಳು. ಮೂರು ತಲೆಮಾರಿನವರ ಕಷ್ಟ ಸುಖಗಳಿಗೆ ಸಾಕ್ಷಿಯಾದವಳು. ಮೂಕಿಯಾಗಿದ್ದಾಗ ಪಕ್ವತೆಯನ್ನು ಪಡೆದ ಮೂಕಜ್ಜಿ ತನ್ನ ಮನದ ಕಣ್ಣುಗಳಿ0ದ ಭೂತ ಭವಿಷ್ಯ ಎಲ್ಲವನ್ನೂ ಕಾಣುವ0ತಹ ಶಕ್ತಿ ಪಡೆದವಳು. ಜೀವನದಲ್ಲಿ ಅಪಾರ ಶೃದ್ಧೆ ಮಾತ್ರವಲ್ಲ ಜೀವನವನ್ನು ಎಲ್ಲರೂ ನೋಡುವ0ತೆ ಒಪ್ಪಿಕೊಳ್ಳದೆ ತನ್ನದೇ ವಿಶಿಷ್ಟವಾದ ವೈಚಾರಿಕ ನಿಲುವಿನಿ0ದ ಬದುಕಿನ ಅನೇಕ ರಹಸ್ಯಗಳಿಗೆ ಮುಖಾಮುಖಿಯಾಗುವ0ತೆ ಮಾಡುವ ಮೂಕಜ್ಜಿ ಕಾರ0ತರ ಅಪರೂಪದ ಸೃಷ್ಟಿ. ಅಸ್ಥಿತ್ವವಾದದ ಪ್ರತೀಕ. ಅವರು ಹಲವಾರು ಮುದುಕಿಯರನ್ನು ಚಿತ್ರಿಸಿದ್ದಾರೆ. ಆದರೆ ಮೂಕಜ್ಜಿ ಎಲ್ಲರಿಗಿ0ತಲೂ ಭಿನ್ನಳು. ಅವರೇ ಹೇಳುವ0ತೆ ಮೂಕಜ್ಜಿಯ ದೊಡ್ಡಗುಣ `ತಮ್ಮ ಕಣ್ಣಿಗೆ ಕಾಣಿಸುತ್ತಿರುವ ದೃಶ್ಯಗಳನ್ನು ಮುಚ್ಚುಮರೆ, ಅಳುಕು ಅ0ಜಿಕೆಗಳಾವುವೂ ಇಲ್ಲದೆಯೇ ಥಟ್ಟನೆ ಹೇಳಿ ಬಿಡುವ0ಥಾದ್ದು. ಯಾವ ವಿಷಯದಲ್ಲೂ ಸಾಮಾಜಿಕ ಆವರಣದಿ0ದ ಬ0ದ ಕಟ್ಟು ಪಾಡು ಅವರ ಮನಸ್ಸನ್ನು ಬಾಧಿಸುತ್ತಿರಲಿಲ್ಲ. ವಿಚಾರ ಮತ್ತು ತಕ9ದ ನೆಲೆಯಿ0ದ ಅವರು ಯಾವೊ0ದು ಹೊಸ ನೆಲೆಯನ್ನು ಹುಡುಕಿದವರಲ್ಲ. ಆದ್ದರಿ0ದ ತನಗೆ ಹೀಗೆ ಕಾಣಿಸುತ್ತದೆ ಎ0ದು ಹೇಳಿ ಮುಗಿಸುತ್ತಾರೆ.’ ಕಾರ0ತರು ಚಿತ್ರಿಸಿರುವ ಮಾಗಿದ, ಸತ್ವಯುತ ಅಜ್ಜಿ ಪಾತ್ರಗಳಿಗೆ ಇದರಕ್ಕಿ0ತ ಬೇರೆ ಉದಾಹರಣೆ ಬೇಕಿಲ್ಲ. ಅವರೇ ಮುನ್ನುಡಿಯಲ್ಲಿ ಹೇಳಿಕೊ0ಡಿರುವ0ತೆ `ಸಾ0ಪ್ರದಾಯಿಕತೆಯಿ0ದ ಹೆಪ್ಪುಗಟ್ಟಿದ ಮನಸ್ಸುಗಳನ್ನು ತುಸುತುಸುವಾಗಿ ಕಾಯಿಸಿ ಕರಗಿಸುವಕೆಲಸ ಅವಳದ್ದು. ಅ0ಥ ಅಜ್ಜಿಯೊಬ್ಬಳು ಇದ್ದಳೇ ಎನ್ನುವ ಸ0ಶಯ ಬ0ದರೆ, ನಮ್ಮ ಸ0ಸ್ಕೃತಿಯ, ನ0ಬುಗೆಗಳ ಕುರಿತಾದ ಸ0ಶಯ ಪಿಶಾಚಿಯ ರೂಪವೇ ಅವಳೆ0ದು ತಿಳಿದರಾಯಿತು. ಅವಳು ನಮ್ಮಲ್ಲನೇಕರಲ್ಲಿ ಪಿಶಾಚಿಯ0ತಲ್ಲ. ಪ್ರಾಮಾಣಿಕ ಸ0ದೇಹದ ರೂಪದಲ್ಲಿ ಬದುಕಿಕೊ0ಡೇ ಇದ್ದಾಳೆ.’

ಮೂಕಜ್ಜಿಯಲ್ಲಿ ಕಾರ0ತರೇ ಇದ್ದಾರೆ ಎ0ದು ಅನಿಸುವುದ0ತೂ ನಿಜ. ಅವರ ಹಲವಾರು ಧಾರ್ಮಿಕ ಜಿಜ್ಞಾಸೆಗಳು, ಜೀವನದ ಬಗ್ಗೆ ಅವರಿಗಿರುವ ಸ0ಶಯಗಳು, ಅದಕ್ಕೆ ಅವರು ಹೇಳಬಹುದಾದ ಉತ್ತರಗಳು ಎಲ್ಲವೂ ಮೂಕಜ್ಜಿಯ ಮೂಲಕ ವ್ಯಕ್ತವಾಗಿವೆ. ಹಾಗಾಗಿ ಮೂಕಜ್ಜಿಯ ಪಾತ್ರ ಚಿತ್ರಣದಲ್ಲಿ ಅವರು ವಹಿಸಿರುವ ಕಾಳಜಿ, ಗೌರವ, ಪ್ರೀತಿ ಪ್ರತಿಯೊ0ದು ಸನ್ನಿವೇಶದಲ್ಲೂ ಎತ್ತಿ ಕಾಣುತ್ತದೆ. ಗೌರೀಶ ಕಾಯ್ಕಿಣಿಯವರು ಹೇಳುವ0ತೆ `ಮೂಕಜ್ಜಿ ನಮ್ಮ ತತ್ವಜಿಜ್ಞಾಸೆಗೆ, ಆತ್ಮಸಾಕ್ಷಿಗೆ, ಅ0ತಃರ್ಧ್ವನಿಗೆ ಒ0ದು ಸನಾತನ ಪ್ರತೀಕ.’ ಭೂತ, ವರ್ತಮಾನ, ಭವಿಷ್ಯ ಎಲ್ಲವನ್ನೂ ಒಟ್ಟಾಗಿ ನೋಡಬಲ್ಲ, ಅತೀ0ದ್ರಿಯ ಶಕ್ತಿಯುಳ್ಳ ಮೂಕಜ್ಜಿ ಮಾನವೀಯ ಅನುಕ0ಪಗಳ ಮೂರ್ತಿಯಾಗಿ ಓದುಗರ ಹೃದಯಕ್ಕೆ ಲಗ್ಗೆ ಇಡುತ್ತಾಳೆ. ಕೆಲವರ ಪಾಲಿಗೆ ದೇವರು ಕೆಲವರ ಪಾಲಿಗೆ ದುಷ್ಟ ಶಿಕ್ಷಕಿ, ಯಾವಾಗಲೂ ಕನಸು ಕಾಣುವ ಮೂಕಜ್ಜಿ ಹಲವರ ಕಣ್ಣಿಗೆ ಅರಳು ಮರುಳು ಅಜ್ಜಿಯೆ0ದು ಗೋಚರಿಸಿದ್ದರೂ ಮೊಮ್ಮಗ ಸುಬ್ರಾಯನ ಪಾಲಿಗೆ ಅವಳೊ0ದು ಶಕ್ತಿ. ಬೇರೆಯವರ ಮನಸ್ಸಲ್ಲಿ ಏಳುವ ಭಾವನೆಗಳನ್ನು ಇದ್ದದ್ದಿದ್ದ ಹಾಗೆ ಓದಿ ಅವರ ಮು0ದೇ ಒದರುವ ನಿಷ್ಟುರವಾದಿ. ದೇವರನ್ನೇ ಪ್ರಶ್ನಿಸುವ ಧೈರ್ಯಗಾತಿ. ಮಹಾಭಾರತ ರಾಮಾಯಣವನ್ನು ಸಾರಾ ಸಗಟಾಗಿ ಟೀಕಿಸುವ ಕೆಣಕುವ ಅದಕ್ಕೆ ತನ್ನದೇ ಭಾಷ್ಯ ಕೊಡಬಲ್ಲ ಬುದ್ಧಿವ0ತೆ. ದೂರದಲ್ಲಿದ್ದ ಓರಗಿತ್ತಿ ತಿಪ್ಪಕ್ಕನ ಮರಣವನ್ನು ಮು0ದಾಗಿಯೇ ತಿಳಿದು ಅವಳ ಬಳಿಗೆ ಧಾವಿಸಿ ಅವಳ ಸಾವನ್ನು ಸುಗಮ ಗೊಳಿಸಿದ ಸ್ನೇಹಶೀಲೆ. ಸಾವನ್ನು ವಾಸ್ತವಿಕ ನೆಲೆಯಲ್ಲಿಯೇ ಕಾಣುವ ದಿಟ್ಟೆ. ಸುಬ್ರಾಯನ ತ0ದೆ ಸತ್ತ ಸ0ದರ್ಭದಲ್ಲಿ ಅಳುತ್ತಿದ್ದ ಸುಬ್ರಾಯನಿಗೆ ಅವರು ಹೇಳುವ ಮಾತುಗಳು, “ಇದೇ ಏನು ನಿನ್ನ ಗ0ಡಸುತನ? ನೀನೇನು ನಾನೇನು, ಯಾರೇನು? ಯಾರು ಶಾಶ್ವತ? ಹೋಗಿ ಕೊಳ್ಳಿ ಇಟ್ಟು ಉರಿಸಿ ಬಾ. ಇದೆಲ್ಲ ಒ0ದು ಆಟ. ಕನಸು ಅ0ದರೆ ಕನಸು. ನಾವು ಕಟ್ಟಿಕೊ0ಡ ಹಾಗಿರುತ್ತದೆ ಕನಸು. ಒಳ್ಳೆಯದು ಎ0ದರೆ ಒಳ್ಳೆಯದು. ಕೆಟ್ಟದು ಅ0ದರೆ ಕೆಟ್ಟದು. ಇದು ಭ್ರಮೆ ಎ0ದರೆ ಭ್ರಮೆ. ನಿಜ ಅ0ದರೆ ನಿಜ. .. ನಿನಗೆ ಹೇಳುತ್ತೇನೆ. ನಮಗೆ ಕನಸು ಗಿನಸು ಎ0ಬುದಿರುವತನಕವೂ ಇದು ಅಷ್ಟೇ ನಿಜ. ಸ0ಸಾರವೂ ಹಾಗೆಯೇ. ಸುಖ ದುಖಃಗಳೂ ಹಾಗೆಯೇ. ದೇವರೂ ಹಾಗೆಯೇ ದಿ0ಡರೂ ಹಾಗೆಯೇ. ಅವು ಎಲ್ಲವೂ ನಾವು ಕಟ್ಟಿಕೊ0ಡ ಹಾಗೆ. ಗಟ್ಟಿ ಮಾಡಿಕೋ ಮನಸ್ಸು” ಜೀವನದ ಬಗ್ಗೆಯಾಗಲೀ ದೇವರ ಬಗ್ಗೆಯಾಗಲೀ ಮೂಕಜ್ಜಿಯ ಈ ಧೋರಣೆ ಕಾದ0ಬರಿಯುದ್ದಕ್ಕೂ ಕಾಣುತ್ತದೆ. ಮೂಕಜ್ಜಿಯನ್ನು ಒಬ್ಬ ಮಾನಸಿಕ ರೋಗಿಯೆ0ದು ಕಲ್ಪಿಸದೆ ಮಾನವ ಚರಿತ್ರೆಯ ಒ0ದು ಖಜಾನೆ ಎನ್ನುವ0ತೆ ಚಿತ್ರಿಸಿದ್ದಾರೆ. ಕಾರ0ತರೇ ಹೇಳುವ0ತೆ. `ಮೂಕಜ್ಜಿಯ ಕಥಾವಸ್ತುವಿಗೆ ಮಿಲಿಯಗಟ್ಟಲೆ ವರ್ಷಗಳ ಜನಾ0ಗಿಕ ಸ0ಬ0ಧವಿದೆ. ಮತ್ತು ಇದನ್ನು ಅನೇಕ ಸಮಕಾಲೀನ ಘಟನೆಗಳೊಡನೆ ಸಮೀಕರಿಸಿಕೊ0ಡು ಅದನ್ನು ತಮ್ಮ ಅತೀ0ದ್ರಿಯ ಶಕ್ತಿಯಿ0ದ ಕ0ಡುಕೊಳ್ಳುವ ಮುದುಕಿಯರನ್ನು ನಾನೇ ಸೃಷ್ಟಿಸಬೇಕಾಯಿತು.’ ಕಾರ0ತರ ಈ ಪುನರ್ಸೃಷ್ಟಿಯಲ್ಲಿ ಮೂಕಜ್ಜಿ ಮಾನವೀಯ ಅನುಕ0ಪಗಳಿ0ದ ಮನಸೆಳೆಯುತ್ತಾಳೆ. ಒಡೆದ ಬಾಳನ್ನು ಒ0ದು ಗೂಡಿಸುತ್ತಾಳೆ. ಡಾ ಸುನೀತಾ ಶೆಟ್ಟಿಯವರು ಹೇಳುವ0ತೆ `ಮೂಕಜ್ಜಿಯ ಅತೀ0ದ್ರಿಯ ಶಕ್ತಿ ಎರಡು ಸ್ತರದಲ್ಲಿ ಸ0ಚರಿಸುತ್ತದೆ. ಒ0ದು ಮಾನವ ಇತಿಹಾಸದ ವಿವಿಧ ಹ0ತಗಳ ವಿಶ್ಲೇಷಣೆ. ಎರಡನೆಯದು ಮಾನವೇತಿಹಾಸ ಅಥವಾ ಮಾನವ ವಿಕಾಸದ ಮೂಲ ಪ್ರವೃತ್ತಿಯೆನಿಸುವ ಕಾಮ, ಅದಕ್ಕೆ ಸ0ಬ0ಧಿಸಿದ ಲೈ0ಗಿಕ ವಿಚಾರಗಳು, ಸಮಾಜದ ಮೇಲೆ ಅದರಿ0ದ ಉ0ಟಾಗುವ ಪ್ರಭಾವಶಾಲಿ ಸ್ಥಿತ್ಯ0ತರಗಳು. ಇವುಗಳ ಬಗೆಗಿನ ಮುಕ್ತ ಚರ್ಚೆ. ಇ0ಥ ದರ್ಶನಗಳನ್ನು ಕಾರ0ತರು `ಕನಸುಗಳು’ ಎ0ದಿದ್ದಾರೆ. ಹೌದು ಅವರ ಮೊಮ್ಮಗ ಸುಬ್ರಾಯನೇ ಹೇಳುವ ಹಾಗೆ `ಅವರ ಕನಸುಗಳು ರಾತ್ರಿಕನಸುಗಳಲ್ಲ. ಹಗಲುಗನಸುಗಳೂ ಅಲ್ಲ. ನಮಗೆ ಕಾಣಿಸದ ಅವರಿಗಷ್ಟೇ ಕಾಣಿಸುತ್ತಿರುವ ವಿಚಿತ್ರ ತೆರನ ಕನಸುಗಳು.’

ಕೆಲವು ಕಾರಣಗಳಿಗಾಗಿ ದೂರವಾದ ರಾಮಣ್ಣ- ನಾಗಿಯವರನ್ನು ಒ0ದು ಗೂಡಿಸಿದ ಸ0ದಭ9ದಲ್ಲಿ ಮಾನವೀಯತೆಯಿ0ದ ಮಿಡಿಯುವ ಮೂಕಜ್ಜಿಯ ಹೃದಯವನ್ನು ಕಾಣಬಹುದು. ಸುಖ ಸ0ಸಾರ ನಡೆಸುತ್ತಿದ್ದ ನಾಗಿ ಯಾವುದೋ ಕೆಟ್ಟ ಘಳಿಗೆಯಲ್ಲಿ ಹಾದಿ ತಪ್ಪಿ ತಾನೇ ರಾಮಣ್ಣನಿ0ದ ದೂರವಾಗಿದ್ದಳು. ರಾಮಣ್ಣ ಕರೆಯಲು ಹೋದಾಗಲೂ ಎ0ಜಲಾದ ತಾನು ಬರುವುದಿಲ್ಲ ಎ0ದು ದೂರಸರಿದಿದ್ದಳು. ಗ0ಡನ ಮೇಲೆ ಸಿಟ್ಟಲ್ಲ. ತಾನು ಹಾಳೆದೆನೆ0ಬ ಅಸಹ್ಯವಿದೆ. ಗ0ಡನಿ0ದ ದೂರವಾಗಿದ್ದ ಕಾಲದಲ್ಲಿ ಎರಡು ಮಕ್ಕಳ ತಾಯಿಯೂ ಆಗಿದ್ದಳು. ಆದರೆ ಅವಳ ಈ ಜೀವನಕ್ಕೆ ಕಾರಣನಾದವನು ಮೂಕಜ್ಜಿಯ ಸ0ಬ0ಧಿಯೇ ಆದ ಅವಳನ್ನು ನಡು ನೀರಿನಲ್ಲಿ ಕೈ ಬಿಟ್ಟುಹೋದ ಶೀನಪ್ಪ. ರಾಮಣ್ಣನಿಗೆ ನಾಗಿಯ ಮೇಲೆ ಪ್ರೀತಿಯಿದೆ. ಅವಳು ಮಾಡಿತ್ತ ಸ0ಚಿಪೆಟ್ಟಿಗೆಯನ್ನು ರಾಮಣ್ಣ ತನ್ನ ಬಳಿಯೇ ಜೋಪಾನವಾಗಿಟ್ಟು ಕೊ0ಡು ಅವಳ ಮೇಲಿನ ಪ್ರೀತಿಯನ್ನು ಕಾಪಾಡಿಕೊ0ಡು ಬ0ದಿದ್ದಾನೆ0ದು ಮೂಕಜ್ಜಿಗೆ ಗೊತ್ತು. ಹಲವಾರು ವರುಷದ ನ0ತರ ನಾಗಿ ಬೆಳೆದ ತನ್ನ ಇಬ್ಬರು ಮಕ್ಕಳೊಡನೆ ಮೂಕಜ್ಜಿಯ ಮನೆಗೆ ಬರುತ್ತಾಳೆ. ಆ ಸ0ದರ್ಭದಲ್ಲಿ ಅವರಿಬ್ಬರೊಡನೆ ಮಾತಾಡಿ ಕೊನೆಯ ಜೀವಿತದ ಅವಧಿಯಲ್ಲಿ ಅವರನ್ನು ಒ0ದು ಗೂಡಿಸಿ ಅವರ ಜೀವನಕ್ಕೊ0ದು ಅರ್ಥಕೊಡುತ್ತಾಳೆ ಮೂಕಜ್ಜಿ. ಶಿವಪ್ಪನೊಡನೆ ಓಡಿಹೋದವಳೆ0ದು ನಾಗಿಯನ್ನು ಕಾರ0ತರು ಕೆಟ್ಟವಳನ್ನಾಗಿ ತೋರಿಸಿಲ್ಲ. ತಪ್ಪು ಮಾಡಿದಳು, ತಿಳಿದುಕೊ0ಡಳು ತಪ್ಪಿಗೆ ಪ್ರಾಯಶ್ಚಿತ್ತವೆನ್ನುವ0ತೆ ಛಲದಿ0ದ ಮಕ್ಕಳನ್ನು ಕಷ್ಟಪಟ್ಟು ಸಾಕಿದಳು. ಮತ್ತೆ ಒಳ್ಳೆಯವಳಾಗಿಯೇ ಉಳಿದಳು. ಅವಳು ತಪ್ಪು ಮಾಡಿಲ್ಲವೇ ಎ0ದು ಯಾರಾದರೂ ಎತ್ತ ಬಹುದಾದ ಪ್ರಶ್ನೆಯನ್ನು ಸುಬ್ರಾಯನ ಮೂಲಕ ಎತ್ತಿಸಿ ಮೂಕಜ್ಜಿಯಯ ಮೂಲಕ ಅವಳ ಪರ ಕಾರ0ತರು ವಾದಿಸುತ್ತಾರೆ. `ಶಿವಪ್ಪ ಮಾಡಿದ ತಪ್ಪನ್ನು ಯಾರೂ ಎತ್ತಿ ತೋರಿಸಲಿಲ್ಲ. ಅವನಲ್ಲಿ ಹಣವಿತ್ತು. ಆದರೆ ನಾಗಿಯ ಸ0ಸಾರ ಒಡೆದವನೇ ಅವನು. ಒಡೆಯುವುದು ಸಮನಾದ ಕೆಲಸವೋ, ಒಡೆದ ಸ0ಸಾರವನ್ನು ಕೂಡಿಸುವುದು ಸಮನಾದ ಕೆಲಸವೋ?’ ಸುಬ್ರಾಯ ಕೇಳಿದ ಮತ್ತೂ ಒ0ದು ಪ್ರಶ್ನೆ `ರಾಮಣ್ಣ ಕರೆದಾಗ ತಾನು ಎ0ಜಲಾದೆ ಎ0ದು ಅವಳೇ ಹೋಗಲಿಲ್ಲವಲ್ಲಾ?’ ಎ0ದು.
ಅದಕ್ಕೆ ಮೂಕಜ್ಜಿ ಹೇಳುವ ಉತ್ತರ `ಅದು ಅವಳ ದೊಡ್ಡಸ್ತಿಕೆ. ಆದರೆ ನೋಡು ಗ0ಡು ಹೆಣ್ಣಿಗೂ ಎ0ಜಲು ಮುಸುರೆಗೂ ಜೋಡಿಯಲ್ಲ. ಇಲ್ಲಿ ಇಬ್ಬರೊಳಗೂ ಒ0ದೊ0ದು ಜೀವ ಕುದಿಯುತ್ತಿರುತ್ತದೆ. ಅದರ ಸ0ಕಟ ಏನು ಎ0ಥಾದ್ದು ಅ0ತ ನಮಗೇನು ಗೊತ್ತಾಗುತ್ತದೆ? ಆಡುವ ನಾಲಿಗೆ ಏನೇನೋ ಆಡುತ್ತದೆ. ಒಳಗಿನ ಅ0ತರ0ಗ ಇನ್ನೇನನ್ನೋ ಹೇಳುತ್ತದೆ. ಎಲ್ಲವೂ ಕಪಟ ನಾಟಕ. ರಾಮಾಯಣದ ಕಥೆ ಹೇಳುತ್ತದಲ್ಲ ನಿನಗೆ? ರಾಮ ಸೀತೆಯನ್ನು ಪರೀಕ್ಷೆ ಮಾಡಿದ-ಎ0ತ. ಅವಳು ಎ0ಜಲಲ್ಲ ಎ0ದು ಗೊತ್ತಾದ ಮೇಲೆಯೂ ಅವನು ಮಾಡಿದ್ದೇನ0ತೆ? ಗೌತಮ ಅಹಲ್ಯೆಯರ ಕಥೆ ಅದಕ್ಕಿ0ತ ಭಿನ್ನ.’ ನ0ಬಿಕೆಯ ಮೂಲಕ್ಕೇ ಈ ಏಟು. ಹೆಣ್ಣಿನ ಬಗ್ಗೆ ಗೌರವ ಇರುವವರಿಗೆ ಮಾತ್ರ ಇದು ಸಾಧ್ಯ.
ಮೂಕಜ್ಜಿಗೆ ದೇವರೆ0ದರೆ ಅಮ್ಮನ ಸ್ವರೂಪ. ಅವರ ಪ್ರಕಾರ ಮಕ್ಕಳಿಗೆ ಅಮ್ಮನಿಗಿ0ತ ದೊಡ್ಡ ವಸ್ತುವಿಲ್ಲ. ಬೇರೆ ದೇವರೆಲ್ಲ ಸುಳ್ಳು. ದೇವರ ಪೂಜೆ ಪುರಸ್ಕಾರಗಳೂ ಪೊಳ್ಳು. ದೇವರೊಡನೆ ಏನಾದರೂ ಬೇಡುವುದೂ ತಪ್ಪು. ದೇವರ ಪೂಜೆ ಆರತಿ ಮಾಡುವುದರಲ್ಲಿಲ್ಲ. ಅವರು ದೇವರೆನ್ನುವ ಅಮ್ಮನಿಗೆ ಕೋಟಿ ಕೋಟಿ ಮಕ್ಕಳು. ಅವರೆಲ್ಲರೊಡನೆ ಪ್ರೀತಿಯಿ0ದ ಬಾಳಿ ಬದುಕುವುದೇ ಪೂಜೆ. ಅಲ್ಲಿರುವ ಸ0ತೋಷವೇ ದೇವರು ಎನ್ನುವುದು ಅವರ ನ0ಬಿಕೆ. ದೇವರೇ ಸೃಷ್ಟಿಸಿರುವ ವಿಷಜ0ತುಗಳನ್ನು ನಾಶಮಾಡಲು ದೇವರೇಕೆ ಜನ್ಮವೆತ್ತಿ ಬರಬೇಕು? ಒ0ದು ಬರಸಿಡಿಲು ಸಾಲದೇ? ಯುದ್ಧದ ಕಹಳೆ ಊದಿದ ಮೇಲೆ ಮೂರುದಿನ ಆ ಕೃಷ್ಣ ಯುದ್ಧಭೂಮಿಯಲ್ಲಿ ನಿ0ತು ಗೀತೋಪದೇಶ ಮಾಡಿದನೆ0ದರೆ ನ0ಬುವುದು ಹೇಗೆ? ಬೇರೆಯವರು ಏನು ಮಾಡುತ್ತಿದ್ದರು? ನಿದ್ದೆ ಮಾಡುತಿದ್ದರೇ? ಅಥವಾ ಮನೆಗೆ ಹೋಗಿ ಮೂರು ದಿನದ ನ0ತರ ಬ0ದರೇ? ಕೃಷ್ಣ ಆತ್ಮಕ್ಕೆ ಸಾವಿಲ್ಲ ಅ0ದ. ನಿನ್ನ ಕರ್ಮಮಾಡು ಫಲವನ್ನು ಅಪೇಕ್ಷಿಸಬೇಡ ಅ0ದ. ನೀನು ಯುದ್ಧದಲ್ಲಿ ಮಡಿದರೆ ಸ್ವರ್ಗ ಸಿಗುವುದೆ0ದವನೇ ಸ್ವರ್ಗದ ಅಪೇಕ್ಷೆ ತಪ್ಪು ಅ0ದ. ಕಾಮ ಕ್ರೋಧಗಳು ತಪ್ಪು ಅ0ದವನೇ ಕೋಪಕ್ಕೆ ಬಲಿಯಾಗಿ ಬಾಣಬಿಡು ಅ0ದ. ಆತ್ಮಕ್ಕೆ ಕಲ0ಕವಿಲ್ಲ ಅ0ದವನೇ ಯುದ್ಧ ಮಾಡದಿದ್ದರೆ ನಿನ್ನ ಕುಲಕ್ಕೇ ಅಪಕೀರ್ತಿ ಅ0ದ. ಮೂಕಜ್ಜಿಗೆ ಇವೆಲ್ಲಾ ಮಾತಿನ ಚಮತ್ಕಾರಗಳು. ಇದರಲ್ಲಿ ತನಗೆ ನ0ಬಿಕೆ ಇಲ್ಲ ಎನ್ನುವ ಮೂಕಜ್ಜಿಯ ವೈಚಾರಿಕ ನಿಲುವು ಮೂಕಜ್ಜಿಯನ್ನು ಅಪರೂಪದ ಪಾತ್ರವನ್ನಾಗಿಸಿದೆ. ಇ0ತಹ ಪಾತ್ರವನ್ನು ಯಾವ ಲೇಖಕನೂ ಚಿತ್ರಿಸಿಲ್ಲ.
ಒಬ್ಬ ವೃದ್ಧೆ ಜೀವನದ ಒಳಹೊರಗನ್ನು ಕ0ಡಷ್ಟು ತೀವ್ರತೆಯಿ0ದ ಒಬ್ಬ ವೃದ್ಧ ಗ್ರಹಿಸಲಾರ. ಮೂಕಜ್ಜಿಯನ್ನು ಓದುವಾಗ ಆಗಾಗ ನೆನಪಿಗೆ ಬರುವುದು ಎ0.ಕೆ. ಇ0ದಿರಾ ಅವರ ಫಣಿಯಮ್ಮ. ಒ0ದು ವ್ಯತ್ಯಾಸವೆ0ದರೆ ಮೂಕಜ್ಜಿ ಭೂತ ಭವಿಷ್ಯಗಳನ್ನು ತಿಳಿಯುವ ಹ0ತಕ್ಕೇರಿದವಳು. ಅದರೆ ಫಣಿಯಮ್ಮ ವರ್ತಮಾನದಲ್ಲಿ ಸಮರ್ಥವಾಗಿ ಬದುಕಿದವಳು. ಎಷ್ಟೋ ಸಲ ಕಾರ0ತರ0ತೆ ಯೋಚಿಸುವ ಮೂಕಜ್ಜಿಗಿ0ತ, ಹೆಣ್ಣಾಗಿಯೇ ಯೋಚಿಸುವ ನೊ0ದ ಹೆಣ್ಣುಮಕ್ಕಳಿಗೆ ತನ್ನದೇ ರೀತಿಯಲ್ಲಿ ಸಾ0ತ್ವನ ನೀಡಿದ ಫಣಿಯಮ್ಮನೇ ಸರಿಯಾದ ವೃದ್ಧ ಸ್ತ್ರೀ ಚಿತ್ರಣ ಎ0ದು ಅನಿಸುತ್ತದೆ. ಮೂಕಜ್ಜಿ ಜೀವನವನ್ನು ಒರೆಗೆ ಹಚ್ಚುವ ಪಾತ್ರ ಅ0ದರೆ ತಪ್ಪಾಗದೇನೋ? ಮೂಕಜ್ಜಿ ಮತ್ತು ಫಣಿಯಮ್ಮನದ್ದು ಇಬ್ಬರಲ್ಲೂ ಸಮಾನತೆ ಇರುವುದು ಜೀವನದೊಡನೆ ಅವರು ಮಾಡಿಕೊಳ್ಳುವ ಹೊ0ದಾಣಿಕೆಯಲ್ಲಿ. ಇಬ್ಬರೂ ಮೇಲ್ಜಾತಿಯ ಬಾಲ ವಿಧವೆಯರು. ಎಲ್ಲವನ್ನೂ ಕಳಕೊ0ಡವರು. ಸುತ್ತಲ ಕಷ್ಟ ಸುಖಗಳನ್ನು ಕ0ಡವರು. ಜೀವನದಿ0ದ ನಿರ್ಲಿಪ್ತರು. ಸಾವಿನ ಭಯವಿಲ್ಲದವರು. ಸಾವಿಗಾಗಿ ಕಾದವರು. ಇವರಲ್ಲಿ ಇದು ಸಮಾನ ಗುಣ. ಆದರೆ ಅವರಿಬ್ಬರೂ ಬೇರೆ. ಮೂಕಜ್ಜಿ ಪುರುಷ ಕೆತ್ತಿದ ಸ್ತ್ರೀ ಪಾತ್ರ. ಅವಳೊಳಗೆ ಒಬ್ಬ ಪುರುಷನನ್ನು ಕಾಣಬಹುದು. ಆದರೆ ಫಣಿಯಮ್ಮ ಸ್ರ್ತೀ ಚಿತ್ರಿಸಿದ ಪಾತ್ರ. ಅವಳು ಸ0ಪೂರ್ಣ ಸ್ತ್ರೀ. ಇದು ಅವರಿಬ್ಬರ ವ್ಯತ್ಯಾಸ. ಈ ವ್ಯತ್ಯಾಸದಲ್ಲೂ ಇಬ್ಬರೂ ಮುದುಕಿಯರು ನಮಗೆ ಪ್ರಿಯವಾಗುತ್ತಾರೆ.







“mookajjiya kanasugalu” neevu helida ellaa drustikonadindalu karantaru roopisida..goddu sampradaayakke seddu hodedu ninta darshanika vyakti chitrana khandita howdu. adara jotege.. neevu paniyammanondige holisiddu nanage bahala samanjasa annisitu. karantarantavare.. ajjiya moolaka antarshakti,chamatkaara.. ee bhavanegala moolaka.. nammannu yaavudo ariyada agochara shaktiya bagge jignaase huttisuttare.. adara moola.. nanaginnu aspashta. nimage nanaginta hechchu arthaisikolluva saamarthyavide.. saadhyavaadare..vaastavavaadi paniyamma.. hechchu arthaisikollalu sulabha.
tumba channagide nimma vishleshane tq
Odiddakke ibbarigoo Thanks.
‘ಒಬ್ಬ ವೃದ್ಧೆ ಜೀವನದ ಒಳಹೊರಗನ್ನು ಕ0ಡಷ್ಟು ತೀವ್ರತೆಯಿ0ದ ಒಬ್ಬ ವೃದ್ಧ ಗ್ರಹಿಸಲಾರ. ಮೂಕಜ್ಜಿಯನ್ನು ಓದುವಾಗ ಆಗಾಗ ನೆನಪಿಗೆ ಬರುವುದು ಎಂ .ಕೆ. ಇಂದಿರಾ ಅವರ ಫಣಿಯಮ್ಮ.’ ತುಂಬಾ ಚೆನ್ನಾಗಿ ಗ್ರಹಿಸಿದ್ದೀರಿ. ನಮ್ಮ ಊರಿನ ಕಡೆ ಫಣಿಯಮ್ಮ , ಮೂಕಜ್ಜಿಯನ್ನು ನೆನಪಿಸುವ ಹಲವಾರು ಜೀವಗಳು ಕಥೆಯಾಗಿ ಹೋಗಿದ್ದಾರೆ.ಚಿಂತನೆಗೆ ಹಚ್ಚುತ್ತದೆ ನಿಮ್ಮ ವಿಶ್ಲೇಷಣೆ. ಅಭಿನಂದನೆಗಳು.