ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕವಿತೆಗಳ ಜೊತೆಗೆ ಚೇತನಾ

chetana2.jpg

 

 

 

 

——————————–

ವಧಿ ಬಳಗದ ಲೇಖಕಿ ಚೇತನಾ ತೀರ್ಥಹಳ್ಳಿ, ತಾವು ಬರೆದ ಒಂದಿಷ್ಟು ಕವಿತೆಗಳನ್ನು ಒಟ್ಟಿಗೆ ಹಿಡಿದು ನಿಂತಿದ್ದಾರೆ. ಸುಮಾರು ಮೂವತ್ತು ಕವಿತೆಗಳ ಪುಟ್ಟ ಸಂಕಲನ ಹೊರಬಂದಿದೆ. “ಉಫೀಟ್” ಎಂದು ಹೆಸರಿಟ್ಟಿದ್ದಾರೆ. ಚೇತನಾ ಲೇಖನಗಳನ್ನು ಓದಿ ಗೊತ್ತಿರುವವರಿಗೆ ಇಲ್ಲೂ ಅದೇ ಮೊನಚು, ಕಾವ್ಯಗುಣ, ಅದೆಲ್ಲಕ್ಕಿಂತ ಹೆಚ್ಚಾಗಿ ಹೆಣ್ಣೊಬ್ಬಳ ಚರಿತ್ರೆಯಾಳದ ಕನಸು ಮತ್ತು ಸಂಕಟಗಳು ಕಂಡಾವು. ಪುಸ್ತಕದ ಕುರಿತು ಹೆಚ್ಚಿನ ವಿವರಗಳಿಗೆ ದಯವಿಟ್ಟು ಬುಕ್ ಬಝಾರ್ ನೋಡಿ. ಸದ್ಯಕ್ಕೆ ಚೇತನಾ ಅವರ ಸಂಕಲನದ ಕವಿತೆಯೊಂದನ್ನು ಗಮನಿಸಿ.

———————————

chetana_coverone.jpg 

 

 

 

 

ಉಫೀಟ್!!

ಫೀಟ್!
ತಪ್ಪಿದಾಟಕ್ಕೆ ಮಾಫಿಯುಂಟು
ಮತ್ತೆ ಹೊಸತು ಶುರು.

ಚೌಕ ಚೌಕ
ಹೀಗೆ ಪಕ್ಕ ಪಕ್ಕ
ಎಷ್ಟೊಂದು ಮನೆ!

ಪ್ರತಿ ಮನೆಯ
ಚೌಕಟ್ಟು ಮೀರಬೇಕು
ಗೆರೆ ಹಾರಬೇಕು
ಚಪ್ಪೆ ಚಿಮ್ಮಿಸಿ ಒದೆಯಬೇಕು!

ಬಲಗಾಲಿಟ್ಟು
ಆಟ ಶುರು.

ಬಲಗಾಲಿಟ್ಟೇ
ಆಟ ಶುರು
ಇಲ್ಲೂ…

ಸೇರಕ್ಕಿ ಒದೆಯಬೇಕು
ಹೊಸಿಲು ದಾಟಬೇಕು
ಚೌಕಟ್ಟಲ್ಲಿ ನಿಲ್ಲಬೇಕು
ಬಾಗಿಲೊಳಗೆ.

ಎಲ್ಲೋ ಆಟ ತಪ್ಪಿತು…
ಉಫೀಟ್!!

ಹೆಜ್ಜೆ ತಪ್ಪಿಗೆ ಮಾಫಿಯಿಲ್ಲ,
ಮದುವೆಯೇನು ಆಟವೇ?
ಹೊಸ ಬಾಳಿಗೆ ಜಾಗವಿಲ್ಲ.

ಹನ್ನೆರಡು ಮನೆ
ಕುಂಟೋಪಿಲ್ಲೆಯ ಹುಡುಗಿ
ಹಿತ್ತಿಲಲ್ಲಿ ಕುಂಟುತ್ತಿದ್ದಾಳೆ,
ಆಟ ಸೋತಿದ್ದಾಳೆ.

‍ಲೇಖಕರು avadhi

17 November, 2007

6 Comments

  1. Vikram Hathwar

    ಚೇತನರ ಸಾಲುಗಳಲ್ಲಿ ಗಂಡಸು ಎನಿಸಿಕೊಂಡವರ ಎದೆ ಬಗೆಯಬಲ್ಲ ಭೀಮಶಕ್ತಿ ಇದೆ.

  2. jogi

    ವಿಜಿ,
    ನನಗೆ ಅರ್ಜೆಂಟಾಗಿ ಚೇತನಾ ಕವನ ಸಂಕಲನ ಬೇಕು. ಎಲ್ಲಿ ಸಿಗುತ್ತದೆ. ಕುತೂಹಲದಿಂದಿದ್ದೇನೆ. ವಿವರ ಕೊಡಿ, ಪ್ಲೀಸ್.
    ಜೋಗಿ

  3. sushma

    potent..like a strong slap on the face..

  4. Tina

    ಚೇತನಾ
    congrats ಕಣೆ! ಬಹಳ ಖುಶಿ ಆಯಿತು. ಸಂಕಲನದ ಹೆಸರು ಚೆನ್ನಾಗಿದೆ.

    ಟೀನಾ

  5. chetana thirthahalli

    Ellara preetige dhanyavada

  6. prasad

    its good ಚೇತನಾ ಚೆನ್ನಾಗಿದೆ ಖುಶಿ ಆಯಿತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading