ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕವಿತೆಗಳೇ ಹುಟ್ಟುತ್ತಿಲ್ಲ..

ಖಾಲಿಯಾದ ಕವಿತೆಯ ಖಯಾಲಿನಲಿ
ಜಬೀವುಲ್ಲಾ ಎಂ ಅಸದ್

ಈಗೀಗ ಕವಿತೆಗಳೇ ಹುಟ್ಟುತ್ತಿಲ್ಲ
ಪದಗಳೆಲ್ಲ ರೆಕ್ಕೆ ಚಿಗುರಿದ ಹಕ್ಕಿಗಳಾಗಿ
ಶಬ್ದಗಳೆಲ್ಲ ಮೌನಕೆ ಶರಣಾಗಿ
ಕತ್ತಲು ಬೆಳಕಿಗೆ ಬೆತ್ತಲಾಗಿ
ಬಯಲಾದ ಭಾವ ಮೊದಲಾಗಿ
ಎಲ್ಲಾ ಖಾಲಿ ಖಾಲಿ

ಕನಸಿನ ಹಕ್ಕಿ ಗಿರಕಿ ಹೊಡೆಯುವುದು
ಕವಿಯ ತಲೆಯ ಸುತ್ತ ಕೂಗುತ್ತ
ಕಲ್ಪನೆಯೊಂದೆ ಕವಿಯ ಬಲವಲ್ಲ
ಅದು ಬಲಹೀನತೆಯೂ ಹೌದು
ಅಹುದಲ್ಲ!

ಬದುಕಿನ ಘನತೆಯ ಅರಿವಿಲ್ಲದ
ವಾಸ್ತವದ ಪ್ರಜ್ಞೆ ಇರದ
ಬರಿಯೇ ಪದಗಳ ಚೋದ್ಯ
ಮನದ ಉಪಟಳವಷ್ಟೆ

ಕವಿತೆ…
ಭೂತ ವರ್ತಮಾನ ಭವಿಷ್ಯಗಳ
ಕೂಡು ಕೊಂಡಿಯಾಗಬೇಕು

‍ಲೇಖಕರು Admin

28 November, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading