ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಸಾಪ ಸಮ್ಮೇಳನದ ಅಧ್ಯಕ್ಷತೆ ನನಗೆ ಬೇಡವೇ ಬೇಡ: ರೂಪ ಹಾಸನ ನಿರಾಕರಣೆ

ಒಂದೆಡೆ ಸಾಹಿತಿಗಳೇ ಅಲ್ಲದವರಿಗೆ ಅಧ್ಯಕ್ಷಗಿರಿ, ಅದಕ್ಕೆ ಪ್ರತಿಭಟನೆ ಬಂದರೂ ಜಗ್ಗದೆ ಸಮ್ಮೇಳನ ನಡೆಸುವ ಅಹಂಕಾರವನ್ನು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅದರ ರಾಜ್ಯಅಧ್ಯಕ್ಷರಾದ ಮನು ಬಳಿಗಾರ್ ಪ್ರದರ್ಶಿಸುತ್ತಿದ್ದಾರೆ 

ಇಂತಹವರ ಮಧ್ಯೆ ಅಪರೂಪವೆಂಬಂತೆ ರೂಪ ಹಾಸನ ಅವರು ತಮಗೆ ಒಲಿದು ಬಂದ ಅಧ್ಯಕ್ಷತೆಯ ಗೌರವವನ್ನು ತಿರಸ್ಕರಿಸಿದ್ದಾರೆ.  ಪರಿಷತ್ತು ತನ್ನ ಉದ್ಧೇಶಗಳನ್ನೇ ಮರೆತಿದೆ ಎನ್ನುವುದು ಅವರ ಒಳಗಿನ ಬೇಸರ.

ನಾನೇಕೆ ಬೇಡ ಎನ್ನಬೇಕಾದ ಪರಿಸ್ಥಿತಿ ಬಂತು ಎನ್ನುವುದನ್ನು ಅವರು ಇಲ್ಲಿ ವಿವರಿಸಿದ್ದಾರೆ. ಮನು ಬಳಿಗಾರ್ ಹಾಗೂ ಅವರ ಕಸಾಪ ಕೂಟಕ್ಕೆ ಇದು ತಟ್ಟಲಿ 

ಆತ್ಮೀಯರೇ,
ನಮಸ್ಕಾರ.

ಫೆಬ್ರವರಿ ಮೊದಲ ವಾರದಲ್ಲಿ ನಡೆಯಲಿರುವ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಲು ನನ್ನನ್ನು ಪದಾಧಿಕಾರಿಗಳು  ಕೇಳಿದ್ದು ನಾನದನ್ನು ನಿರಾಕರಿಸಿದ್ದೆ.

ಪರಿಷತ್ತು ಈ ಕುರಿತು ವಿವರವನ್ನು ನೀಡದೇ ನಾನು ನಿರಾಕರಿಸಿದ್ದನ್ನಷ್ಟೇ ಪತ್ರಿಕೆಗೆ ಹೇಳಿದ್ದರಿಂದ ನನ್ನ ಹಿತೈಷಿಗಳು, ಆಪ್ತರು ಸ್ಪಷ್ಟನೆ ಕೇಳುತ್ತಿದ್ದು, ಅದರಂತೆ ಇಂದು  ಈ ರೀತಿಯ ಪತ್ರಿಕಾ ಹೇಳಿಕೆ ನೀಡಿದ್ದೇನೆ.

ವಿಶ್ವಾಸದಿಂದ,
ರೂಪ ಹಾಸನ

‍ಲೇಖಕರು avadhi

8 January, 2018

4 Comments

  1. Lalitha siddabasavayya

    ರೂಪಾ ಅವರ ನಿಲುವು ಸರಿಯಾಗಿದೆ. ಎರಡು ವಿಶ್ವ ಕನ್ನಡ ಸಮ್ಮೇಳನಗಳು, ಒಂದಲ್ಲ ಎರಡಲ್ಲ ಎಂಭತ್ಮೂರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಆದುವು. ಇವಲ್ಲದೆ ಪ್ರತಿ ಜಿಲ್ಲೆ , ತಾಲೂಕು , ಹೋಬಳಿ , ನಗರದ ಒಂದೊಂದು ಬಡಾವಣೆಯಲ್ಲಿಯೂ ಒಂದೊಂದು ಸಮ್ಮೇಳನ ವರ್ಷಕ್ಕೊಂದರ ಹಾಗೆ ಆಗುತ್ತಲೇ ಇವೆ.

    ಇವೆಲ್ಲ ಬೇಕು ಕನ್ನಡದ ಸಡಗರಕ್ಕೆ ನಿಜ. ಆಯಾ ಪ್ರದೇಶದಲ್ಲಿ ಈ ಸಮ್ಮೇಳನಗಳು ಹುಟ್ಟು ಹಾಕುವ ಕನ್ನಡತನದ ಸಂಭ್ರಮಕ್ಕೆ ಸಾಟಿಯಾದದ್ದು ಇನ್ನೊಂದು ಖಂಡಿತವಾಗಿಯೂ ಇಲ್ಲ.

    ಆದರೆ ನಮ್ಮ ಘನತೆವೆತ್ತ ಕಸಾಪದ ಕೆಲಸ ಇಷ್ಟೇಯೆ? ಮುಖ್ಯವಾಗಿ ಕನ್ನಡವನ್ನು ಉಳಿಸುವ ಜವಾಬ್ದಾರಿ ಅದರದಲ್ಲವೇ ? ಈಗ ಕನ್ನಡ ನಮ್ಮ ಕಿರಿಯರ ಬಾಯಲ್ಲಿ ಎಷ್ಟು ಉಳಿದಿದೆ ಎಂಬುದನ್ನೇನಾದರೂ ಕಸಾಪ ಒಂದು ಸರ್ವೆ ಮಾಡುವ ಮುಖಾಂತರ ಅಳೆದಿದೆಯೇ ? ಮೆಟ್ರೊ ನಗರ ಬಿಡಿ , ಜಿಲ್ಲಾ ಕೇಂದ್ರ ಬಿಡಿ , ತಾಲ್ಲೂಕು ಬಿಡಿ , ಹೋಬಳಿಗಳಲ್ಲೂ ನಮ್ಮ ಕನ್ನಡ ನಮ್ಮ ಮಕ್ಕಳ ಬಾಯಲ್ಲಿ ನಲಿಯುತ್ತಿಲ್ಲ. ಅರ್ಥವಾಗದ ಭಾಷೆಯ ಹಾಡಿಗೆ ಎರಡು ವರ್ಷದ ಮಕ್ಕಳನ್ನು ಕೂಡಾ ಹೆಜ್ಜೆಹಾಕುವಂತೆ ಮಾಡುವ ಇಂಗ್ಲೀಷ್ ಮೀಡಿಯಮ್ ಶಾಲೆಗಳು ಹೋಬಳಿಗಳಲ್ಲೂ ಬಂದು ಯಾವ ರಾಯನ ಕಾಲವಾಯ್ತೊ ಎನುವಂತೆ ಅದು ಹಳೆಯ ಮಾತಾಗುತ್ತಿದೆ.

    ಇಂತಹ ವಿಷಣ್ಣ ವಾತಾವರಣದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ನಮ್ಮ ಮುಂದಿನ ತಲೆಗೆ ಸಮರ್ಥವಾಗಿ ಸಾಗಿಸಲು ಬೇಕಾದದ್ದು ಅದನ್ನು ಅನ್ನದ ಭಾಷೆಯಾಗಿ ಮಾಡಲೇ ಬೇಕಾದ ಹಠ.
    *ಹಠ ಹಿಡಿಯದ ಹೊರತು ಇದಾಗದು*

    ಅಂತಹ ಹಠ ಹಿಡಿದು ನಮ್ಮ ನಾಡೊಳಗೆ ಕನ್ನಡವನ್ನು ಕೊನೆಯ ಪಕ್ಷ ಒಂದನೆ ತರಗತಿಯಿಂದ ನಾಲ್ಕನೆ ತರಗತಿಯವರೆಗೆ ಆದರೂ ಕಡ್ಡಾಯ ಕಲಿಕೆ ಮಾಧ್ಯಮವಾಗಿ ಜಾರಿಗೆ ತರಿಸುವ ಶಕ್ತಿ ಇರುವುದು ಕಸಾಪಕ್ಕೆ ಮಾತ್ರ. ಈ ಸಂಬಂಧ ಈಗಿರುವ ಕಾನೂನಾತ್ಮಕ ತೊಡಕನ್ನು ಮೀರಲು ಖಂಡಿತವಾಗಿ ಮಾರ್ಗಗಳಿವೆ. ಆ ಮಾರ್ಗ ಹುಡುಕಿರೆಂದು ಸರ್ಕಾರದ ಮೇಲೆ ಶತಾಯ ಗತಾಯ ಒತ್ತಡ ಹೇರುವ, ಹಠ ಹಿಡಿಯುವ ಶಕ್ತಿ ಇರುವುದು ಅಪಾರ ಸದಸ್ಯ ಬಲ ಹೊಂದಿರುವ ಏಕೈಕ ರಾಜಕೀಯೇತರ ಅಚ್ಚ ಕನ್ನಡದ ಸಂಸ್ಥೆಯಾದ ಕಸಾಪ ಕ್ಕೆ ಮಾತ್ರ. ಅದರ ಸ್ಥಾಪಿತ ಉದ್ದೇಶವೇ ಅದು‌.

    ಆದರೆ ವರ್ಷದಿಂದ ವರ್ಷಕ್ಕೆ ಈ ಮುಖ್ಯ ಸಂಕಲ್ಪದಿಂದ ಕಸಾಪ ದೂರವಾಗಿ, ಸಮ್ಮೇಳನಗಳ ಮೇಲೆ ಸಮ್ಮೇಳನ ನಡೆಸುವ organising agency ಆಗುತ್ತಿದೆಯೇ ಎನ್ನಿಸುತ್ತಿದೆ.

    ಇಂತಹ ಸಂದರ್ಭದಲ್ಲಿ ರೂಪಾ ಅವರ ಹಾಗೆ ಸಾಹಿತಿಗಳಾದರೂ ಗಟ್ಟಿ ನಿಲುವು ತೆಗೆದುಕೊಳ್ಳದಿದ್ದರೆ ಇನ್ನಾರು ತೆಗೆದುಕೊಂಡಾರು ?

  2. BVKulkarni

    Congratulate Ms Rupa hasan for rejecting the offer to preside over hasan Kannada sahitya sammelan and gave the reasons. Sahitya Parishat will now make another CHAMPA as Adhyaksha for Hasan Sahitya sammelan. We apprehended that Making Champa as Adhyaksha for Mysore Sammelana was agreed upon on political consideration. He met the requirement by seeking votes for Congress in the next Assembly elections. This is not the way Parishat should select Adhyaksha. While selecting Adhyaksha, they should explore a person without any controversies. Champa is known for controversies.

  3. Anasuya M R

    ಯೋಗ್ಯ ತೀರ್ಮಾನವನ್ನೇ ಕೈಗೂಂಡಿರುವಿರಿ ಮೇಡಂ

  4. SHIVA SIMHA

    ರೂಪಾ ಅವರ ನಿಲುವು ಸರಿಯಾಗಿದೆ

Trackbacks/Pingbacks

  1. ಸಮ್ಮೇಳನ ನಡೆಸೋದಷ್ಟೇ ಕಸಾಪ ಕೆಲ್ಸವಾ? – Avadhi/ಅವಧಿ - […] ಹಾಸನ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಶತೆಯನ್ನು ವಹಿಸುವಂತೆ ಲೇಖಕಿ ರೂಪಾ ಹಾಸನ ಅವರಿಗೆ ಆಹ್ವಾನ ನೀಡಲಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತು ನೀಡಿದ ಈ ಆಹ್ವಾನವನ್ನು ರೂಪಾ  ತಿರಸ್ಕರಿಸಿದ್ದಾರೆ.…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading