ರೇಣುಕಾ ರಮಾನಂದ

“ಅಕ್ಕ. ..
ಸೊನೆಗೆ ಕಡ್ಡಿ ಗೀರುವುದು
ಹಂಗಂದ್ರೇನು? ಪ್ಲೀಜ್ ಎಕ್ಸಪ್ಲೇನು! “
‘ಅವಧಿ‘ಯಲ್ಲಿ ಪ್ರಕಟವಾದ ನನ್ನ ‘ಅವಳ ಗಂಡ‘ ಕವಿತೆಯ ಒಂದು ಸಾಲಿನ ಮೇಲೆ Rajkumar Madiwalar ರಿಗೆ ಒಂದು ಡೌಟು…
ನಾ ಕೊಟ್ಟ ವಿವರಣೆ ಹೀಗಿದೆ

ಉಪ್ಪಿನಕಾಯಿ ರಸ ಮಾಡಲು ನಮ್ಮ ಕಡೆ ತೀರ ಸಣ್ಣ ಮಿಡಿ ಉಪಯೋಗಿಸ್ತಾರೆ… ಅದರಲ್ಲೂ ಮಿಡಿಯ ತೊಟ್ಟು ಮುರಿದಾಕ್ಷಣ ಛಿಲ್ಲನೆ ಸೊನೆ ಹಾರಿದರೆ ಅಂತಹ ಮಿಡಿ ೨ ವಷ೯ವಾದರೂ ಹಾಳಾಗದು…. ಆ ಸೊನೆಗೆ ಬೆಂಕಿಕಡ್ಡಿ ಗೀರಿ ಹಿಡಿದಾಗ ಭಗ್ಗನೆ ಉರಿದರೆ ಅದು ಪ್ರಶಸ್ತ ಮಿಡಿ… ಅಪ್ಪೆಮಿಡಿಗೆ ಮಾತ್ರ ಸೊನೆ ಜಾಸ್ತಿ…
ನೂರು ಮಿಡಿಗೆ ಸಾವಿರ ರೂಪಾಯಿಯಾದರೂ ಕೊಳ್ಳುತ್ತಾರೆ… ಹಾಗಾಗಿ ಮಿಡಿ ಮಾರುವವರು ಬೆಂಕಿಪಟ್ನ ಹಿಡಿದೇ ಮಾರಲು ಕುಳಿತುಕೊಳ್ಳೋದು… ಕಡ್ಡಿಗೀರಿ ಪ್ರಶಸ್ತ ಮಿಡಿಯ ಪ್ರದಶ೯ನ ಮಾಡೋದು… ನಮ್ಮ ಉತ್ತರಕನ್ನಡದಲ್ಲಿ ಇದು ರೂಢಿ.
ಈಗ ಅಪ್ಪೆಮಿಡಿ ಮರಗಳೂ ಕಡಿಮೆಯಾಗಿವೆ… ಎರಡು ವಷ೯ವಾದರೂ ಕೆಡದೆ ಉಳಿವ ಜಾಡಿಗಟ್ಟಲೆ ಮಿಡಿರಸ ಮಾಡುವವರೂ ಕಾಣದಾಗಿದ್ದಾರೆ..





0 Comments